ʻನೀವು ಬಂದಾಗಿನಿಂದಲೂ ಅರ್ಷದೀಪ್ ಸಿಂಗ್‌ಗೆ ಸ್ಥಾನ ಸಿಗುತ್ತಿಲ್ಲʼ-ಗೌತಮ್ ಗಂಭೀರ್ ವಿರುದ್ಧ ಆರ್ ಅಶ್ವಿನ್ ಕಿಡಿ!
ಯುಎಇ ವಿರುದ್ಧ 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಯುವ ವೇಗಿ ಅರ್ಷದೀಪ್ ಸಿಂಗ್‌ಗೆ ಸ್ಥಾನವನ್ನು ನೀಡದ ಬಗ್ಗೆ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಪ್ರಶ್ನೆ ಮಾಡಿದ್ದಾರೆ. ವಿಶೇಷವಾಗಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರನ್ನು ದೂರಿದ್ದಾರೆ.

ಅರ್ಷದೀಪ್ ಸಿಂಗ್ ಅವರ ಪರ ಬ್ಯಾಟ್ ಬೀಸಿದ ಆರ್ ಅಶ್ವಿನ್. -

ಬರಹ: ಕೆ. ಎನ್. ರಂಗು, ಚಿತ್ರದುರ್ಗ
ದುಬೈ: ಗೌತಮ್ ಗಂಭೀರ್ (Gautam Gambhir) ಭಾರತ ತಂಡದ ಹೆಡ್ ಕೋಚ್ ಆದಾಗಿನಿಂದಲೂ ತಂಡದ ಆಯ್ಕೆಯ ಕುರಿತು ಸಾಲು ಸಾಲು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸಂಜು ಸ್ಯಾಮ್ಸನ್ (Sanju Samson) ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆ ಮಾಡದ ಹಿನ್ನೆಲೆ ಹಲವರು ಗಂಭೀರ್ ವಿರುದ್ಧ ಹಲವು ಮಾಜಿ ಕ್ರಿಕೆಟಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಯುಎಇ ವಿರುದ್ಧ ಪಂದ್ಯಕ್ಕೆ ಯುವ ವೇಗಿ ಅರ್ಷದೀಪ್ ಸಿಂಗ್ (Arshadeep Singh) ಅವರನ್ನು ಆಯ್ಕೆ ಮಾಡದ ಬಗ್ಗೆ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ (Ravichandran Ashwin) ಖಂಡಿಸಿದ್ದಾರೆ. ಅರ್ಷದೀಪ್ ಸಿಂಗ್ 63 ಪಂದ್ಯಗಳಲ್ಲಿ 13.23ರ ಸರಾಸರಿಯಲ್ಲಿ 99 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಅವರು ಟಿ20ಐ ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಯುಎಇ ವಿರುದ್ಧ ಏಷ್ಯಾ ಕಪ್ ಟೂರ್ನಿಯ ಪಂದ್ಯಕ್ಕೆ ಹೆಡ್ ಕೋಚ್ ಗೌತಮ್ ಗಂಭಿರ್ ಆಯ್ಕೆ ಮಾಡಿದ ಪ್ಲೇಯಿಂಗ್ XI ನಿರ್ಧಾರವನ್ನು ಆರ್ ಅಶ್ವಿನ್ ಟೀಕಿಸಿದ್ದಾರೆ. ಯುವ ವೇಗಿ ಅರ್ಷದೀಪ್ ಸಿಂಗ್ ಅವರು ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಅವರನ್ನು ತಂಡದಿಂದ ಹೊರಗಿಡಲಿದೆ. ಅವರ ಪ್ರದರ್ಶನ ನಿರಾಶದಾಯಕವಾಗಿಲ್ಲದಿದ್ದರೂ ಅವರನ್ನು ತಂಡದಿಂದ ಕೈ ಬಿಡಲು ಕಾರಣವೇನೆಂಬುದು ಗೊತ್ತಿಲ್ಲ ಎಂದು ಸ್ಪಿನ್ ದಿಗ್ಗಜ ತಿಳಿಸಿದ್ದಾರೆ.
Asia Cup 2025: ಕುಲ್ದೀಪ್ ಯಾದವ್‌ಗೆ ಅನ್ಯಾಯವಾಗಿದೆ ಎಂದ ಅಜಯ್ ಜಡೇಜಾ!
ಅರ್ಷದೀಪ್ ಸಿಂಗ್ ಪರ ಬ್ಯಾಟ್ ಬೀಸಿದ ಅಶ್ವಿನ್
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಅಶ್ವಿನ್, "ಅರ್ಷದೀಪ್ ಅವರನ್ನು ಕೈಬಿಡಲಾಗಿದೆ ಎಂಬುದು ಆಶ್ಚರ್ಯಕರ, ಆದರೆ ಇದು ಹೊಸ ವಿಷಯವಲ್ಲ. ಗೌತಮ್ ಗಂಭೀರ್ ತರಬೇತಿ ನೀಡಲು ಆರಂಭಿಸಿದಾಗಿನಿಂದ ಇದು ನಡೆಯುತ್ತಿದೆ. ಅರ್ಷದೀಪ್ ಇಡೀ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ಒಂದು ಪಂದ್ಯವನ್ನು ಸಹ ಆಡಿರಲಿಲ್ಲ. ಇದು ಸ್ವಲ್ಪ ಮುಖ್ಯ ವಿಷಯವಾಗಿದೆ. ಬಹುಶಃ ದುಬೈ ಪರಿಸ್ಥಿತಿಗಳನ್ನು ಪರಿಗಣಿಸಿ, ಅವರು ಸ್ಪಿನ್ನರ್‌ಗಳಿಗೆ ಆಧ್ಯತೆ ನೀಡುತ್ತಿರಬಹುದು. ಗಂಭೀರ್ ಕೆಕೆಆರ್ ಪರ ಪ್ರಶಸ್ತಿಯನ್ನು ಗೆದ್ದಾಗ, ಅವರು ಸ್ಪಿನ್‌ಗೆ ಸಂಪೂರ್ಣವಾಗಿ ಸಿದ್ಧರಾಗಿದ್ದರು," ಎಂದು ಅಶ್ವಿನ್ ಹೇಳಿದ್ದಾರೆ.
2025ರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ತವರು ಸರಣಿಯಲ್ಲಿಯೂ ಅರ್ಷದೀಪ್ ಸಿಂಗ್ ಆಡಿರಲಿಲ್ಲ. ಇವರು ಕಳೆದುಕೊಂಡಿದ್ದ ಏಕೈಕ ತವರು ಸರಣಿ ಇದಾಗಿತ್ತು. ಈ ವರ್ಷದಲ್ಲಿ ಅವರು ಈವರೆಗೆ 3 ಟಿ20ಐ ಪಂದ್ಯಗಳನ್ನಾಡಿದ್ದು, ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಇನ್ನು ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದು, ಅದರಲ್ಲೂ ಕೂಡ ಎರಡು ವಿಕೆಟ್ ಕಬಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ದುಬೈ ಪ್ರಯಾಣ ಬೆಳೆಸಿದ ಅವರು ತಂಡದ ಭಾಗವಾಗಿದ್ದರು. ಆದರೆ ಹರ್ಷಿತ್ ರಾಣಾ ಮತ್ತು ಮೊಹಮ್ಮದ್ ಶಮಿ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ ಕಾರಣ ಅವರು ಅವಕಾಶ ವಂಚಿತರಾದರು.
Asia Cup 2025: ಕುಲ್ದೀಪ್ ಯಾದವ್ ಸ್ಪಿನ್ ಮೋಡಿಯಿಂದ ಭಾರತಕ್ಕೆ ಸುಲಭ ತುತ್ತಾದ ಯುಎಇ!
"ಟಿ20 ವಿಶ್ವಕಪ್‌ವರೆಗೂ ನಾವು ನೋಡಬಹುದಾದ ವಿಷಯ ಇದು. ಆದರೆ ಈ ಸಂಯೋಜನೆಯು ಉತ್ತಮ ತಂಡದ ವಿರುದ್ಧ ಕೆಲಸ ಮಾಡಬಹುದೇ ಎಂದು ನನಗೆ ಸಂದೇಹವಿದೆ. ಇದು ತುಂಬಾ ಅಪಾಯಕಾರಿ. ಅರ್ಷದೀಪ್ ಸಿಂಗ್ ಒಬ್ಬ ದೊಡ್ಡ ಪ್ರದರ್ಶನ ತೋರುವ ಆಟಗಾರ. ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಅಂತಹ ವ್ಯಕ್ತಿಯನ್ನು ಬಹಳ ಕಾಲ ಹೊರಗೆ ಇಡುವುದು ಕಷ್ಟಕರವಾಗಿರುತ್ತದೆ. ಶಿವಂ ದುಬೆ ಕೆಲವು ವಿಕೆಟ್‌ಗಳನ್ನು ಪಡೆದಿದ್ದಾರೆಂದು ನನಗೆ ತಿಳಿದಿದೆ, ಆದರೆ ಇದು ಬೌಲಿಂಗ್ ಸಂಯೋಜನೆಯಲ್ಲ ಎಂದು ನಾನು ಮನವರಿಕೆ ಮಾಡಿಕೊಳ್ಳುತ್ತೇನೆ," ಎಂದು ಅಶ್ವಿನ್ ವೇಗಿ ಹೇಳಿದ್ದಾರೆ.
ಆದರೆ ಭಾರತ ತಂಡ ಸದ್ಯದ ಬೌಲಿಂಗ್ ವಿಭಾಗ ಗಮನಿಸಿದರೆ ವೇಗಿ ಜಸ್‌ಪ್ರೀತ್ ಬುಮ್ರಾ, ಸ್ಪಿನ್ನರ್ ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್ ಹಾಗೂ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಅರ್ಷಲ್ ಪಟೇಲ್ ಮತ್ತು ಶಿವಂ ದುಬೆ ಒಳಗೊಂಡಂತೆ ಸಮತೋಲನವಾಗಿದೆ. ಇದರ ನಡುವೆ ವೇಗಿ ಸಿರಾಜ್ ಅವರು ತಂಡವನ್ನು ಕೂಡಿಕೊಂಡಿದ್ದರೆ, ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಇನ್ನಷ್ಟೂ ಬಲಿಷ್ಠವಾಗುತ್ತಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.