ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Duleep Trophy 2025: ಪೂರ್ವ ವಲಯ ತಂಡಕ್ಕೆ ಇಶಾನ್‌ ಕಿಶಾನ್‌ ನಾಯಕ, ಶಮಿ ಕಮ್‌ಬ್ಯಾಕ್‌!

ದೇಶಿ ಕ್ರಿಕೆಟ್‌ ರೆಡ್‌ ಬಾಲ್‌ ಟೂರ್ನಿಯಲ್ಲಿ ದುಲೀಪ್‌ ಟ್ರೋಫಿ ಟೂರ್ನಿಗೆ ಆಗಸ್ಟ್‌ 28 ರಂದು ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ. ಈಗಾಗಲೇ ಆರು ವಲಯದ ತಂಡಗಳು ತನ್ನ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿವೆ. ಇದೀಗ ಪೂರ್ವ ವಲಯ ತಂಡದ ನಾಯಕನಾಗಿ ಇಶಾನ್‌ ಕಿಶಾನ್‌ ನೇಮಕವಾಗಿದ್ದಾರೆ.

ದುಲೀಪ್‌ ಟ್ರೋಫಿಯ ಪೂರ್ವ ವಲಯಕ್ಕೆ ಇಶಾನ್‌ ಕಿಶನ್‌ ನಾಯಕ!

ದುಲೀಪ್‌ ಟ್ರೋಫಿ ಟೂರ್ನಿಯ ಪೂರ್ವ ವಲಯ ತಂಡಕ್ಕೆ ಇಶಾನ್‌ ಕಿಶನ್‌ ನಾಯಕ.

Profile Ramesh Kote Aug 2, 2025 3:24 PM

ನವದೆಹಲಿ: ದೇಶಿ ಟೆಸ್ಟ್‌ ಕ್ರಿಕೆಟ್‌ನ ಹಲವು ಟೂರ್ನಿಗಳಲ್ಲಿ ಒಂದಾಗಿರುವ ದುಲೀಪ್‌ ಟ್ರೋಫಿ (Duleep Trophy 2025) ಟೂರ್ನಿಯು ಆಗಸ್ಟ್‌ 28ರಂದು ಬೆಂಗಳೂರಿನಲ್ಲಿ ಅಧೀಕೃತವಾಗಿ ಆರಂಭವಾಗಲಿದೆ. ಇನ್ನು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪೂರ್ವ ವಲಯ ಹಾಗೂ ಉತ್ತರ ವಲಯ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಉಭಯ ತಂಡಗಳು 15 ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಪೂರ್ವ ತಯಾರಿ ನಡೆಸುತ್ತಿವೆ. ಇನ್ನು ಇದರ ನಡುವೆ ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ ರಾಜ್ಯಗಳನ್ನು ಪ್ರತಿನಿಧಿಸುವ ಪೂರ್ವ ವಲಯ (East zone) ತಂಡದ ನಾಯಕನಾಗಿ ಭಾರತ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶಾನ್‌ (Ishan Kishan) ನೇಮಕವಾಗಿದ್ದಾರೆ.

ಇಶಾನ್‌ ಕಿಶನ್‌ ಜೊತೆ ತಂಡದಲ್ಲಿ ಉಪನಾಯಕನಾಗಿ ಸಾಥ್‌ ನೀಡಲು ಬಂಗಾಳದ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್‌ ಅವರನ್ನುಆರಿಸಲಾಗಿದೆ. ಈ ಇಬ್ಬರೂ ಆಟಗಾರರಿಗೆ ತಂಡದಲ್ಲಿ ಜವಾಬ್ದಾರಿ ನೀಡಲಾಗಿದೆ. ಈಶ್ವರನ್‌ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಸ್ಥಿರ ಪ್ರದರ್ಶನ ತೋರಿದ್ದಾರೆ. ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಕಳೆದ ಕೆಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಈ ಇಬ್ಬರು ಯುವ ಆಟಗಾರರ ನೇತೃತ್ವದಲ್ಲಿ ಈ ಬಾರಿ ದುಲೀಫ್‌ ಟ್ರೋಫಿಯಲ್ಲಿ ಪೂರ್ವ ವಲಯ ಕಣಕ್ಕಿಳಿಯಲಿದ್ದು ತೀವ್ರ ಕುತೂಹಲ ಮೂಡಿಸಿದೆ.

IND vs ENG: ಸಿರಾಜ್‌-ಪ್ರಸಿಧ್‌ ಮಾರಕ ದಾಳಿಗೆ ಇಂಗ್ಲೆಂಡ್‌ 247ಕ್ಕೆ ಆಲ್‌ಔಟ್‌, ಭಾರತಕ್ಕೆ 52 ರನ್‌ ಮುನ್ನಡೆ!

ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?

ಇನ್ನು 15 ಆಟಗಾರರನ್ನೊಳಗೊಂಡಿರುವ ಈ ತಂಡದಲ್ಲಿ ಸ್ಟಾರ್‌ ಆಟಗಾರರ ದಂಡೇ ಇದೆ ಎನ್ನಬಹುದು. ಭಾರತದ ವೇಗಿ ಮೊಹಮ್ಮದ್‌ ಶಮಿ ದೀರ್ಘಾವಧಿ ದೇಶಿ ರೆಡ್‌ ಬಾಲ್‌ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಆದರೆ ಇದೀಗ ವಾಸ್ತವವಾಗಿ ಮತ್ತೆ ದೇಶಿ ರೆಡ್‌ ಬಾಲ್‌ ಕ್ರಿಕೆಟ್‌ಗೆ ಮರಳಿದ್ದು, ಪೂರ್ವ ವಲಯದ ತಂಡದ ಪರ ಕಣಕ್ಕಿಳಿಯಲಿದ್ದಾರೆ. 2024ರಲ್ಲಿ ಶಮಿಯವರು ಕೊನೆಯ ಬಾರಿಗೆ ರೆಡ್‌ ಬಾಲ್‌ನಲ್ಲಿ ಬೌಲಿಂಗ್‌ ಮಾಡಿದ್ದರು. ಆದರೆ ಇದೀಗ ಪೂರ್ವ ವಲಯ ತಂಡಕ್ಕೆ ಅವರ ಬರುವಿಕೆ ಮುಖೇಶ್‌ ಕುಮಾರ್‌ ಮತ್ತು ಆಕಾಶ್‌ ದೀಪ್‌ ಅವರನ್ನು ಒಳಗೊಂಡ ವೇಗದ ಬೌಲಿಂಗ್‌ ವಿಭಾಗಕ್ಕೆ ಪುಷ್ಠಿ ನೀಡಿದೆ.

ಇನ್ನು ಆಲ್‌ರೌಂಡರ್‌ ವಿಭಾಗದಲ್ಲಿ ರಿಯಾನ್‌ ಪರಾಗ್‌, ಎಡಗೈ ಸ್ಪಿನ್‌ ಬೌಲರ್‌ ಮನಿಷಿ, ವಿರಾಟ್‌ ಸಿಂಗ್‌ ಮತ್ತು ಶರಣ್‌ ದೀಪ್‌ ಸಿಂಗ್‌ರಂತಹ ಸ್ಥಿರ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಹೊಂದಿದೆ. ನಂತರ ಆರು ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಕಳೆದ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್‌ ತಂಡದ ಆರಂಭಿಕನಾಗಿ ಕಣಕ್ಕಿಳಿದು ತೀರಾ ಸೇನ್ಸೇಷನ್‌ ಕ್ರಿಯೆಟ್‌ ಮಾಡಿದ್ದ 14ರ ವಯಸ್ಸಿನ ವೈಭವ್‌ ಸೂರ್ಯವಂಶಿ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಚ್ಚರಿ ಏನೆಂದರೆ ಇತ್ತೀಚಿಗೆ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಯೂತ್‌ ಏಕದಿನ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದ, ಯುವ ಆಟಗಾರನನ್ನು ಬ್ಯಾಕ್‌ಅಪ್‌ ಆಟಗಾರನನ್ನಾಗಿ ಇಟ್ಟುಕೊಳ್ಳಲಾಗಿದೆ.

Duleep Trophy: ಪಶ್ಚಿಮ ವಲಯ ತಂಡದಿಂದ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಔಟ್‌!

2025-26ರ ದುಲೀಪ್ ಟ್ರೋಫಿಯ ಪೂರ್ವ ವಲಯ

ಇಶಾನ್ ಕಿಶನ್ (ನಾಯಕ), ಅಭಿಮನ್ಯು ಈಶ್ವರನ್ (ಉಪ ನಾಯಕ), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡ್ಯಾನಿಶ್ ದಾಸ್, ಶ್ರೀದಾಮ್ ಪಾಲ್, ಶರಣದೀಪ್ ಸಿಂಗ್, ಕುಮಾರ್ ಕುಶಾಗ್ರಾ, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್, ಮನಿಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಶಮಿ

ಸ್ಟ್ಯಾಂಡ್‌ಬೈ: ಮುಖ್ತಾರ್ ಹುಸೇನ್, ಆಸಿರ್ವಾದ್ ಸ್ವೈನ್, ವೈಭವ್ ಸೂರ್ಯವಂಶಿ, ಸ್ವಸ್ತಿಕ್ ಸಮಲ್, ಸುದೀಪ್ ಕುಮಾರ್ ಘರಾಮಿ, ರಾಹುಲ್ ಸಿಂಗ್