ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Coolie Trailer Out: ʼಕೂಲಿʼ ಚಿತ್ರದ ಟ್ರೈಲರ್‌ ಔಟ್‌; ಮತ್ತೊಮ್ಮೆ ಮಾಸ್‌ ಅವತಾರದಲ್ಲಿ ರಜನಿಕಾಂತ್‌: ರಚಿತಾ ರಾಮ್‌ ಅಭಿಮಾನಿಗಳಿಗಿದೆ ಸಖತ್‌ ಸರ್‌ಪ್ರೈಸ್‌

Actor Rajinikanth: ಈ ವರ್ಷದ ಬಹುನಿರೀಕ್ಷಿತ, ರಜನಿಕಾಂತ್‌ ಅಭಿನಯದ ಕೂಲಿ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಲೋಕೇಶ್‌ ಕನಗರಾಜ್‌ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್‌ ಮಾಸ್‌ ಅವತಾರಣದಲ್ಲಿ ಕಾಣಿಸಿಕೊಂಡಿದ್ದು, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಅವರ ಪಾತ್ರ ಗಮನ ಸೆಳೆದಿದ್ದು, ಟೈಟಲ್‌ ಕಾರ್ಡ್‌ನಲ್ಲಿ ಹೆಸರಿಲ್ಲದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ʼಕೂಲಿʼ ಚಿತ್ರದ ಟ್ರೈಲರ್‌ ಔಟ್‌; ಮಾಸ್‌ ಅವತಾರದಲ್ಲಿ ರಜನಿಕಾಂತ್‌

Ramesh B Ramesh B Aug 2, 2025 7:50 PM

ಚೆನ್ನೈ: ಕಾಲಿವುಡ್‌ ಸೂಪರ್ ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಅಭಿಮಾನಿಗಳ ಬಹುದಿನಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಭಾರತೀಯ ಚಿತ್ರರಂಗದಲ್ಲೇ ಭಾರಿ ಕುತೂಹಲ ಕೆರಳಿಸಿದ್ದ ರಜನಿಕಾಂತ್‌ ಅಭಿನಯದ ʼಕೂಲಿʼ (Coolie Movie) ತಮಿಳು ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಕಾಲಿವುಡ್‌ನಲ್ಲಿ ಹೊಸ ಅಲೆಯ ಚಿತ್ರಗಳ ಮೂಲಕ ಗಮನ ಸೆಳೆದ ಲೋಕೇಶ್‌ ಕನಗರಾಜ್‌ (Lokesh Kanagaraj) ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್‌ ಮತ್ತೊಮ್ಮೆ ಆ್ಯಕ್ಷನ್‌ ಅವತಾರ ತಾಳಿದ್ದು, ಎಂದಿನಂತೆ ತಮ್ಮದೇ ಸ್ಟೈಲ್‌ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಹುತಾರಾಗಣದ ಮೂಲಕ ಈಗಾಗಲೇ ನಿರೀಕ್ಷೆ ಮೂಡಿಸಿದ್ದ ಸಿನಿತಂಡ ಇದೀಗ ಟ್ರೈಲರ್‌ ಮೂಲಕ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್‌ ನೀಡಿದೆ (Coolie Trailer Out). ವಿಶೇಷ ಎಂದರೆ ಟ್ರೈಲರ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ (Rachita Ram) ಕೂಡ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ.

'ಕೂಲಿ' ಸಿನಿಮಾ ಮೂಲಕ ರಚಿತಾ ರಾಮ್‌ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಆರಂಭದಲ್ಲೆ ಹಬ್ಬಿತ್ತು. ಅವರು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಅವರಾಗಲೀ, ಚಿತ್ರತಂಡವಾಗಲೀ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಅವರ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರವೇನು ಎನ್ನುವುದು ಸ್ಪಷ್ಟವಾಗಿಲ್ಲ. ಸರಳ ವೇಷಭೂಷಣದಲ್ಲಿ ಅವರು ಕಂಡುಬಂದಿದ್ದು, ಇದು ಯಾವ ರೀತಿಯ ಪಾತ್ರ ಎನ್ನುವ ಬಗ್ಗೆ ಕುತೂಹಲ ಗರಿಗೆದರಿದೆ. ಅದಾಗ್ಯೂ ಟೈಟಲ್‌ ಕಾರ್ಡ್‌ನಲ್ಲಿ ಅವರ ಹೆಸರಿಲ್ಲದಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ʼಕೂಲಿʼ ಚಿತ್ರದ ಟ್ರೈಲರ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Coolie Movie: ಅಬ್ಬಬ್ಬಾ! 'ಕೂಲಿ' ಸೆಟ್‌ಗೆ ಮಾಸ್ ಆಗಿ ಎಂಟ್ರಿ ಕೊಟ್ಟ ತಲೈವಾ; ಇಲ್ಲಿದೆ ವಿಡಿಯೊ

ರಜನಿಕಾಂತ್‌ ನಟನೆಯ 171ನೇ ಚಿತ್ರ

ಸೆಟ್ಟೇರಿದಾಗಿನಿಂದಲೇ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ ʼಕೂಲಿʼ. ರಜನಿಕಾಂತ್‌ ನಾಯಕನಾಗಿ ನಟಿಸಿರುವ 171ನೇ ಚಿತ್ರ ಇದು ಎನ್ನುವುದು ಮತ್ತೊಂದು ವಿಶೇಷ. ಈ ವರ್ಷ ರಿಲೀಸ್‌ ಆಗಲಿರುವ ಅವರ ಮೊದಲ ಸಿನಿಮಾ. ಇದೀಗ ಟ್ರೈಲರ್‌ ನಿರೀಕ್ಷೆಯಂತೆಯೇ ಮೂಡಿ ಬಂದಿದ್ದು, ರಜನಿಕಾಂತ್‌ ಮಾಸ್‌ ಅವತಾರದಲ್ಲಿ ಮೋಡಿ ಮಾಡಿದ್ದಾರೆ. ಮಾಜಿ ಸ್ಮಗ್ಲರ್‌ ತನ್ನ ತಂಡದೊಂದಿಗೆ ಮತ್ತೆ ಫೀಲ್ಡ್‌ಗೆ ಇಳಿಯುವ ಕಥೆಯನ್ನು ಇದು ಒಳಗೊಂಡಿದೆ. ಕಾರ್ಮಿಕರ ರಕ್ಷಣೆಗೆ ಕೂಲಿಯಾಗಿ ರಜನಿಕಾಂತ್‌ ಧಾವಿಸುತ್ತಿರುವುಸು ಟ್ರೈಲರ್‌ನಲ್ಲಿ ಕಂಡುಬಂದಿದೆ.

ಈ ಚಿತ್ರದಲ್ಲಿ ವಿವಿಧ ಚಿತ್ರರಂಗದ ಸೂಪರ್‌ ಸ್ಟಾರ್‌ಗಳು ಬಣ್ಣ ಹಚ್ಚಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ರಚಿತಾ ರಾಮ್‌ ಜತೆಗೆ ರಿಯಲ್‌ ಸ್ಟಾರ್‌ ಉಪೇಂದ್ರ ಕೂಡ ಅಭಿನಯಿಸಿದ್ದಾರೆ. ಟಾಲಿವುಡ್‌ ಸ್ಟಾರ್‌ ನಾಗಾರ್ಜುನ್‌, ಮಲಯಾಳಂ ಸ್ಟಾರ್‌ ಸೌಬಿನ್‌ ಶಾಹಿರ್‌, ಶ್ರುತಿ ಹಾಸನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಆಮೀರ್‌ ಖಾನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಹುಭಾಷಾ ನಟಿ ಪೂಜಾ ಹೆಗ್ಡೆ ವಿಶೇಷ ಹಾಡಿಗೆ ಸೊಂಟ ಬಳುಕಿಸಿದ್ದಾರೆ.

ಆಸ್ಟ್‌ 14ರಂದು ರಿಲೀಸ್‌

ಸನ್‌ ಪಿಕ್ಚರ್ಸ್‌ ಅದ್ಧೂರಿಯಾಗಿ ನಿರ್ಮಿಸಿರುವ ಕಾಲಿವುಡ್‌ನ ಈ ಸಿನಿಮಾ ವಿವಿಧ ಭಾಷೆಗಳಲ್ಲಿ ಆಗಸ್ಟ್‌ 14ರಂದು ತೆರೆಗೆ ಬರಲಿದೆ. ಅನಿರುದ್ಧ್‌ ಸಂಗೀತ ನೀಡಿದ್ದು, ಈಗಾಗಲೇ ರಿಲೀಸ್‌ ಆಗಿರುವ ಹಾಡುಗಳು ಹಿಟ್‌ ಲಿಸ್ಟ್‌ ಸೇರಿವೆ. ಪೂಜಾ ಹೆಗ್ಡೆ ಮೋನಿಕಾ ಅವತಾರದಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ. ʼಕೂಲಿʼ ಮೂಲಕ ರಜನಿಕಾಂತ್‌ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಲಿದ್ದಾರೆ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ.