IND vs ENG: ಮೊದಲನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI ಪ್ರಕಟ!
England Playing XI for 1st test: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್ ತಂಡ ತನ್ನ ಪ್ಲೇಯಿಂಗ್ XIಅನ್ನುಎರಡು ದಿನಕ್ಕೂ ಮೊದಲೇ ಪ್ರಕಟಿಸಿದೆ.

ಭಾರತ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI ಪ್ರಕಟ.

ಲೀಡ್ಸ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಮೊದಲನೇ ಟೆಸ್ಟ್ ಪಂದ್ಯ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್ ತಂಡ, ತನ್ನ ಪ್ಲೇಯಿಂಗ್ xi (England Playing XI) ಅನ್ನು ಎರಡು ದಿನಗಳ ಮೊದಲೇ ಪ್ರಕಟಿಸಿದೆ. ಜಾಕೋಬ್ ಬೆಥೆಲ್ ಪ್ಲೇಯಿಂಗ್ xiನಿಂದ ಕೈ ಬಿಡಲಾಗಿದ್ದು, ಒಲ್ಲೀ ಪೋಪ್ ( Ollie Pope) ಅವರು ಮೂರನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಸೀಮ್ ಬೌಲಿಂಗ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಕೂಡ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
ಜಾಕೋಬ್ ಬೆಥೆಲ್ ಅವರು ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮೂರು ಅರ್ಧಶತಕಗಳನ್ನು ಭಾರಿಸಿದ್ದರು. ಆ ಮೂಲಕ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು. ಆದರೆ, ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಒಲ್ಲೀ ಪೋಪ್ ಅವರು 171 ರನ್‌ಗಳನ್ನು ಬಾರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಇದೀಗ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XIನಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ.
IND vs ENG: ಮೊದಲನೇ ಟೆಸ್ಟ್‌ಗೆ ತಮ್ಮ ನೆಚ್ಚಿನ ಪ್ಲೇಯಿಂಗ್ XI ಆರಿಸಿದ ವಸೀಮ್ ಜಾಫರ್!
ಕ್ರಿಸ್ ವೋಕ್ಸ್ ಕಮ್‌ಬ್ಯಾಕ್
ಕಳೆದ ಡಿಸೆಂಬರ್ ಬಳಿಕ ಇದೇ ಮೊದಲ ಬಾರಿ ಕ್ರಿಸ್ ವೋಕ್ಸ್ ಅವರು ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದ ಬ್ರೈಡನ್ ಕಾರ್ಸ್ ಅವರು ಕೂಡ ಲೀಡ್ಸ್‌ನಲ್ಲಿ ಮೊದಲನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಜಾಶ್ ಟಾಂಗ್ ಹಾಗೂ ಶೋಯೆಬ್ ಬಷಿರ್ ಅವರು ಕೂಡ ಇಂಗ್ಲೆಂಡ್ ಪ್ಲೇಯಿಂಗ್ xiನಲ್ಲಿ ಸ್ಥಾನವನ್ನು ಪಡೆದಿದ್ದು, ಕೆಲ ಓವರ್‌ಗಳನ್ನು ಬೌಲ್ ಮಾಡಲಿದ್ದಾರೆ.
"ಶುಕ್ರವಾರ ಹೆಡಿಂಗ್ಲೆಯಲ್ಲಿ ಭಾರತದ ವಿರುದ್ಧ ಆಡಲಿರುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI ಖಚಿತವಾಗಿದೆ. ವಾರ್ವಿಕ್‌ಶೈರ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಡಿಸೆಂಬರ್ ಬಳಿಕ ಇದೇ ಮೊದಲ ಬಾರಿ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XIಗೆ ಮರಳಿದ್ದಾರೆ. ಡುರ್ಹಾಮ್ ಸ್ಪಿನ್ನರ್ ಬ್ರೈಡನ್ ಕಾರ್ಸ್ ಅವರು ಕೂಡ ತವರಿನಲ್ಲಿ ತಮ್ಮ ಮೊದಲನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಇವರು ಆಡಿದ್ದರು.
Team news from Leeds ahead of a BIG week 📋
— England Cricket (@englandcricket) June 18, 2025
Ready to face @BCCI 👊
ಭಾರತದ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ xi
ಬೆನ್ ಡಕೆಟ್, ಝ್ಯಾಕ್ ಕ್ರಾವ್ಲಿ, ಒಲ್ಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಜೇಮಿ ಸ್ಮಿತ್ (ವಿ.ಕೀ), ಕ್ರಿಸ್ ವೋಕ್ಸ್, ಬ್ರೈಡೆನ್ ಕಾರ್ಸ್, ಜಾಶ್ ಟಾಂಗ್, ಶೋಯೆಬ್ ಬಷಿರ್
ಭಾರತ ತಂಡದ ಪ್ಲೇಯಿಂಗ್ XI ರಿವೀಲ್ ಯಾವಾಗ?
ಇನ್ನು ಶುಭಮನ್ ಗಿಲ್ ನಾಯಕತ್ವದ ಭಾರತ ತಂಡದ ಪ್ಲೇಯಿಂಗ್ xi ಅನ್ನು ಪಂದ್ಯದ ಟಾಸ್ ವೇಳೆ ರಿವೀಲ್ ಆಗಲಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆಂದು ಉಪ ನಾಯಕ ರಿಷಭ್ ಪಂತ್ ಬಹಿರಂಗಪಡಿಸಿದ್ದಾರೆ.