ʻನನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರುʼ: ಎಂಎಸ್ ಧೋನಿಗೆ ಕೃತಜ್ಞತೆ ಸಲ್ಲಿಸಿದ ಮೊಹಮ್ಮದ್ ಸಿರಾಜ್!
ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೃತ್ತಿ ಜೀವನದ ಆರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸಾಕಷ್ಟು ಟ್ರೋಲ್ ಹಾಗೂ ಟೀಕೆಗಳಿಗೆ ಗುರಿಯಾಗಿದ್ದರು. ಇಂಥಾ ಸನ್ನಿವೇಶಗಳನ್ನು ಹೇಗೆ ನಿರ್ವಹಿಸಬೇಕೆಂದು ಎಂಎಸ್ ಧೋನಿ ಹೇಳಿಕೊಟ್ಟಿದ್ದರು ಎಂದು ಸಿರಾಜ್ ಇದೀಗ ಬಹಿರಂಗಪಡಿಸಿದ್ದಾರೆ.

ಎಂಎಸ್ ಧೋನಿ ನೀಡಿದ್ದ ಸಲಹೆಯನ್ನು ಸ್ಮರಿಸಿದ ಮೊಹಮ್ಮದ್ ಸಿರಾಜ್. -

ನವದೆಹಲಿ: ತಮ್ಮ ಕ್ರಿಕೆಟ್ ವೃತ್ತಿ ಜೀವನದ ಆರಂಭದ ಕಠಿಣ ದಿನಗಳಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಹೇಗೆ ಸಹಾಯ ಮಾಡಿದ್ದರು ಎಂಬುದು ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಬಹಿರಂಗಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಸದ್ಯ ಭಾರತ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಅವರು ಇತ್ತೀಚೆಗೆ ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಭಾರತ ತಂಡ 2-2 ಅಂತರದಲ್ಲಿ ಡ್ರಾ ಮಾಡಿಕೊಳ್ಳಲು ನೆರವು ನೀಡಿದ್ದರು. ಅಲ್ಲದೆ ಕಳೆದ ವಾರ ವೆಸ್ಟ್ ಇಂಡೀಸ್ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs WI) 7 ವಿಕೆಟ್‌ಗಳನ್ನು ಕಬಳಿಸಿದ್ದರು.
ಹೈದರಾಬಾದ್ ಮೂಲದ ವೇಗದ ಬೌಲರ್ 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ 2.2 ಕೋಟಿ ರೂ.ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದರು. ಇವರು ಆರ್‌ಸಿಬಿ ಪರ ಉತ್ತಮ ಆರಂಭವನ್ನು ಪಡೆದಿರಲಿಲ್ಲ. ಈ ಸೀಸನ್‌ನಲ್ಲಿ ಅವರು ಪಡೆದಿದ್ದು 11 ವಿಕೆಟ್‌ಗಳು ಮಾತ್ರ. ಆದರೆ, ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇವರು ಆರ್‌ಸಿಬಿ ವಿಫಲರಾದ ಬಳಿಕ ಅಭಿಮಾನಿಗಳು ಸಿರಾಜ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಹಾಗೂ ಟೀಕೆ ಮಾಡಿದ್ದರು. ಸಾಕಷ್ಟು ಮಂದಿ ಸಿರಾಜ್ ಅವರ ತಂದೆಯನ್ನು ಕೂಡ ಟೀಕಿಸಿದ್ದರು.
IND vs WI: ಮೊದಲನೇ ಟೆಸ್ಟ್ ಗೆದ್ದರೂ ಒಂದು ವಿಚಾರದ ಬಗ್ಗೆ ಶುಭಮನ್ ಗಿಲ್ ಬೇಸರ!
"ಐಪಿಎಲ್ ಆರಂಭದಲ್ಲಿ ನನ್ನ ಪಾಲಿನ ಸಂಗತಿಗಳು ಉತ್ತಮವಾಗಿರಲಿಲ್ಲ, ಹಾಗಾಗಿ ನಾನು ಸಾಕಷ್ಟು ಟ್ರೋಲ್‌ಗಳಿಗೆ ಗುರಿಯಾಗಿದ್ದೆ. ಒಂದು ದಿನ ಸಿರಾಜ್ ಅವರಂಥ ಬೌಲರ್ ಇಲ್ಲವೇ ಇಲ್ಲ ಎಂದು ಒಬ್ಬರು ಟೀಕಿಸಿದ್ದರು. ಮುಂದಿನ ಪಂದ್ಯಗಳಲ್ಲಿ ನಾನು ಉತ್ತಮ ಪ್ರದರ್ಶನವನ್ನು ತೋರಿಲ್ಲವಾದರೆ, ಆಗ ಜನ ನನ್ನನ್ನು, ʻನಿಮ್ಮ ತಂದೆಯ ಜೊತೆ ಹೋಗಿ ಆಟೋ ಓಡಿಸಿ,ʼ ಎಂದು ಹೇಳಿದ್ದರು. ಇದರಲ್ಲಿ ಯಾವ ಅಂಶ ಇದೆ?," ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಿರಾಜ್ ತಿಳಿಸಿದ್ದಾರೆ.
ಆ ವರ್ಷದ ಅಂತ್ಯದಲ್ಲಿ ಮೊಹ್ಮಮ್ಮದ್ ಸಿರಾಜ್ ಭಾರತ ತಂಡಕ್ಕೆ ಸೇರ್ಪಡೆಯಾದರು. ಈ ವೇಳೆ ಎಂಎಸ್ ಧೋನಿ, ಸಿರಾಜ್‌ಗೆ ಅತ್ಯುತ್ತಮ ಸಲಹೆಯನ್ನು ನೀಡಿದ್ದರು. ಹೊರಗಡೆಯ ಮಾತುಗಳಿಗೆ ನೀವು ಗಮನ ಕೊಡಬೇಡಿ, ನಿಮ್ಮ ಪ್ರದರ್ಶನದ ಬಗ್ಗೆ ಮಾತ್ರ ಗಮನ ಕೊಡಿ ಎಂದು ಸಲಹೆ ನೀಡಿದ್ದರು. ಇದಾದ ಬಳಿಕ ನಾನು ನನ್ನ ಸಹ ಆಟಗಾರರು ಅಗೂ ಕುಟುಂಬ ಬಗ್ಗೆ ಮಾತ್ರ ಗಮನ ಕೊಡುತ್ತೇನೆ ಎಂದು ಸಿರಾಜ್ ಹೇಳಿಕೊಂಡಿದ್ದಾರೆ.
IND vs WI: ವಿಂಡೀಸ್ ಬ್ಯಾಟಿಂಗ್ ವೈಫಲ್ಯ, ಇನಿಂಗ್ಸ್ ಅಂತರದಲ್ಲಿ ಮೊದಲನೇ ಟೆಸ್ಟ್ ಗೆದ್ದ ಭಾರತ!
"ನಾನು ಭಾರತ ತಂಡಕ್ಕೆ ಸೇರಿದಾಗ, ಎಂಎಸ್ ಧೋನಿ ನನಗೆ ಹೇಳಿದ್ದು ನನಗೆ ಇನ್ನೂ ನೆನಪಿದೆ, 'ಇತರರು ಏನು ಹೇಳುತ್ತಾರೆಂದು ಗಮನಿಸಬೇಡಿ. ನೀವು ಚೆನ್ನಾಗಿ ಬೌಲ್ ಮಾಡಿದಾಗ, ಎಲ್ಲರೂ ನಿಮ್ಮೊಂದಿಗಿರುತ್ತಾರೆ. ನೀವು ವಿಫಲವಾದಾಗ, ಅವರು ಮೊದಲು ನಿಮ್ಮನ್ನು ನಿಂದಿಸುತ್ತಾರೆʼ ಎಂದು ಹೇಳಿದ್ದರು. ನನಗೆ ಹೊರಗಿನ ಹೊಗಳಿಕೆ ಅಗತ್ಯವಿಲ್ಲ. ನನ್ನ ತಂಡದ ಸದಸ್ಯರು ಮತ್ತು ಕುಟುಂಬ ಏನು ಯೋಚಿಸುತ್ತದೆ- ಅದು ಮುಖ್ಯ ಎಂದು ಆಗ ನಾನು ನಿರ್ಧರಿಸಿದೆ," ಎಂದು ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ 23 ವಿಕೆಟ್ ಕಿತ್ತಿದ್ದ ಸಿರಾಜ್
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಐದು ಟೆಸ್ಟ್ ಪಂದ್ಯಗಳಿಂದ 23 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ, ಅಕ್ಟೋಬರ್ 2 ರಿಂದ 4ರವರೆಗೆ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ಸಿರಾಜ್ ಮಾರಕ ದಾಳಿ ನಡೆದಿ 7 ವಿಕೆಟ್‌ಗಳನ್ನು ಕಬಳಿಸಿದ್ದರು. ಪಂದ್ಯದ ಮೊದಲನೇ ದಿನ ಅವರು 40 ರನ್ ನೀಡಿ 4 ವಿಕೆಟ್ ಕಿತ್ತಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ 31 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 40 ರನ್‌ಗಳಿಂದ ಗೆದ್ದು ಬೀಗಿತ್ತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ. ಒಟ್ಟಾರೆ, ಇವರು ಈ ಪಂದ್ಯದಲ್ಲಿ 71 ರನ್ ನೀಡಿ 7 ವಿಕೆಟ್ ಕಬಳಿಸಿದ್ದರು.