ಎಂಎಸ್ ಧೋನಿಯಿಂದ ಕಲಿತ ಸಂಗತಿಯನ್ನು ರಿವೀಲ್ ಮಾಡಿದ ಸಾಯಿ ಕಿಶೋರ್!
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ಎಂಎಸ್ ಧೋನಿಯವರ ಜೊತೆಗೆ ಕಳೆದ ಸಮಯವನ್ನು ಗುಜರಾತ್ ಟೈಟನ್ಸ್ ಸ್ಪಿನ್ನರ್ ಸಾಯಿ ಸುದರ್ಶನ್ ನೆನಪಿಸಿಕೊಂಡಿದ್ದಾರೆ. ಅವರು ನನಗೆ ಸಾಮಜಿಕ ಜಾಲತಾಣದಿಂದ ದೂರ ಇರುವಂತೆ ಹೇಳಿದ್ದರು. ಅದರಂತೆ ನಾನು ಹೆಚ್ಚು ಕಾಲ ಮೊಬೈಲ್ ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಎಂಎಸ್ ಧೋನಿಯಿಂದ ಕಲಿತ ಸಂಗತಿಯನ್ನು ರಿವೀಲ್ ಮಾಡಿದ ಸಾಯಿ ಸುದರ್ಶನ್. -

ದುಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಸಾಮಾನ್ಯವಾಗಿ ಬಹುತೇಕ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಸೇರಿದಂತೆ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಕ್ರಿಯರಾಗಿರುತ್ತಾರೆ. ಆದರೆ ಎಂಎಸ್ ಧೋನಿಯವರು ಸೋಶಿಯಲ್ ಮೀಡಿಯಾದಿಂದ ಅಂತರ ಕಾಪಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಆಟಗಾರ ಸಾಯಿ ಕಿಶೋರ್ Sai Kishore) ಮಾತನಾಡಿದ್ದಾರೆ. ಕಿಶೋರ್ ಸಿಎಸ್‌ಕೆ ಪರ ಒಂದೇ ಒಂದು ಪಂದ್ಯ ಮಾತ್ರ ಆಡಿದ್ದರೂ, ಧೋನಿಯವರನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಧೋನಿಯವರ ಬಳಿ ಸಾಮಾಜಿಕ ಜಾಲತಾಣದಿಂದ ಹೇಗೆ ದೂರವಿರಬೇಕೆಂದು ಕಲಿತ ಬಗ್ಗೆ ವಿವರಿಸಿದ್ದಾರೆ.
ಈ ಕುರಿತು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ ಕಿಶೋರ್, "ನಾನು ಧೋನಿಯಿಂದ ಇದರ ಬಗ್ಗೆ ಬಹಳಷ್ಟು ಕಲಿತಿದ್ದೇನೆ. ಅವರು ಎಂದಿಗೂ ತಮ್ಮ ಫೋನ್ ಅನ್ನು ಎತ್ತುತ್ತಿರಲಿಲ್ಲ. ಅವರು ತಮ್ಮ ಫೋನ್ ಅನ್ನು ತಮ್ಮ ಹೋಟೆಲ್ ಕೋಣೆಯಲ್ಲಿ ಬಿಟ್ಟು ಪಂದ್ಯಗಳಿಗೆ ಬರುತ್ತಿದ್ದರು. ಅವರು ಅಷ್ಟು ನಿರ್ಲಿಪ್ತರಾಗಿರುತ್ತಿದ್ದರು. ಇದು ನನಗೆ ಸ್ಫೂರ್ತಿ ನೀಡಿತು. ಏಕೆಂದರೆ, ನಾನು ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆಯೇ ಎಂದು ನನ್ನನ್ನು ಕೇಳಿಕೊಳ್ಳುತ್ತಿದ್ದೆ. ಆದ್ದರಿಂದ ಅವರನ್ನು ನೋಡುವುದು ನನಗೆ ಸ್ಫೂರ್ತಿ ನೀಡಿತು," ಎಂದು ಹೇಳಿದ್ದಾರೆ.
IND vs WI 1st Test: ವಿಂಡೀಸ್ ಎದುರು ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಭಾರತ ತಂಡ!
ಸಾಯಿ ಕಿಶೋರ್ 2022ರ ಸೀಸನ್‌ಗೂ ಮುಂಚಿತವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ಗುಜರಾತ್ ಟೈಟನ್ಸ್ ತಂಡವನ್ನು ಸೇರಿದರು ಮತ್ತು 2022 ರಿಂದ 2024 ರವರೆಗೆ ಟೈಟನ್ಸ್ ಪರ 25 ಪಂದ್ಯಗಳನ್ನಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಜೊತೆ ಕಿರಿಕ್ ಬಗ್ಗೆ ಪ್ರತಿಕ್ರಿಯೆ
2025ರ ಐಪಿಎಲ್ ಸಮಯದಲ್ಲಿ ಜಿಟಿ ಮತ್ತು ಎಂಐ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಡಾಟ್ ಬಾಲ್ ಎಸೆದ ನಂತರ, ಜಿಟಿ ಸ್ಪಿನ್ನರ್ ಎಂಐ ನಾಯಕನ ಕಡೆಗೆ ದೀರ್ಘವಾಗಿ ನೋಡಿದ್ದರು. ಹಾರ್ದಿಕ್, ಸಾಯಿ ಕಿಶೋರ್ ಅವರನ್ನು ಮಾತಿನ ಮೂಲಕ ಟೀಕಿಸಿ ಪ್ರತಿಕ್ರಿಯಿಸಿದರು. ಈ ಕುರಿತು ಮಾತನಾಡಿದ ಕಿಶೋರ್, "ಅವರು, ನನ್ನ ಜೊತೆ ಯಾಕೆ ಜಗಳವಾಡುತ್ತಿದ್ದೀರಿ? ಬೇರೆಯವರನ್ನು ಆರಿಸಿ' ಎಂದು ಹೇಳಿದ್ದರು. ಅದು ಆಟದ ಸಮಯದಲ್ಲಿ ಬಿಸಿ ಕ್ಷಣವಾಗಿತ್ತು, ಅದು ಸಂಭವಿಸುತ್ತದೆ. ನಾವು ಅದನ್ನು ಎಂದಿಗೂ ಆಟದ ಮೈದಾನದ ಹೊರಗೆ ತೆಗೆದುಕೊಂಡು ಹೋಗುವುದಿಲ್ಲ. ಅವರು ನನಗೆ ಅವರ ಬ್ಯಾಟ್ ನೀಡುತ್ತಾರೆ ಮತ್ತು ನನ್ನ ಬ್ಯಾಟ್ ಮುರಿದಿದೆ ಎಂದು ನಾನು ಅವರ ಬಳಿ ಹೊಸ ಬ್ಯಾಟ್ ಕೇಳಿದ್ದೇನೆ. ಅವರು ತುಂಬಾ ಆತ್ಮೀಯ ಸ್ನೇಹಿತ ಮತ್ತು ಅವರು ಎಲ್ಲರನ್ನೂ ನೋಡಿಕೊಳ್ಳುತ್ತಾರೆ. ಅವರು ತುಂಬಾ ಶುದ್ಧ ವ್ಯಕ್ತಿ. ಅವರು ನನ್ನ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಮತ್ತು ನಾವು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದೇವೆ ಎಂಬ ಕಾರಣಕ್ಕಾಗಿ ನಾನು ಅವರೊಂದಿಗೆ ಏಕೆ ಜಗಳವಾಡಿದೆ ಎಂದು ಮಾತ್ರ ಕೇಳಿದರು," ಎಂದು ಸಾಯಿ ಕಿಶೋರ್ ವಿವರಿಸಿದರು.
WI vs IND 1st Test: 3 ವಿಕೆಟ್ ಕಿತ್ತು ಹಲವು ದಾಖಲೆ ಬರೆದ ಜಸ್‌ಪ್ರೀತ್ ಬುಮ್ರಾ
ನಿವೃತ್ತಿ ಬಗ್ಗೆ ಧೋನಿಯವರ ಕೊನೆಯ ಪ್ರತಿಕ್ರಿಯೆ
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಸೋಲಿನ ಬಳಿಕ ಜಯ ಸಾಧಿಸಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದು, 12 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಈ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ್ದ, ಧೋನಿ "ನನಗೆ ಈಗ 43 ವರ್ಷ ಅದನ್ನು ನೀವು ಮರೆಯಬೇಡಿ" ಎಂದು ಹೇಳಿದ್ದರು.
ಅಭಿಮಾನಿಗಳು ನನ್ನ ಮೇಲೆ ಸದಾ ಪ್ರೀತಿ ವಾತ್ಸಲ್ಯ ತೋರುತ್ತಾ ಬರುತ್ತಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲಿ ನಾನು ದೀರ್ಘ ಸಮಯ ಮುಂದುವರಿಯುವಂತೆ ಆಗಿದೆ. ಅವರಿಗೆ ನನ್ನ ಕೊನೆಯ ಪಂದ್ಯ ಯಾವಾಗ ಅಂತ ತಿಳಿದಿಲ್ಲ. ಆದ್ದರಿಂದ ಅವರು ನನ್ನ ಆಟ ನೋಡಲು ಬಯಸುತ್ತಾರೆ. ನಾನು ನನ್ನ ಐಪಿಎಲ್ ವೃತ್ತಿ ಬದುಕಿನ ಅಂತ್ಯದಲ್ಲಿದ್ದೇನೆ ಎನ್ನುವ ಅಂಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಸೀಸನ್‌ಗೆ ನನ್ನ ದೇಹವು ಈ ಒತ್ತಡವನ್ನು ತಡೆದುಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ನಾನು ಇನ್ನೂ ಆರರಿಂದ ಎಂಟು ತಿಂಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಸದ್ಯಕ್ಕೆ ಯಾವುದೇ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಈ ಬಾರಿ ಐಪಿಎಲ್ ಬಳಿಕ ಮುಂದಿನ ಸೀಸನ್‌ಗೆ ತನ್ನ ದೇಹ ಹೊಂದಿಕೊಳ್ಳುತ್ತದೆಯೇ ಎಂಬುದರ ಆಧಾರದ ಮೇಲೆ ನಿವೃತ್ತಿ ಬಗ್ಗೆ ಚಿಂತಿಸುತ್ತೇನೆ ಎಂದು ಧೋನಿ ಹೇಳಿದ್ದರು.