2026ರ ಐಸಿಸಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!
ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ನಮೀಬಿಯಾ ಮತ್ತು ಜಿಂಬಾಬ್ವೆ ಅರ್ಹತೆ ಪಡೆದಿವೆ. ಗುರುವಾರ ಪ್ರತ್ಯೇಕ ಪಂದ್ಯಗಳ ತಂಝೇನಿಯಾ ಮತ್ತು ಕೀನ್ಯಾ ಎದುರು ಅರ್ಹತಾ ಸುತ್ತಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಈ ಎರಡೂ ತಂಡಗಳ ಚುಟುಕು ವಿಶ್ವಕಪ್‌ಗೆ ಅರ್ಹತೆಯನ್ನು ಪಡೆದಿವೆ.

2026ರ ಐಸಿಸಿ ಟಿ20ವಿಶ್ವಕಪ್‌ಗೆ ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ. -

ನವದೆಹಲಿ: ಜಿಂಬಾಬ್ವೆ (Zimbabwe) ಮತ್ತು ನಮೀಬಿಯಾ (Namibia) 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಗೆ ಅರ್ಹತೆ ಪಡೆದಿವೆ. ಆಫ್ರಿಕಾ ಅರ್ಹತಾ ಪಂದ್ಯದಿಂದ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ನಮೀಬಿಯಾ ಭಾಜನವಾಗಿದೆ. ಇದು ನಮೀಬಿಯಾದ ನಾಲ್ಕನೇ ಟಿ20 ವಿಶ್ವಕಪ್ ಆಗಿರುತ್ತದೆ. ಈ ತಂಡ 2021, 2022 ಮತ್ತು 2024ರ ಟಿ20 ವಿಶ್ವಕಪ್ ಟೂರ್ನಿಗಳಿಗೂ ಅರ್ಹತೆ ಪಡೆದಿತ್ತು. ಮತ್ತೊಂದೆಡೆ, ಜಿಂಬಾಬ್ವೆ ಏಳನೇ ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿದೆ. ಅವರನ್ನು 2024ರ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿಲ್ಲ. ಟಿ20 ವಿಶ್ವಕಪ್ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ನಮೀಬಿಯಾ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದಿದ್ದ ಆಫ್ರಿಕನ್ ಪ್ರದೇಶದ ಸೆಮಿಫೈನಲ್ ಪಂದ್ಯದಲ್ಲಿ ನಮೀಬಿಯಾ ಮೊದಲು ಬ್ಯಾಟ್ ಮಾಡಿ 6 ವಿಕೆಟ್‌ಗೆ 174 ರನ್‌ಗಳನ್ನು ಕಲೆ ಹಾಕಿತ್ತು. ನಾಯಕ ಗೆರ್ಹಾರ್ಡ್ ಎರಾಸ್ಮಸ್ ಅವರ 55 ಮತ್ತು ಜೆಜೆ ಸ್ಮಿತ್ ಅವರ ಅಜೇಯ 61 ರನ್‌ಗಳನ್ನು ಗಳಿಸಿದ್ದರು. 175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ತಾಂಜಾನಿಯಾದ ಪ್ರದರ್ಶನವು ಅತ್ಯಂತ ನಿರಾಶಾದಾಯಕವಾಗಿತ್ತು. ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111 ರನ್ ಗಳಿಸಲು ಮಾತ್ರ ಸಾಧ್ಯವಾಯಿತು ಮತ್ತು ಪಂದ್ಯವನ್ನು 63 ರನ್‌ಗಳಿಂದ ಸೋತಿತು. ಈ ಸೋಲಿನೊಂದಿಗೆ, ಅವರು 2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡರು.
IND vs WI: ʻವಿಕೆಟ್ ಪಡೆಯುವುದು ಸುಲಭವಲ್ಲʼ-ಬೌಲಿಂಗ್ ಸಕ್ಸಸ್‌ಗೆ ಕಾರಣ ತಿಳಿಸಿದ ಸಿರಾಜ್!
ಬ್ಯಾಟಿಂಗ್‌ನಲ್ಲಿ 61 ರನ್ ಗಳಿಸಿದ ಜೆಜೆ ಸ್ಮಿತ್ ಮೂರು ವಿಕೆಟ್‌ಗಳನ್ನು ಪಡೆದು ತಮ್ಮ ತಂಡದ ವಿಶ್ವಕಪ್ ಅರ್ಹತೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದ ಆಫ್ರಿಕಾ ಪ್ರದೇಶದ ಏಕೈಕ ತಂಡ ದಕ್ಷಿಣ ಆಫ್ರಿಕಾ.
ಕೀನ್ಯಾ ವಿರುದ್ಧ ಜಿಂಬಾಬ್ವೆ ಗೆಲುವು
ಎರಡನೇ ಸೆಮಿಫೈನಲ್‌ನಲ್ಲಿ ಜಿಂಬಾಬ್ವೆ, ಕೀನ್ಯಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಕೀನ್ಯಾ 6 ವಿಕೆಟ್‌ಗೆ 122 ರನ್ ಗಳಿಸಿತು. ರಾಕೆಪ್ ಪಟೇಲ್ 65 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬ್ಲೆಸಿಂಗ್ ಮುಜರಬಾನಿ ಎರಡು ವಿಕೆಟ್‌ಗಳನ್ನು ಪಡೆದರು. ಜಿಂಬಾಬ್ವೆ ಕೇವಲ 15 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಕೇವಲ 25 ಎಸೆತಗಳಲ್ಲಿ 51 ರನ್‌ಗಳನ್ನು ಗಳಿಸಿದರು. ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.