ODI World Cup 2027: ಅ 10ಕ್ಕೆ ಪಾಕ್ ಪಂದ್ಯ, ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ 16 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಅಕ್ಟೋಬರ್ 2ರಂದು ಆರಂಭವಾಗುವ ಟೂರ್ನಿಯು ನವೆಂಬರ್ 21ರ ಫೈನಲ್ ಪಂದ್ಯದ ಮೂಲಕ ಅಂತ್ಯವಾಗಲಿದೆ. ಪ್ರಶಸ್ತಿ ಗೆಲ್ಲುನ ನೆಚ್ಚಿನ ತಂಡವಾಗಿರುವ ಭಾರತ, ಅಕ್ಟೋಬರ್ 7 ರಂದು ಆಸ್ಟ್ರೇಲಿಯಾ ಎದುರು ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಭಾರತ ತಂಡದ 2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ. -
ನವದೆಹಲಿ: ಬಹುನಿರೀಕ್ಷಿತ 2027ರ ಐಸಿಸಿ ಕ್ರಿಕೆಟ್ ಏಕದಿನ ವಿಶ್ವಕಪ್ (ODI World Cup 2027) ಟೂರ್ನಿಯಲ್ಲಿ ಭಾರತ ತಂಡ, ಅಕ್ಟೋಬರ್ 7ರಂದು ಆಸ್ಟ್ರೇಲಿಯಾ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ (IND vs AUS) ತನ್ನ ಅಭಿಯಾನ ಆರಂಭಿಸಲಿದೆ. 2023ರ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಇದೇ ಎರಡು ತಂಡಗಳು ಮತ್ತೊಮ್ಮೆ ಕಣಕ್ಕಿಳಿಯಲಿವೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂರು ದಿನಗಳ ಬಳಿಕ, ಅಂದರೆ ಅಕ್ಟೋಬರ್ 10ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಗ್ರೂಪ್ ‘ಎ’ನಲ್ಲಿ ಸ್ಥಾನ ಪಡೆದಿದ್ದು, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಪಾಕಿಸ್ತಾನ, ಜಿಂಬಾಬ್ವೆ ಹಾಗೂ ಅರ್ಹತಾ ಸುತ್ತಿನಿಂದ ಬರುವ ಮತ್ತೊಂದು ತಂಡದೊಂದಿಗೆ ಗುಂಪಿನಲ್ಲಿ ಸ್ಪರ್ಧಿಸಲಿದೆ. ಸೂಪರ್ 7 ಹಂತದ ನಿಮಿತ್ತ ಭಾರತ ತಂಡವನ್ನು ಈಗಾಗಲೇ A1 ಸ್ಥಾನಕ್ಕೆ ನಿಗದಿಪಡಿಸಲಾಗಿದೆ.
ಭಾರತ ತಂಡ ಮೂರನೇ ಬಾರಿ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ, ಮೊದಲ ಬಾರಿ ವಿಶ್ವಕಪ್ ಗೆದ್ದಿತ್ತು. ನಂತರ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ತವರಿನಲ್ಲೇ ಮತ್ತೊಮ್ಮೆ ವಿಶ್ವಕಪ್ ಎತ್ತಿಹಿಡಿದಿತ್ತು.
ODI World Cup Schedule: 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯ ವಿವರ!
ಆದರೆ, 2023ರ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತು ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ದಕ್ಷಿಣ ಆಫ್ರಿಕಾದಲ್ಲಿ ಕೊನೆಯ ಬಾರಿ ವಿಶ್ವಕಪ್ ನಡೆದ 2003ರಲ್ಲೂ ಭಾರತ ಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಹೀಗಾಗಿ 2027ರ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆದ್ದು 16 ವರ್ಷಗಳ ಏಕದಿನ ವಿಶ್ವಕಪ್ ಬರವನ್ನು ಅಂತ್ಯಗೊಳಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾರತದ ವೇಳಾಪಟ್ಟಿ
ಗುಂಪು ಹಂತ
7 ಅಕ್ಟೋಬರ್ — ಭಾರತ vs ಆಸ್ಟ್ರೇಲಿಯಾ — ಕೇಪ್ ಟೌನ್
10 ಅಕ್ಟೋಬರ್ — ಭಾರತ vs ಪಾಕಿಸ್ತಾನ — ಜೋಹಾನ್ಸ್‌ಬರ್ಗ್
14 ಅಕ್ಟೋಬರ್ — ಭಾರತ vs ಅಫ್ಘಾನಿಸ್ತಾನ — ತ್ಶ್ವಾನೆ
17 ಅಕ್ಟೋಬರ್ — ಭಾರತ vs ಕ್ವಾಲಿಫೈಯರ್ A — ಬ್ಲೋಮ್‌ಫಾಂಟೈನ್
24 ಅಕ್ಟೋಬರ್ — ಜಿಂಬಾಬ್ವೆ vs ಭಾರತ — ವಿಕ್ಟೋರಿಯಾ ಫಾಲ್ಸ್
ಸೂಪರ್ 7 (ಶ್ರೇಯಾಂಕಿತ ತಂಡಗಳು ಅರ್ಹತೆ ಪಡೆದರೆ)
28 ಅಕ್ಟೋಬರ್ — ಭಾರತ (A1) vs ಆಸ್ಟ್ರೇಲಿಯಾ (A2) — ವಿಕ್ಟೋರಿಯಾ ಫಾಲ್ಸ್
31 ಅಕ್ಟೋಬರ್ — ದಕ್ಷಿಣ ಆಫ್ರಿಕಾ (B2) vs ಭಾರತ (A1) — ಜೋಹಾನ್ಸ್‌ಬರ್ಗ್
4 ನವೆಂಬರ್ — ಭಾರತ (A1) vs ನ್ಯೂಜಿಲೆಂಡ್ (B1) — ಪಾರ್ಲ್
7 ನವೆಂಬರ್ — ಭಾರತ (A1) vs ಪಾಕಿಸ್ತಾನ (A3) — ಕೇಪ್ ಟೌನ್
11 ನವೆಂಬರ್ — ಭಾರತ (A1) vs ಇಂಗ್ಲೆಂಡ್ (AB4) — ಗೆಬೆರ್ಹಾ
14 ನವೆಂಬರ್ — ಭಾರತ (A1) vs ಶ್ರೀಲಂಕಾ (B3) — ಡರ್ಬನ್
𝗧𝗵𝗲 𝘄𝗮𝗶𝘁 𝗶𝘀 𝗼𝘃𝗲𝗿! ⌛
— BCCI (@BCCI) October 1, 2026
Here's a look at #TeamIndia's group stage fixtures for the ICC Men's Cricket World Cup 2️⃣0️⃣2️⃣7️⃣ 🇮🇳 🗓️#CWC27 pic.twitter.com/0iUNMRfymW
ನಾಕೌಟ್ ಹಂತ
17 ನವೆಂಬರ್ — ಸೆಮಿ-ಫೈನಲ್ 1 — ಕೇಪ್ ಟೌನ್
18 ನವೆಂಬರ್ — ಸೆಮಿ-ಫೈನಲ್ 2 — ತ್ಶ್ವಾನೆ
21 ನವೆಂಬರ್ — ಫೈನಲ್ — ಜೋಹಾನ್ಸ್‌ಬರ್ಗ್
(ಎರಡೂ ಸೆಮಿ-ಫೈನಲ್‌ಗಳು ಮತ್ತು ಫೈನಲ್‌ಗೆ ಮೀಸಲು ದಿನವಿದೆ)
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಕೊನೆಯ ಏಕದಿನ ವಿಶ್ವಕಪ್?
2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಗಮನ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರತ್ತ ನೆಟ್ಟಿರಲಿದೆ. ಇವರಿಬ್ಬರು ತಮ್ಮ ಕೊನೆಯ ವಿಶ್ವಕಪ್ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ಪಂದ್ಯವನ್ನೂ ಆಡಲಿದ್ದಾರೆ ಎನ್ನಲಾಗಿದೆ. ಎರಡು ದಶಕಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ ಬಳಿಕ ಇಬ್ಬರೂ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆಯಿದೆ.
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಐದನೇ ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. 2011ರಲ್ಲಿ ಎಂ.ಎಸ್. ಧೋನಿ ನಾಯಕತ್ವದ ಭಾರತ ತಂಡದೊಂದಿಗೆ ವಿಶ್ವಕಪ್ ಗೆದ್ದಿದ್ದ ಕೊಹ್ಲಿ, ನಂತರ 2015, 2019ರಲ್ಲಿ ನಾಯಕನಾಗಿ ಹಾಗೂ 2023ರ ವಿಶ್ವಕಪ್ ಟೂರ್ನಿಯಲ್ಲಿಯೂ ಆಡಿದ್ದರು.
𝙈𝘼𝙍𝙆 𝙔𝙊𝙐𝙍 𝘾𝘼𝙇𝙀𝙉𝘿𝘼𝙍𝙎 🗓️
— ICC (@ICC) October 1, 2026
The ICC Men’s #CWC27 fixtures have been unveiled 🏆
Access the ticket ballot 🎫 https://t.co/MSLEQzcObb pic.twitter.com/dpTE4TEjO7
ಇತ್ತ ರೋಹಿತ್ ಶರ್ಮಾ ನಾಲ್ಕನೇ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವುದು ಅವರ ಅದ್ಭುತ ವೈಟ್-ಬಾಲ್ ವೃತ್ತಿಜೀವನದಲ್ಲಿ ಇನ್ನೂ ಕೊರತೆಯಿರುವ ಪ್ರಮುಖ ಸಂಗತಿ. 2027ರಲ್ಲಿ ಟ್ರೋಫಿ ಗೆಲ್ಲುವ ಮೂಲಕ ಆ ಕೊರತೆಯನ್ನು ನೀಗಿಸಿಕೊಳ್ಳುವ ಅವಕಾಶ ರೋಹಿತ್‌ಗೆ ಎದುರಾಗಲಿದೆ. ವಿಶ್ವಕಪ್ ಇತಿಹಾಸದಲ್ಲಿ ಇಬ್ಬರೂ ಬ್ಯಾಟರ್‌ಗಳು ತಮ್ಮದೇ ಆದ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ. ಪ್ರಸ್ತುತ ಕೊಹ್ಲಿ ಟೂರ್ನಿಯ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರೆ, ರೋಹಿತ್ ನಾಲ್ಕನೇ ಸ್ಥಾನದಲ್ಲಿದ್ದಾರೆ.