ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆನ್‌ ಸ್ಟೋಕ್ಸ್‌ ಹಿಂದಿಕ್ಕಿ ನಾಲ್ಕನೇ ಬಾರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್‌ ಗಿಲ್‌!

ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶವನ್ನು ತೋರಿದ್ದರ ಫಲವಾಗಿ ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಜುಲೈ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಗಿಲ್‌ ನಾಲ್ಕನೇ ಬಾರಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ನಾಲ್ಕನೇ ಬಾರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್‌ ಗಿಲ್‌!

ಶುಭಮನ್‌ ಗಿಲ್‌ಗೆ ಜುಲೈ ತಿಂಗಳ ಐಸಿಸಿ ಆಟಗಾರರ ಪ್ರಶಸ್ತಿ.

Profile Ramesh Kote Aug 12, 2025 6:33 PM

ನವದೆಹಲಿ: ಇತ್ತೀಚೆಗೆ ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆದಿತ್ತು. ಈ ಸರಣಿಯ ಫಲಿತಾಂಶ 2-2 ರಲ್ಲಿ ಕೊನೆಗೊಂಡಿತು. ಈ ಸರಣಿಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ (India) ಭೀಕರ ಸೋಲನ್ನು ಅನುಭವಿಸಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರಿತು ಹಾಗೂ ಇಂಗ್ಲೆಂಡ್ ತಂಡವನ್ನು ಅವರದೇ ನೆಲದಲ್ಲಿ ಸೋಲಿಸಿತ್ತು. ಈ ವೇಳೆ ಶುಭಮನ್ ಗಿಲ್ ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್‌ ಆಗಿಯೂ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅದರಲ್ಲಿಯೂ ಬ್ಯಾಟ್ಸ್‌ಮನ್‌ ಆಗಿ ಶುಭಮನ್‌ ಗಿಲ್‌ ಅತಿ ಹೆಚ್ಚು ರನ್‌ ಗಳಿಸಿದ್ದರು. ಇದರ ಫಲವಾಗಿ ಶುಭಮನ್‌ ಗಿಲ್‌ ಜುಲೈ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಜುಲೈ ತಿಂಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಸಿಸಿ ಈ ಪ್ರಶಸ್ತಿಗೆ ಮೂವರು ಆಟಗಾರರನ್ನು ಆಯ್ಕೆ ಮಾಡಿತ್ತು. ಶುಭಮನ್ ಗಿಲ್ ಹೊರತುಪಡಿಸಿ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಿಯಾನ್ ಮುಲ್ಡರ್‌ರಂತಹ ಆಟಗಾರರ ಹೆಸರುಗಳನ್ನು ಸೇರಿಸಲಾಗಿತ್ತು. ಆದರೆ, ಶುಭಮನ್‌ ಗಿಲ್‌ ತಮ್ಮ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಈ ಸ್ಟಾರ್ ಆಟಗಾರರನ್ನು ಹಿಂದಿಕ್ಕಿ ನಾಲ್ಕನೇ ಬಾರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

IND vs ENG ಸಂಯೋಜನೆಯ ಪ್ಲೇಯಿಂಗ್‌ XI ಪ್ರಕಟಿಸಿದ ಆಕಾಶ ಚೋಪ್ರಾ!

ಜುಲೈನಲ್ಲಿ ಶುಭಮನ್ ಗಿಲ್ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ. ವಿಶೇಷವಾಗಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಜುಲೈನಲ್ಲಿ ಅವರು ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ರನ್‌ ಹೊಳೆ ಹರಿಸಿದರು. ಈ ಮೂರು ಪಂದ್ಯಗಳಿಂದ ಅವರು 567 ರನ್ ಗಳಿಸಿದರು ಹಾಗೂ ಇದರಲ್ಲಿ ಅವರು ದ್ವಿಶತಕಗಳನ್ನು ಗಳಿಸಿದರು. ಇದರ ಹೊರತಾಗಿ, ಅವರು ಒಂದು ಶತಕವನ್ನೂ ಗಳಿಸಿದರು. ಗಿಲ್ ಕೇವಲ ಆರು ಇನಿಂಗ್ಸ್‌ಗಳಲ್ಲಿ ಈ ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿಯೂ ವಿಶೇಷ ಏನೆಂದರೆ ಅವರು 94.50ರ ಸರಾಸರಿಯಲ್ಲಿ ರನ್‌ಗಳನ್ನು ಕಲೆ ಹಾಕಿದ್ದಾರೆ.



ನಾಲ್ಕನೇ ಬಾರಿ ಐಸಿಸಿ ತಿಂಗಳ ಪ್ರಶಸ್ತಿ ಗೆದ್ದ ಗಿಲ್‌

ಶುಭಮನ್‌ ಗಿಲ್ ಅವರ ಪಾಲಿಗೆ ನಾಲ್ಕನೇ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಇದಾಗಿದೆ. ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು 2023ರಲ್ಲಿ ಫೆಬ್ರವರಿ, ಜನವರಿ ಮತ್ತು ಸೆಪ್ಟೆಂಬರ್ ಕೂಡ ಈ ಪ್ರಶಸ್ತಿಗಳನ್ನು ಪಡೆದಿದ್ದಾರೆ.

IND vs ENG: ಜಸ್‌ಪ್ರೀತ್‌ ಬುಮ್ರಾ ಪ್ರದರ್ಶನದ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ಶುಭಮನ್‌ ಗಿಲ್‌ ವೈಯಕ್ತಿಕ ಗರಿಷ್ಠ ಸ್ಕೋರರ್‌

ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಶುಭಮನ್‌ ಗಿಲ್‌ ಅವರು ಆಡಿದ್ದ 10 ಇನಿಂಗ್ಸ್‌ಗಳಿಂದ 75.4ರ ಸರಾಸರಿಲ್ಲಿ 754 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು ನಾಲ್ಕು ಶತಕಗಳನ್ನು ಬಾರಿಸಿದರು. ಹೆಡಿಂಗ್ಲೆಯಲ್ಲಿ 147 ರನ್‌ಗಳ ಮೂಲಕ ಸರಣಿಯಲ್ಲಿ ಶುಭಾರಂಭ ಕಂಡಿದ್ದ ಗಿಲ್‌, ನಂತರ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕ್ರಮವಾಗಿ 430 ರನ್‌ಗಳನ್ನು (269, 161) ಕಲೆ ಹಾಕಿದ್ದಾರೆ.