ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನನ್ನನ್ನು ಕ್ಷಮಿಸಿ ಬಾಸ್‌ʼ: ರೋಹಿತ್‌ ಶರ್ಮಾ ಬಳಿ ಕ್ಷಮೆ ಕೇಳಿದ ಕೃಷ್ಣಮಾಚಾರಿ ಶ್ರೀಕಾಂತ್‌!

2011ರ ಐಸಿಸಿ ಏಕದಿನ ವಿಶ್ವಕಪ್‌ ಭಾರತ ತಂಡದಿಂದ ರೋಹಿತ್ ಶರ್ಮಾ ಅವರನ್ನು ಹೊರಗಿಟ್ಟಿದ್ದಕ್ಕಾಗಿ ಮಾಜಿ ಸೆಲೆಕ್ಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ ಮಾಜಿ ನಾಯಕನ ಬಳಿ ಕ್ಷಮೆಯಾಚಿಸಿದ್ದಾರೆ. ಅಂದಿನ ಬಿಸಿಸಿಐ ಆಯ್ಕೆ ಸಮಿತಿ 1983ರ ಕ್ರಿಕೆಟ್ ವಿಶ್ವಕಪ್ ಮಾದರಿಯನ್ನು ಅನುಸರಿಸಿ, ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತ್ತು ಎಂದು ಹೇಳಿದ್ದಾರೆ.

ರೋಹಿತ್‌ ಶರ್ಮಾ ಬಳಿ ಕ್ಷಮೆ ಕೇಳಿದ  ಕೃಷ್ಣಮಾಚಾರಿ ಶ್ರೀಕಾಂತ್‌!

ರೋಹಿತ್‌ ಶರ್ಮಾ ಬಳಿ ಕ್ಷಮೆ ಕೇಳಿದ ಕೆ ಶ್ರೀಕಾಂತ್‌. -

Profile
Ramesh Kote Apr 23, 2026 6:37 PM

ನವದೆಹಲಿ: ಒಂದೂವರೆ ದಶಕದ ಹಿಂದೆ 2011ರ ಏಕದಿನ ವಿಶ್ವಕಪ್ (ODI World Cup) ಭಾರತ ತಂಡದಿಂದ ರೋಹಿತ್ ಶರ್ಮಾ(Rohit Sharma) ಅವರನ್ನು ಹೊರಗಿಟ್ಟಿದ್ದಕ್ಕಾಗಿ 2020ರಲ್ಲಿ ಮಾಜಿ ನಾಯಕನ ಬಳಿ ಕ್ಷಮೆಯಾಚಿಸಿದ್ದಾಗಿ ಬಿಸಿಸಿಐ ಮಾಜಿ ಸೆಲೆಕ್ಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ (Kris Srikkanth) ಬಹಿರಂಗಪಡಿಸಿದ್ದಾರೆ. ರೋಹಿತ್ ಅವರಲ್ಲಿ ಅಪಾರ ಪ್ರತಿಭೆಯಿದ್ದರೂ, ಆಯ್ಕೆದಾರರು ತಂಡದಲ್ಲಿ ಆಲ್‌ರೌಂಡರ್‌ಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿತ್ತು ಎಂದು ಅವರು ವಿವರಿಸಿದರು. 1983ರಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದಿದ್ದ ತಂಡವನ್ನು ಆಯ್ಕೆ ಮಾಡಿದ್ದ ಸಂದರ್ಭದಲ್ಲಿ ಅನುಸರಿಸಿದ್ದ ತಂತ್ರವನ್ನೇ ನಾವು ಕೂಡ ಅನುಸರಿಸಿದ್ದೆವು ಎಂದು ಅವರು ಹೇಳಿದ್ದಾರೆ.

ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2011ರ ವಿಶ್ವಕಪ್‌ ಟೂರ್ನಿಗೂ ಮುನ್ನ ಅವರು ಸುಮಾರು 57 ಪಂದ್ಯಗಳಲ್ಲಿ 1,200ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದು, ಅದರಲ್ಲಿ ಏಳು ಅರ್ಧಶತಕಗಳು ಸೇರಿದ್ದವು. 2007–08ರ ಕಾಮನ್‌ವೆಲ್ತ್ ಬ್ಯಾಂಕ್ ಸರಣಿಯಲ್ಲಿ (ಆಸ್ಟ್ರೇಲಿಯಾ) ಅವರು 235 ರನ್‌ಗಳನ್ನು ಗಳಿಸಿದ್ದರು. ಆದರೂ ಅವರನ್ನು 2011ರ ಏಕದಿನ ವಿಶ್ವಕಪ್‌ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.

ಭಾರತ ಟಿ20 ತಂಡದಲ್ಲಿ ಸೂರ್ಯಕುಮಾರ್‌ ಸ್ಥಾನ ತುಂಬಬಲ್ಲ 5 ಆಟಗಾರರು!

“ಅದೃಷ್ಟ ಇಲ್ಲದ ಹುಡುಗ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಕಳೆದುಕೊಂಡಿದ್ದರು ಎಂದ ಶ್ರೀಕಾಂತ್ ‘ದಿ ವೀಕ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ, “ಇಂದಿಗೂ ಅವರಿಗಾಗಿ ನನಗೆ ಬೇಸರವಾಗುತ್ತದೆ. 2020ರಲ್ಲಿ ಒಂದು ದಿನ ನಾನು ರೋಹಿತ್‌ಗೆ ‘ಕ್ಷಮಿಸಿ ಬಾಸ್’ ಎಂದು ಹೇಳಿದ್ದೆ. ಅದು ಉದ್ದೇಶಪೂರ್ವಕವಾಗಿರಲಿಲ್ಲ; ನಮಗೆ ಹೆಚ್ಚು ಆಲ್‌ರೌಂಡರ್ ಆಯ್ಕೆಗಳು ಬೇಕಾಗಿದ್ದವು. ತಂಡದಲ್ಲಿ ಆಲ್‌ರೌಂಡರ್‌ಗಳೇ ತುಂಬಿದ್ದರು.” ಎಂದು ಹೇಳಿದ್ದಾರೆ.

RCB vs GT: ಗುಜರಾತ್‌ ಟೈಟನ್ಸ್‌ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌!

1983ರ ವಿಶ್ವಕಪ್‌ ತಂಡದ ತಂತ್ರವನ್ನು ಅನುಸರಿಸಿದ್ದೆವು

1983ರ ವಿಶ್ವಕಪ್‌ ವಿಜೇತ ತಂಡಕ್ಕೆ ನಾವು ಬಹುತೇಕ ಆಲ್‌ರೌಂಡರ್‌ಗಳನ್ನು ಆಯ್ಕೆ ಮಾಡಿದ್ದೆವು ಹಾಗೂ ಆಗ ನಾವು ಚಾಂಪಿಯನ್‌ ಆಗದ್ದೆವು. ಅದೇ ರೀತಿಯ ತಂತ್ರವನ್ನು ನಾವು ಅನುಸರಿಸಿದ್ದೇವೆ ಎಂದು ಕೆ ಶ್ರೀಕಾಂತ್‌ ತಿಳಿಸಿದ್ದಾರೆ.

“ನೀವು 1983ರ ವಿಶ್ವಕಪ್ ತಂಡವನ್ನು ನೋಡಿದರೆ, ರೋಜರ್ ಬಿನ್ನಿ ಆಲ್‌ರೌಂಡರ್ ಆಗಿದ್ದರು ಮತ್ತು ಪ್ರಮುಖ ಆಲ್‌ರೌಂಡರ್ ಕಪಿಲ್ ದೇವ್ ಇದ್ದರು. ಶ್ರೀಕಾಂತ್, ಸಯ್ಯದ್ ಕಿರ್ಮಾನಿ ಮತ್ತು ಸುನಿಲ್ ಗವಾಸ್ಕರ್ ಅವರನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲರೂ ಬೌಲ್‌ ಮಾಡುತ್ತಿದ್ದರು," ಎಂದರು.

IPL 2026: ರಿಷಭ್‌ ಪಂತ್‌ ಎದುರು ಅವಮಾನಕರ ವರ್ತನೆ ತೋರಿದ ನಾಂಡ್ರೆ ಬರ್ಗರ್‌ಗೆ ದಂಡ!

2011ರಲ್ಲಿ ಆಲ್‌ರೌಂಡರ್‌ಗಳಿಂದ ಅದ್ಭುತ ಪ್ರದರ್ಶನ

2011ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪ್ರಶಸ್ತಿ ಗೆಲುವಿನಲ್ಲಿ ಆಲ್‌ರೌಂಡರ್‌ಗಳು ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ಟೂರ್ನಿಯಲ್ಲಿ ಯುವರಾಜ್‌ ಸಿಂಗ್‌ ಅವರು ಆಡಿದ್ದ 9 ಪಂದ್ಯಗಳಿಂದ 15 ವಿಕೆಟ್‌ಗಳು ಹಾಗೂ 362 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಫಲವಾಗಿ ಅವರು ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಟೂರ್ನಿಯಲ್ಲಿ ಭಾರತ ತಂಡದ ಪರ ವೀರೇಂದ್ರ ಸೆಹ್ವಾಗ, ಸಚಿನ್‌ ತೆಂಡೂಲ್ಕರ್‌ ಹಾಗೂ ಯೂಸಫ್‌ ಪಠಾಣ್‌ ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲಿಯೂ ಕೊಡುಗೆ ನೀಡಿದ್ದರು.

"ಅಂದಿನ ದಿನದಾಂತ್ಯಕ್ಕೆ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದು ಯಾರು? ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಮಿಂಚಿದ್ದ ಯುವರಾಜ್‌ ಸಿಂಗ್‌. ಇನ್ನು ಕೆಲ ಪಂದ್ಯಗಳಲ್ಲಿ ಸೆಹ್ವಾಗ್‌, ಸಚಿನ್ ಹಾಗೂ ರೈನಾ ಕೂಡ ಬೌಲ್‌ ಮಾಡಿದ್ದರು. ಯೂಸಫ್‌ ಪಠಾಣ್‌ ಅವರನ್ನು ಕೂಡ ಆಲ್‌ರೌಂಡರ್‌ ಆಗಿ ಬಳಸಿಕೊಳ್ಳಲಾಗಿತ್ತು. ಆಲ್‌ರೌಂಡರ್‌ ಸಾಮರ್ಥ್ಯವಿರುವ ಆಟಗಾರರನ್ನು ಹೆಚ್ಚಾಗಿ ಬಳಿಸಿಕೊಂಡಿದ್ದರಿಂದ ರೋಹಿತ್‌ ಶರ್ಮಾಗೆ ಅವಕಾಶ ಸಿಕ್ಕಿರಲಿಲ್ಲ," ಎಂದು ಕೆ ಶ್ರೀಕಾಂತ್‌ ಕಾರಣವನ್ನು ವಿವರಿಸಿದ್ದಾರೆ.