IND vs AFG: ಗಿಲ್-ಕಿಶನ್ ಶತಕ, 2ನೇ ಪಂದ್ಯ ಗೆದ್ದು ಏಕದಿನ ಸರಣಿಯನ್ನು ವಶಪಡಿಸಿಕೊಂಡ ಭಾರತ!
IND vs AFG 2nd ODI Highlights: ಶುಭಮನ್ ಗಿಲ್ ಹಾಗೂ ಇಶಾನ್ ಕಿಶನ್ ಅವರ ಶತಕಗಳ ಬಲದಿಂದ ಭಾರತ ತಂಡ, ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 170 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.
ಅಫ್ಘಾನಿಸ್ತಾನ ಎದುರು ಎರಡನೇ ಒಡಿಐ ಗೆದ್ದ ಭಾರತ. -
ಲಖನೌ: ನಾಯಕ ಶುಭಮನ್ ಗಿಲ್ (Shubman Gill) ಹಾಗೂ ಇಶಾನ್ ಕಿಶನ್ (Ishan Kishan) ಅವರ ಭರ್ಜರಿ ಶತಕಗಳ ಬಲದಿಂದ ಭಾರತ ತಂಡ, ಎರಡನೇ ಏಕದಿನ ಪಂದ್ಯದಲ್ಲಿ(IND vs AFG) ಅಫ್ಘಾನಿಸ್ತಾನ ವಿರುದ್ಧ 170 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಶುಭಮನ್ ಗಿಲ್ ನಾಯಕತ್ವದ ಭಾರತ, ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಇನ್ನು ಮೊದಲನೇ ಪಂದ್ಯದ ಕಠಿಣ ಹೋರಾಟ ನಡೆಸಿದ್ದ ಪ್ರವಾಸಿಗರು, ಲಖನೌದಲ್ಲಿ ಆತಿಥೇಯರಿಗೆ ಸುಲಭ ತುತ್ತಾದರು. ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬುಧವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 403 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಅಫ್ಘಾನಿಸ್ತಾನ ತಂಡದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಅಗ್ರ ಕ್ರಮಾಂಕದಲ್ಲಿ ರಹಮಾನ್‌ವುಲ್ಲಾ ಗುರ್ಬಾಝ್ (41 ರನ್), ಸೆಡಿಕುಲ್ ಅಟಲ್ (42 ರನ್) ಹಾಗೂ ರಹಮತ್ ಶಾ ( 79 ರನ್) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು. ಅಂತಿಮವಾಗಿ ಆಫ್ಘನ್ 44.3 ಓವರ್‌ಗಳಿಗೆ 232 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲು ಒಪ್ಪಿಕೊಂಡಿತು.
IND vs AFG: ನಾಲ್ಕು ವರ್ಷಗಳ ಬಳಿಕ ಒಡಿಐ ಶತಕ ಬಾರಿಸಿದ ಇಶಾನ್ ಕಿಶನ್!
ರಹಮತ್ ಶಾ ಕಠಿಣ ಹೋರಾಟ
ಆಫ್ಘನ್ ಪರ ಮಧ್ಯಮ ಕ್ರಮಾಂಕದಲ್ಲಿ ಕೊನೆಯವೆಗೂ ಕ್ರೀಸ್‌ನಲ್ಲಿ ನಿಂತು ಏಕಾಂಗಿ ಹೋರಾಟ ನಡೆಸಿದ ರಹಮತ್ ಶಾ, 89 ಎಸೆತಗಳಲ್ಲಿ 79 ರನ್‌ಗಳನ್ನು ಕಲೆ ಹಾಕಿದರೂ ಇತರೆ ಬ್ಯಾಟ್ಸ್‌ಮನ್‌ಗಳ ಬೆಂಬಲದ ಕೊರತೆಯಿಂದ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಫ್ಘಾನಿಸ್ತಾನ ತಂಡ ದೊಡ್ಡ ಅಂತರದಲ್ಲಿ ಸೋಲು ಒಪ್ಪಿಕೊಂಡಿತು. ಭಾರತದ ಪರ ಅತ್ಯುತ್ತಮವಾಗಿ ಬೌಲಿಂಗ್ ಪ್ರದರ್ಶನವನ್ನು ತೋರಿದ ಅರ್ಷದೀಪ್ ಸಿಂಗ್ ಹಾಗೂ ಗುರ್ನೂರ್ ಬ್ರಾರ್ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಪ್ರಿನ್ಸ್ ಯಾದವ್ ಎರಡು ವಿಕೆಟ್ ಕಿತ್ತರು.
A clinical performance to seal the series! 🙌#TeamIndia register a massive 170-run victory in the 2nd ODI to take an unassailable 2-0 lead 👏
— BCCI (@BCCI) June 17, 2026
Updates ▶️ https://t.co/JYJ5l44iJ6#INDvAFG | @IDFCFIRSTBank pic.twitter.com/vqLlFxbQyj
402 ರನ್ ಕಲೆ ಹಾಕಿದ್ದ ಭಾರತ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಶುಭಮನ್ ಗಿಲ್ ಹಾಗೂ ಇಶಾನ್ ಕಿಶನ್ ಅವರ ಭರ್ಜರಿ ಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 402 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಅಫ್ಘನ್ ತಂಡಕ್ಕೆ 403 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.
First ODI century as Captain 💯
— BCCI (@BCCI) June 17, 2026
Second consecutive POTM award 🏆
Shubman Gill is simply unstoppable right now! 💥
Relive his knock ▶️ https://t.co/eD2JpCeGHO#TeamIndia | #INDvAFG | @IDFCFIRSTBank | @ShubmanGill pic.twitter.com/dt8LFfg5mS
ಗಿಲ್-ಕಿಶನ ಜುಗಲ್‌ಬಂದಿ
ಸಿಕ್ಕ ಅಪರೂಪದ ಅವಕಾಶವನ್ನು ಯಶಸ್ವಿ ಜೈಸ್ವಾಲ್ ಕೈ ಚೆಲ್ಲಿಕೊಂಡರೆ, ರೋಹಿತ್ ಶರ್ಮಾ (48 ರನ್, 39 ಎಸೆತ) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಆರಂಭಿಕರು ಔಟ್ ಆದ ಬಳಿಕ ಭಾರತ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಶುಭಮನ್ ಗಿಲ್ ಹಾಗೂ ಇಶಾನ್ ಕಿಶನ್ ಜೊತೆಯಾಟ. ಈ ಇಬ್ಬರೂ ದೀರ್ಘಾವಧಿ ಬ್ಯಾಟ್ ಮಾಡಿ ಮೂರನೇ ವಿಕೆಟ್‌ಗೆ 224 ರನ್‌ಗಳನ್ನು ಕಲೆ ಹಾಕಿದರು, ಆ ಮೂಲಕ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು.
Piling on the runs 📈
— BCCI (@BCCI) June 17, 2026
1️⃣5️⃣0️⃣ up for Captain Shubman Gill 🫡 🙌
Updates ▶️ https://t.co/JYJ5l44iJ6#TeamIndia | #INDvAFG | @IDFCFIRSTBank | @ShubmanGill pic.twitter.com/ONNSfz0D1q
154 ಬಾರಿಸಿದ ಶುಭಮನ್ ಗಿಲ್
ಮೊದಲನೇ ಪಂದ್ಯದಲ್ಲಿ ಶತಕ ಸಿಡಿಸಬಹುದಾದ ಅವಕಾಶವನ್ನು ಕೈ ಚೆಲ್ಲಿಕೊಂಡಿದ್ದ ನಾಯಕ ಶುಭಮನ್ ಗಿಲ್, ಎರಡನೇ ಪಂದ್ಯದಲ್ಲಿ ಆಡಿದ 110 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ 22 ಮನಮೋಹಕ ಬೌಂಡರಿಗಳೊಂದಿಗೆ 154 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದ 9ನೇ ಶತಕವನ್ನು ಪೂರ್ಣಗೊಳಿಸಿದರು. ಆದರೆ, ಅವರು ಮೂರನೇ ಕ್ರಮಾಂಕದಲ್ಲಿ ಈ ರೀತಿಯ ದೊಡ್ಡ ಇನಿಂಗ್ಸ್ ಮೂಡಿ ಬಂದಿರುವುದು ವಿಶೇಷ.
1️⃣2️⃣5️⃣ Runs
— BCCI (@BCCI) June 17, 2026
7️⃣9️⃣ Balls
1️⃣4️⃣ Fours & 7️⃣ Sixes
A dazzling knock from Ishan Kishan 👏👏
Updates ▶️ https://t.co/JYJ5l44iJ6#TeamIndia | #INDvAFG | @IDFCFIRSTBank | @ishankishan51 pic.twitter.com/EI68b2HLje
2022ರ ಬಳಿಕ ಇಶಾನ್ ಕಿಶನ್‌ಗೆ ಎರಡನೇ ಶತಕ
ಇನ್ನು ಕಳೆದ ಪಂದ್ಯದಲ್ಲಿ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದ್ದ ಇಶಾನ್ ಕಿಶನ್, ಈ ಪಂದ್ಯದಲ್ಲಿ ಮಿಂಚಿದರು. ಅವರು 79 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 125 ರನ್‌ಗಳ್ನು ಬಾರಿಸಿದರು. ಆ ಮೂಲಕ ತಮ್ಮ ಎರಡನೇ ಶತಕವನ್ನು ಪೂರ್ಣಗೊಳಿಸಿದರು. ಶ್ರೇಯಸ್ ಅಯ್ಯರ್ 26 ರನ್‌ಗೆ ಸೀಮಿತರಾದರು. ಕಿಶನ್, ಗಿಲ್ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್‌ಗಳು ಉರುಳಿದ ಬಳಿಕ ಭಾರತ ತಂಡದ ಕೆಳ ಮಧ್ಯಮ ಹಾಗೈ ಕೆಳ ಕ್ರಮಾಂಕದ ಆಟಗಾರರಿಂದ ಕನಿಷ್ಠ 20 ರನ್ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಆಫ್ಘನ್ ಪರ ನಂಗೆಯಾಲಿಯಾ ಖರೋಟಿ 4 ವಿಕೆಟ್ ಕಿತ್ತರೆ, ರಶೀದ್ ಖಾನ್ 3 ವಿಕೆಟ್ ಕಿತ್ತರು.