ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಆಕರ್ಷಕ ಅರ್ಧಶತಕ ಸಿಡಿಸಿ ಎರಡು ದೊಡ್ಡ ದಾಖಲೆ ಬರೆದ ರವೀಂದ್ರ ಜಡೇಜಾ!

Ravindra Jadeja Scripts Two Major Records: ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಶತಕ (89 ರನ್) ವಂಚಿತರಾಗಿದ್ದಾರೆ. ಆದರೆ ಇಂಗ್ಲೆಂಡ್ ನೆಲದಲ್ಲಿ 700ಕ್ಕೂ ಹೆಚ್ಚು ರನ್ ಹಾಗೂ 25 ವಿಕೆಟ್ ಪಡೆದ ಮೊದಲ ಭಾರತೀಯ ಆಲ್‌ರೌಂಡರ್ ಎಂಬ ದಾಖಲೆಯನ್ನು ಬರೆದಿದ್ದಾರೆ.

ಅರ್ಧಶತಕ ಸಿಡಿಸಿ 2 ದೊಡ್ಡ ದಾಖಲೆ ಬರೆದ ರವೀಂದ್ರ ಜಡೇಜಾ!

ಅರ್ಧಶತಕ ಬಾರಿಸಿ ಎರಡು ದೊಡ್ಡ ದಾಖಲೆ ಬರೆದ ರವೀಂದ್ರ ಜಡೇಜಾ.

Profile Ramesh Kote Jul 3, 2025 6:03 PM

ಎಜ್ ಬಾಸ್ಟನ್: ಭಾರತದ ಅನುಭವಿ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ (IND VS ENG) ಪಂದ್ಯದ ಎರಡನೇ ದಿನದಾಟದಲ್ಲಿ ತಮ್ಮ ಟೆಸ್ಟ್ ಜೀವನದ 22ನೇ ಅರ್ಧಶತಕ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ ಆಂಗ್ಲ ಪಡೆ ವಿರುದ್ಧ 700ಕ್ಕೂ ಹೆಚ್ಚು ರನ್ ಹಾಗೂ 25 ವಿಕೆಟ್ ಪಡೆದ ಮೊದಲ ಭಾರತೀಯ ಆಲ್‌ರೌಂಡರ್ ಎಂಬ ದಾಖಲೆಗೂ ಜಡೇಜಾ ಭಾಜನರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಆಲ್‌ರೌಂಡರ್ ಪ್ರದರ್ಶನ ತೋರಿಸುವಲ್ಲಿ ಸಂಪೂರ್ಣವಾಗಿ ಎಡವಿದ್ದ ರವೀಂದ್ರ ಜಡೇಜಾ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ (168* ರನ್) ಜೊತೆಗೂಡಿ ಆರನೇ ವಿಕೆಟ್‌ಗೆ 213 ರನ್ ಗಳ ಜೊತೆಯಾಟದಲ್ಲಿ ರವೀಂದ್ರ ಜಡೇಜಾ (89 ರನ್) ಪಾಲ್ಗೊಂಡು ತಂಡಕ್ಕೆ ಆಸರೆಯಾಗಿದ್ದರು.

IND vs ENG: ಕುಲ್ದೀಪ್‌ ಯಾದವ್‌ಗೆ ಸ್ಥಾನ ನೀಡದ ಬಗ್ಗೆ ಸೌರವ್‌ ಗಂಗೂಲಿ ಪ್ರಶ್ನೆ!

ಶತಕ ವಂಚಿತ ರವೀಂದ್ರ ಜಡೇಜಾ

ಎರಡನೇ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದಲ್ಲಿ 212 ರನ್‌ಗಳಿಗೆ ಭಾರತ ತಂಡ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕ್ರೀಸ್‌ಗೆ ಇಳಿದ ರವೀಂದ್ರ ಜಡೇಜಾ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಶೋಯಿಬ್ ಬಷೀರ್ ಸೇರಿದಂತೆ ಎಲ್ಲ ಬೌಲರ್‌ಗಳನ್ನು ದಂಡಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 89 ರನ್ ಗಳಿಸಿ ಶತಕ ಸಿಡಿಸುವ ಭರವಸೆ ಮೂಡಿಸಿದ್ದರು. ಜಾಶ್ ಟಾಂಗ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಜೇಮಿ ಸ್ಮಿತ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಮಹತ್ವದ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ ನಲ್ಲಿ 700+ ರನ್ ಮತ್ತು 25 ವಿಕೆಟ್ ಪಡೆದ ಆಟಗಾರರು

* ಗ್ಯಾರಿ ಸೋಬರ್ಸ್ - ವೆಸ್ಟ್ ಇಂಡೀಸ್ - 1820 ರನ್, 62 ವಿಕೆಟ್

* ಚಾರ್ಲ್ಸ್ ಮೆಕ್ಕರ್ಟ್ನಿ- ಆಸ್ಟ್ರೇಲಿಯಾ- 1118 ರನ್, 28 ವಿಕೆಟ್

* ಮೋಂಟಿ ನೋಬೆಲ್ - ಆಸ್ಟ್ರೇಲಿಯಾ - 848 ರನ್, 37 ವಿಕೆಟ್

* ಜಾಕ್ ಕಾಲಿಸ್ - ದಕ್ಷಿಣ ಆಫ್ರಿಕಾ - 848 ರನ್, 39 ವಿಕೆಟ್

* ರವೀಂದ್ರ ಜಡೇಜಾ - ಭಾರತ - 739 ರನ್- 28 ವಿಕೆಟ್



7ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಟೆಸ್ಟ್ ಅರ್ಧಶತಕ

2013 ರ ಡಿಸೆಂಬರ್ 13 ರಂದು ಇಂಗ್ಲೆಂಡ್ ವಿರುದ್ಧವೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರವೀಂದ್ರ ಜಡೇಜಾ ಇದುವರೆಗೂ 7ನೇ ಕ್ರಮಾಂಕದಲ್ಲಿ 20 ಅರ್ಧಶತಕ ಬಾರಿಸಿದ್ದು, ಈ ಕ್ರಮಾಂಕದಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಸಾಲಿನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

* 20- ರವೀಂದ್ರ ಜಡೇಜಾ - ಭಾರತ

* 19- ಸರ್ಫರಾಜ್ ಅಹಮದ್ - ಪಾಕಿಸ್ತಾನ

* 16- ಕ್ವಿಂಟನ್ ಡಿ ಕಾಕ್ - ದಕ್ಷಿಣ ಆಫ್ರಿಕಾ

* 14- ಜೇಸನ್ ಹೋಲ್ಡರ್ - ವೆಸ್ಟ್ ಇಂಡೀಸ್