ಶಫಾಲಿ ವರ್ಮಾ ಆಲ್‌ರೌಂಡರ್ ಆಟ; ಭಾರತ ವನಿತೆಯರಿಗೆ ಚೊಚ್ಚಲ ವಿಶ್ವಕಪ್ ಕಿರೀಟ!
India won maiden women's World Cup: ಶಫಾಲಿ ವರ್ಮಾ ಆಲ್‌ರೌಂಡರ್ ಆಟದ ಬಲದಿಂದ ಭಾರತ ಮಹಿಳಾ ತಂಡ, ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಆ ಮೂಲಕ ಹರ್ಮನ್‌ಪ್ರೀತ್ ಕೌರ್ ಪಡೆ ತವರು ಅಭಿಮಾನಿಗಳ ಎದುರು ವಿಶ್ವಕಪ್ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು.
ಚೊಚ್ಚಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ ತಂಡ. -
ನವ ಮುಂಬೈ: ಭಾರತ ಮಹಿಳಾ ತಂಡದ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಕೊನೆಗೂ ನನಸಾಯಿತು. ಶಫಾಲಿ ವರ್ಮಾ (Shafali Verma) ಆಲ್‌ರೌಂಡರ್ ಆಟದ ಬಲದಿಂದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ, ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಮಣಿಸಿ ಚೊಚ್ಚಲ ಮಹಿಳಾ ವಿಶ್ವಕಪ್ ಟ್ರೋಫಿಯನ್ನು (Women's World Cup 2025) ಮುಡಿಗೇರಿಸಿಕೊಂಡಿತು. ಇನ್ನು ನಾಯಕಿ ಲಾರಾ ವಾಲ್ವಾರ್ಡ್ಟ್ (Laura Wolvaardt) ಹೋರಾಟದ ಶತಕದ ಹೊರತಾಗಿಯೂ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು. ಇನ್ನೂ ಈ ಪಂದ್ಯದಲ್ಲಿ ಅರ್ಧಶತಕ ಹಾಗೂ ಎರಡು ಪ್ರಮುಖ ವಿಕೆಟ್ ಕಿತ್ತು ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಶಫಾಲಿ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾನುವಾರ ಇಲ್ಲಿನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 299 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ನಾಯಕಿ ಲಾರಾ ವಾಲ್ವಾರ್ಡ್ಟ್ ಅವರ ಶತಕದ ಹೊರತಾಗಿಯೂ, ದೀಪ್ತಿ ಶರ್ಮಾ ಸ್ಪಿನ್ ಮೋಡಿಗೆ ನಲುಗಿ 45.3 ಓವರ್‌ಗಳಿಗೆ 246 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಇದರ ಶ್ರೇಯ ಭಾರತದ ಬೌಲರ್‌ಗಳಿಗೆ ಅದರಲ್ಲಿಯೂ ವಿಶೇಷವಾಗಿ ದೀಪ್ತಿ ಶರ್ಮಾಗೆ ಸಲ್ಲಬೇಕು. ಅವರು ಬೌಲ್ ಮಾಡಿದ 9.3 ಓವರ್‌ಗಳಿಗೆ ಕೇವಲ 39 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು ಹಾಗೂ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
Women's World Cup final: 3 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಶಫಾಲಿ ವರ್ಮಾ!
ಲಾರಾ ವಾಲ್ವಾರ್ಡ್ಟ್ ಶತಕ ವ್ಯರ್ಥ
ಇಂಗ್ಲೆಂಡ್ ವಿರುದ್ದ ಸೆಮಿಫೈನಲ್‌ನಲ್ಲಿ ಶತಕ ಸಿಡಿಸಿದ್ದ ಲಾರಾ ವಾಲ್ವಾರ್ಡ್ಟ್, ಭಾರತದ ಎದುರು ಫೈನಲ್‌ನಲ್ಲಿಯೂ ಶತಕ ಬಾರಿಸಿದರು. ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್‌ಗಳು ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಲಾರಾ ಎಲ್ಲರ ಮನಸು ಗೆದ್ದರು. ಅವರು ಆಡಿದ 98 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 101 ರನ್‌ಗಳನ್ನು ಕಲೆ ಹಾಕಿದರು. ಆದರೆ, ಇನ್ನುಳಿದ ಯಾವುದೇ ಬ್ಯಾಟರ್ ದೀರ್ಘಾವಧಿ ಸಾಥ್ ನೀಡದ ಕಾರಣ ದಕ್ಷಿಣ ಆಫ್ರಿಕಾ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
𝐂.𝐇.𝐀.𝐌.𝐏.𝐈.𝐎.𝐍.𝐒 🏆
— BCCI Women (@BCCIWomen) November 2, 2025
Congratulations to #TeamIndia on winning their maiden ICC Women's Cricket World Cup 🇮🇳
Take. A. Bow 🙌#WomenInBlue | #CWC25 | #Final | #INDvSA pic.twitter.com/rYIFjasxmc
ತಂಝಿಮ್ ಬ್ರಿಟ್ಸ್ (23), ಸುನ್ ಲುಸ್ (25) ಹಾಗೂ ಅನೆರ್ಕಿ ಡೆಕರ್ಸನ್ (35) ಅವರು ಕೆಲಕಾಲ ಕ್ರೀಸ್‌ನಲ್ಲಿ ಹೋರಾಟ ನಡೆಸಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಭಾರತದ ಪರ ದೀಪ್ತಿ ಶರ್ಮಾ ಅವರ ಜೊತೆಗೆ ಶಫಾಲಿ ವರ್ಮಾ ಎರಡು ವಿಕೆಟ್ ಮತ್ತು ಶ್ರೀ ಚರಣಿ ಒಂದು ವಿಕೆಟ್ ಪಡೆದರು.
Talk about making an impact 🫡
— BCCI Women (@BCCIWomen) November 2, 2025
Shafali Verma becomes the first player to score a 5️⃣0️⃣ and take 2️⃣ wickets in an ICC Women's World Cup final 🙌
Updates ▶ https://t.co/TIbbeE4ViO#TeamIndia | #WomenInBlue | #INDvSA | #CWC25 | #Final | @TheShafaliVerma pic.twitter.com/xoCdCX81BG
298 ರನ್ ಕಲೆ ಹಾಕಿದ್ದ ಭಾರತ
ಇದಕ್ಕೂ ಮುನ್ನ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. ಈ ಕಾರಣದಿಂದ ಪಂದ್ಯದ ಟಾಸ್ ವಿಳಂಬವಾಗಿತ್ತು. ಅಂದ ಹಾಗೆ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 299 ರನ್‌ಗಳ ಗುರಿಯನ್ನು ನೀಡಿತು.
Talk about making an impact 🫡
— BCCI Women (@BCCIWomen) November 2, 2025
Shafali Verma becomes the first player to score a 5️⃣0️⃣ and take 2️⃣ wickets in an ICC Women's World Cup final 🙌
Updates ▶ https://t.co/TIbbeE4ViO#TeamIndia | #WomenInBlue | #INDvSA | #CWC25 | #Final | @TheShafaliVerma pic.twitter.com/xoCdCX81BG
ಶಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್
ಕಳೆದ ಪಂದ್ಯದಲ್ಲಿ 10ರನ್‌ಗೆ ವಿಕೆಟ್ ಒಪ್ಪಿಸಿದ್ದ ಶಫಾಲಿ ವರ್ಮಾ, ಫೈನಲ್‌ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಿದರು. ಅವರು ಆಡಿದ 78 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 87 ರನ್‌ಗಳನ್ನು ಕಲೆ ಹಾಕಿದರು. ಅಲ್ಲದೆ, 45 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಸ್ಮೃತಿ ಮಂಧಾನಾ ಅವರ ಜೊತೆ ಮೊದಲನೇ ವಿಕೆಟ್‌ಗೆ 104 ರನ್ ಕಲೆ ಹಾಕಿದರು.
2⃣1⃣5⃣ runs 👏
— BCCI Women (@BCCIWomen) November 2, 2025
2⃣2⃣ wickets 💪
Leading wicket-taker of #CWC25 ✨
Presenting the Player of the Tournament in #TeamIndia's World Cup-winning campaign - The ever dependable Deepti Sharma 🥳
Scorecard ▶ https://t.co/TIbbeE4ViO#WomenInBlue | #INDvSA | #Final | @Deepti_Sharma06 pic.twitter.com/kF0tkf4f46
ದೀಪ್ತಿ ಶರ್ಮಾ ಅರ್ಧಶತಕ
ಸೆಮಿಫೈನಲ್‌ನಲ್ಲಿ ಶತಕ ಬಾರಿಸಿ ಭಾರತ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದ ಜೆಮಿಮಾ ರೊಡ್ರಿಗಸ್ (24) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (20) ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆರಂಭ ಪಡೆದರೂ ವಿಫಲರಾದರು. ಆದರೆ, ದೀಪ್ತಿ ಶರ್ಮಾ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 58 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 58 ರನ್‌ಗಳನ್ನು ಗಳಿಸಿದ್ದರು. ರಿಚಾ ಘೋಷ್ ಕೊನೆಯಲ್ಲಿ 24 ಎಸೆತಗಳಲ್ಲಿ 34 ರನ್‌ಗಳನ್ನು ಗಳಿಸಿದ್ದರು.
ಸ್ಕೋರ್ ವಿವರ
ಭಾರತ: 50 ಓವರ್‌ಗಳಿಗೆ 298-7 (ಶಫಾಲಿ ವರ್ಮಾ 87, ದೀಪ್ತಿ ಶರ್ಮಾ 58, ಸ್ಮೃತಿ ಮಂಧಾನಾ 45, ರಿಚಾ ಘೋಷ್ 34 (ಆಯಾಬಂಗ ಖಾಕ 58ಕ್ಕೆ 3)
ದಕ್ಷಿಣ ಆಫ್ರಿಕಾ: 45.3 ಓವರ್‌ಗಳಿಗೆ 246-10 (ಲಾರಾ ವಾಲ್ವಾರ್ಡ್ಟ್ 101, ಅನ್ನೇಲಿ ಡರ್ಕಸನ್ 35; ದೀಪ್ತಿ ಶರ್ಮಾ 39ಕ್ಕೆ 5, ಶಫಾಲಿ ವರ್ಮಾ 32 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಶಫಾಲಿ ವರ್ಮಾ
ಟೂರ್ನಿ ಶ್ರೇಷ್ಠ ಪ್ರಶಸ್ತಿ: ದೀಪ್ತಿ ಶರ್ಮಾ