ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻವೈಫೈ ಸ್ವಿಚ್‌ ಆಫ್‌ ಮಾಡಿದ್ದೆʼ-ಹೊರಗಡೆ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬಾರದೆಂದ ಸಂಜು ಸ್ಯಾಮ್ಸನ್‌!

ತಮ್ಮ ಸುತ್ತಲಿನ ಹೊರಗಿನ ಶಬ್ದ ಹಾಗೂ ಒತ್ತಡ ಹೆಚ್ಚಾದಾಗ ಅದರಿಂದ ದೂರವಿರಲು ವೈ-ಫೈ ಆಫ್ ಮಾಡಲು ಪ್ರಯತ್ನಿಸುತ್ತೇನೆ ಎಂದು ಟೀಮ್‌ ಇಂಡಿಯಾ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಸ್ಯಾಮ್ಸನ್ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಇವರ ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ, ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

IND vs AFG: ಅರ್ಧಶತಕ ಸಿಡಿಸಿದ ಬಳಿಕ ಸಂಜು ಸ್ಯಾಮ್ಸನ್‌ ಹೇಳಿದ್ದಿದು!

ಅರ್ಧಶತಕ ಸಿಡಿಸಿದ ಬಳಿಕ ಸಂಜು ಸ್ಯಾಮ್ಸನ್‌ ಹೇಳಿಕೆ. -

Profile
Ramesh Kote Sep 16, 2026 9:29 AM

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ (IND vs SAFG) ಸಂಜು ಸ್ಯಾಮ್ಸನ್ (Sanju Samson) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. ಕೇವಲ 22 ಎಸೆತಗಳಲ್ಲಿ 57 ರನ್ ಗಳಿಸಿ ಭಾರತ ತಂಡದ 7 ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಪಂದ್ಯದ ಬಳಿಕ ಸಂಜು ಸ್ಯಾಮ್ಸನ್‌, ಕಳೆದ ಹಲವು ದಿನಗಳಲ್ಲಿ ತಾವು ಅನುಭವಿಸಿದ ಸನ್ನಿವೇಶಗಳನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ. ಹೊರಗಡೆ ಮಾತುಗಳಿಂದ ದೂರ ಇರಲು ತಾವು ವೈಫೈ ಆಫ್‌ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಆದರೆ ಈ ಪಂದ್ಯಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರ ಫಾರ್ಮ್ ಮತ್ತು ತಂಡದಲ್ಲಿನ ಸ್ಥಾನ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. 2026ರ ಐಸಿಸಿ ಟಿ20 ವಿಶ್ವಕಪ್ ನಂತರದ ಹಿಂದಿನ ಐದು ಟಿ20 ಇನಿಂಗ್ಸ್‌ಗಳಲ್ಲಿ ಅವರು ಒಟ್ಟು 43 ರನ್ ಗಳಿಸಿದ್ದರಿಂದ ಟೀಕೆ ಎದುರಿಸಿದ್ದರು. ಜೊತೆಗೆ ವೈಭವ್‌ ಸೂರ್ಯವಂಶಿ ಹಾಗೂ ಅಭಿಷೇಕ್‌ ಶರ್ಮಾ ಅವರೊಂದಿಗೆ ಭಾರತ ತಂಡದ ಟಾಪ್‌ ಆರ್ಡರ್‌ನಲ್ಲಿ ಸ್ಪರ್ಧೆಯೂ ಹೆಚ್ಚಾಗಿತ್ತು.

IND vs AFG: ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ಗೆ ಆಫ್ಘನ್ ತತ್ತರ, ಭಾರತಕ್ಕೆ ಟಿ20ಐ ಸರಣಿ!

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ “ನಕಾರಾತ್ಮಕ ಕಾಮೆಂಟ್‌ಗಳನ್ನು ನೀವು ಹೇಗೆ ಎದುರಿಸುತ್ತೀರಿ?” ಎಂದು ಕೇಳಿದಾಗ ಸ್ಯಾಮ್ಸನ್ ಹಾಸ್ಯಭರಿತವಾಗಿ “ನಾನು ವೈ-ಫೈ ಆಫ್ ಮಾಡಿಬಿಡುತ್ತೇನೆ” ಎಂದು ಉತ್ತರಿಸಿದರು. ಅಂದರೆ, ಸಾಮಾಜಿಕ ಮಾಧ್ಯಮ ಹಾಗೂ ಹೊರಗಿನ ಚರ್ಚೆಗಳಿಂದ ಸಾಧ್ಯವಾದಷ್ಟು ದೂರವಿದ್ದು ತನ್ನ ಆಟದ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸುತ್ತೇನೆ ಎಂಬುದು ಅವರ ಮಾತಿನ ಅರ್ಥ.

ಆದರೆ, ಸ್ಯಾಮ್ಸನ್ ಮತ್ತೊಂದು ಪ್ರಮುಖ ವಿಷಯವನ್ನೂ ಒಪ್ಪಿಕೊಂಡಿದ್ದಾರೆ. ಆಟಗಾರರು “ಯಂತ್ರಗಳಲ್ಲ, ರೋಬೋಟ್‌ಗಳಲ್ಲ”; ಹೊರಗಿನಿಂದ ಬರುವ ಟೀಕೆ ಮತ್ತು ಶಬ್ದಗಳು ಆಟಗಾರರ ಮೇಲೂ ಪರಿಣಾಮ ಬೀರುತ್ತವೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಅಂದರೆ, ಅನುಭವ ಹೊಂದಿರುವ ಕ್ರಿಕೆಟಿಗರಾಗಿದ್ದರೂ ನಿರಂತರ ಟೀಕೆಗಳಿಂದ ಸಂಪೂರ್ಣವಾಗಿ ಪ್ರಭಾವಿತರಾಗದೆ ಇರುವುದು ಸುಲಭವಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.



“ನನಗೂ ಸ್ವಲ್ಪ ಬೇಸರವಾಗುತ್ತದೆ. ನಾನು ಯಂತ್ರವಲ್ಲ ಅಥವಾ ರೋಬೋಟ್‌ ಅಲ್ಲ. ‘ಇಲ್ಲ, ನನಗೆ ಯಾವುದೂ ಕಾಳಜಿಯಿಲ್ಲ’ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಕಾಳಜಿ ಇದೆ. ಕೆಲವೊಮ್ಮೆ ಹೊರಗಿನ ವಿಚಾರಗಳಿಂದ ಸ್ವಲ್ಪ ಪರಿಣಾಮಕ್ಕೊಳಗಾಗುತ್ತೇನೆ. ಆದರೆ ನಂತರ ನನ್ನೊಂದಿಗೆ ನಾನೇ ಮಾತನಾಡಿಕೊಳ್ಳುತ್ತೇನೆ. ನಾನು ಯಾರು, ನಾನು ಏನು ಮಾಡಬೇಕು ಎಂಬುದನ್ನು ನನಗೆ ನಾನೇ ನೆನಪಿಸಿಕೊಳ್ಳುತ್ತೇನೆ,” ಎಂದು ಸ್ಯಾಮ್ಸನ್ ಹೇಳಿದ್ದಾರೆ.

“ಭಾರತದಲ್ಲಿ ಕ್ರಿಕೆಟಿಗನ ಮೇಲೆ ಹೊರಗಿನ ಶಬ್ದಗಳು ಖಂಡಿತವಾಗಿಯೂ ಪರಿಣಾಮ ಬೀರುತ್ತವೆ ಎಂದು ನಾನು ಭಾವಿಸುತ್ತೇನೆ. ಆದರೆ ನಿಮ್ಮ ಮನಸ್ಥಿತಿ ಏನು, ನೀವು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಯಾವ ಮನಸ್ಥಿತಿಯೊಂದಿಗೆ ಆಡಬೇಕು ಎಂಬುದರ ಬಗ್ಗೆ ನೀವು ತುಂಬಾ ಸ್ಪಷ್ಟವಾಗಿರಬೇಕು,” ಎಂದು ಸ್ಯಾಮ್ಸನ್ ತಿಳಿಸಿದ್ದಾರೆ.

IND vs AFG: 11 ಪಂದ್ಯಗಳಲ್ಲಿ ಟಾಸ್‌ ಗೆದ್ದು ನಾಯಕನಾಗಿ ವಿಶ್ವ ದಾಖಲೆ ಬರೆದ ಶ್ರೇಯಸ್‌ ಅಯ್ಯರ್‌!

ತಮ್ಮ ಬ್ಯಾಟಿಂಗ್‌ ವೇಳೆ ಹೊರಗಿನ ಟೀಕೆಗಳ ಬಗ್ಗೆ ಯೋಚಿಸುತ್ತಿದ್ದರೆ ಸಹಜ ಆಟ ಆಡಲು ಸಾಧ್ಯವಾಗುವುದಿಲ್ಲ ಎಂದು ಸ್ಯಾಮ್ಸನ್ ವಿವರಿಸಿದ್ದಾರೆ.

“ನಾನು ಆ ವಿಚಾರದ ಬಗ್ಗೆ ಗಮನ ಹರಿಸುತ್ತಿದ್ದರೆ, ಈ ರೀತಿಯಾಗಿ ಬ್ಯಾಟ್ ಮಾಡಲು ಸಾಧ್ಯವಿಲ್ಲ. ಬ್ಯಾಟ್ ಬೀಸುವ ಮುನ್ನವೇ ‘ಯಾರ್, ನಾನು ಔಟಾದರೆ ಮತ್ತೆ ವೈ-ಫೈ ಸಮಸ್ಯೆಯಾಗುತ್ತದೆ’ ಎಂದು ಹತ್ತು ಬಾರಿ ಯೋಚಿಸುತ್ತಿರುತ್ತೇನೆ,” ಎಂದು ಸ್ಯಾಮ್ಸನ್ ಹಾಸ್ಯಭರಿತವಾಗಿ ಹೇಳಿದ್ದಾರೆ.