IND vs AUS: ಶ್ರೇಯಸ್ ಅಯ್ಯರ್ ಆರೋಗ್ಯದಲ್ಲಿ ಸುಧಾರಣೆ, ಐಸಿಯುನಿಂದ ವಾರ್ಡ್‌ಗೆ ಶಿಫ್ಟ್!
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದ ವೇಳೆ ಪಕ್ಕೆಲುಬು ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಪಕ್ಕೆಲುಬಿಗೆ ಗಂಭೀರ ಗಾಯವಾಗಿದ್ದ ಕಾರಣ ಆಂತರಿಕ ರಕ್ತಸ್ರಾವವಾಗಿ ಎರಡು ದಿನಗಳ ಹಿಂದೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಸ್ವಲ್ಪ ಚೇತರಿಕೆ ಕಂಡು ಬಂದಿದ್ದು, ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ಶ್ರೇಯಸ್ ಅಯ್ಯರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. -
ನವದೆಹಲಿ: ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರ ಆರೋಗ್ಯದಲ್ಲಿ ಇಂದು ಅಲ್ಪ ಚೇತರಿಕೆ ಕಂಡು ಬಂದಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ (IND vs AUS) ವೇಳೆ ಅಲೆಕ್ಸ್ ಕೇರಿ ಅವರ ಕ್ಯಾಚ್ ಪಡೆಯುವ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿದ್ದ ಅಯ್ಯರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ ಅವರ ಪೆಕ್ಕೆಲುಬಿನಲ್ಲಿ ಆಂತರಿಕ ರಕ್ತಸ್ರಾವವಾಗಿದ್ದ ಕಾರಣ ಐಸಿಯುನಲ್ಲಿರಿಸಲಾಗಿತ್ತು. ಆದರೆ ಸ್ವಲ್ಪ ನಿಯಂತ್ರಣ ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ಶ್ರೇಯಸ್ ಅಯ್ಯರ್ (Shreyas Iyer Injury Updates) ಅವರನ್ನು ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದ್ದು, ಸಣ್ಣದೊಂದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ಶ್ರೇಯಸ್ ತಂಡದ ಸಹ ಆಟಗಾರರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, ಮಾನಸಿಕವಾಗಿ ಧೃಡವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅವರ ಕುಟುಂಬವು ಸಿಡ್ನಿಗೆ ತಲುಪಿದ್ದು, ಸಂಪೂರ್ಣ ಅವರ ಹಾರೈಕೆಯಲ್ಲಿ ತೊಡಗಿದೆ. ಇನ್ನೂ ಬಿಸಿಸಿಐ ತಂಡದ ವೈದ್ಯರು ಶ್ರೇಯಸ್ ಜೊತೆಗಿದ್ದು, ಅವರ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿದ್ದಾರೆ. ಬಿಸಿಸಿಐ ಅಯ್ಯರ್ ಅವರ ಆರೋಗ್ಯದ ಸ್ಥಿತಿಗತಿ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅವರು ಸ್ಥಿರರಾಗಿದ್ದಾರೆ, ಗಾಯದಿಂದ ಚೇತರಿಸಿಕೊಳ್ಳುವಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಹೇಳಿದೆ.
"ಅಕ್ಟೋಬರ್ 25 ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಅವರ ಪಕ್ಕೆಲುಬಿನಲ್ಲಿ ಗಾಯವಾಗಿದೆ. ಇದರ ಪರಿಣಾಮವಾಗಿ ಅವರ ಪಕ್ಕೆಲುಬಿನಲ್ಲಿ ಆಂತರಿಕ ರಕ್ತಸ್ರಾವವಾಗಿದೆ."
Shreyas Iyer: ಶ್ರೇಯಸ್ ಅಯ್ಯರ್ ಆರೋಗ್ಯ ಗಭೀರ! ಐಸಿಯುಗೆ ದಾಖಲಾದ ಉಪ ನಾಯಕ!
"ಅವರು ನೋವಿನಿಂದ ಮೈದಾನದಲ್ಲಿ ನೆಲಕ್ಕೆ ಕುಸಿದ ಬಿದ್ದ ಕೂಡಲೇ ವೈದ್ಯರು ಗಾಯವನ್ನು ತಕ್ಷಣ ಗುರುತಿಸಿ ಮತ್ತು ರಕ್ತಸ್ರಾವವನ್ನು ತಕ್ಷಣವೇ ನಿಲ್ಲಿಸಲಾಯಿತು. ಅವರ ಸ್ಥಿತಿ ಈಗ ಸ್ಥಿರವಾಗಿದೆ. ಅಕ್ಟೋಬರ್ 28 ಮಂಗಳವಾರ ಮತ್ತೊಮ್ಮೆ ಗಾಯವಾಗಿರುವ ಭಾಗವನ್ನು ಸ್ಕ್ಯಾನ್ ಮಾಡಲಾಗಿದ್ದು, ಗಮನಾರ್ಹ ಸುಧಾರಣೆ ಕಂಡುಬಂದಿದೆ. ಶ್ರೇಯಸ್ ಚೇತರಿಸಿಕೊಂಡಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಸಿಡ್ನಿ ಮತ್ತು ಭಾರತದ ತಜ್ಞರೊಂದಿಗೆ ಸಮಾಲೋಚಿಸಿ ಅವರ ಆರೋಗ್ಯದ ಸುಧಾರಣೆಗೆ ಅಗತ್ಯವಿರುವ ಚಿಕಿತ್ಸಾ ಕ್ರಮವನ್ನು ಮುಂದುವರಿಸುತ್ತದೆ," ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
🚨 BIG BREAKING 🚨
— lndian Sports Netwrk (@IS_Netwrk) October 27, 2025
Shreyas Iyer is safe now.
Shreyas Iyer has been moved out of the ICU ,now in a stable condition.@ShreyasIyer15❤️#Indiancricket #ShreyasIyer pic.twitter.com/uWSgr4d6Af
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೂರ್ಯಕುಮಾರ್ ಯಾದವ್ "ಮೊದಲ ದಿನ, ಅವರು ಗಾಯಗೊಂಡಿದ್ದಾರೆಂದು ತಿಳಿದಾಗ, ನಾನು ಅವರಿಗೆ ಕರೆ ಮಾಡಿದೆ. ಅವರ ಬಳಿ ಫೋನ್ ಇಲ್ಲ ಎಂದು ನನಗೆ ತಿಳಿಯಿತು. ಹಾಗಾಗಿ, ನಾನು ಫಿಸಿಯೊಗೆ ಕರೆ ಮಾಡಿದೆ ಮತ್ತು ಅವರು ಸ್ಥಿರವಾಗಿದ್ದಾರೆ ಎಂದು ಹೇಳಿದರು. ಮೊದಲ ದಿನ ನೀವು ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ಎರಡು ದಿನಗಳಿಂದ ನಾನು ಅವರೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ಅವರು ಫೋನ್‌ನಲ್ಲಿ ಉತ್ತರಿಸುತ್ತಿದ್ದಾರೆ. ಅವರು ಉತ್ತರಿಸುತ್ತಿದ್ದರೆ, ಅವರು ಸ್ಥಿರವಾಗಿದ್ದಾರೆ ಎಂದರ್ಥ. ಅವರು ಚೆನ್ನಾಗಿದ್ದಾರೆ, ವೈದ್ಯರು ಅವರೊಂದಿಗೆ ಇದ್ದಾರೆ. ಆದರೆ ಅವರು ಮುಂದಿನ ಕೆಲವು ದಿನಗಳವರೆಗೆ ಚಿಕಿತ್ಸೆಗೆ ಒಳಪಡಲಿದ್ದಾರೆ," ಎಂದು ಹೇಳಿದರು.
ಪಕ್ಕೆಲುಬಿನ ಗಾಯದಿಂದ ಸಂಪೂರ್ಣವಾಗಿ ಗುಣಮುಖವಾಗಲು ಆರರಿಂದ 12 ವಾರಗಳು ಬೇಕಾಗುತ್ತದೆ ಮತ್ತು ಶ್ರೇಯಸ್ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕಳೆದುಕೊಳ್ಳಲಿದ್ದಾರೆ.