ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ʻತುಂಬಾ ನಿರಾಶೆಯಾಯಿತುʼ-ಭಾರತ ತಂಡವನ್ನು ಟೀಕಿಸಿದ ಸೌರವ್‌ ಗಂಗೂಲಿ!

Sourav Ganguly on India's lost against England: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಮೂರನೇ ಟೆಸ್ಟ್‌ ಪಂದ್ಯ ಅತ್ಯಂತ ಕುತೂಹಲದಿಂದ ಕೂಡಿತ್ತು. ಇಂಗ್ಲೆಂಡ್‌ ನೀಡಿದ್ದ 193 ರನ್‌ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ 22 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾವನ್ನು ಮಾಜಿ ನಾಯಕ ಸೌರವ್‌ ಗಂಗೂಲಿ ಟೀಕಿಸಿದ್ದಾರೆ.

ಭಾರತದ ಅಗ್ರ ಕ್ರಮಾಂಕವನ್ನು ಟೀಕಿಸಿದ ಸೌರವ್‌ ಗಂಗೂಲಿ!

ಭಾರತ ತಂಡವನ್ನು ಟೀಕಿಸಿದ ಸೌರವ್‌ ಗಂಗೂಲಿ.

Profile Ramesh Kote Jul 16, 2025 5:49 PM

ನವದೆಹಲಿ: ಮೂರನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್‌ ನೀಡಿದ್ದ 193 ರನ್‌ಗಳ ಸಾಧಾರಣ ಗುರಿಯನ್ನು ಚೇಸ್‌ ಮಾಡುವಲ್ಲಿ ವಿಫಲವಾಗಿದ್ದ ಭಾರತ ತಂಡವನ್ನು (India) ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಟೀಕಿಸಿದ್ದಾರೆ. ಅಲ್ಲದೆ ಭಾರತ ತಂಡದ ಚೇಸಿಂಗ್‌ನಲ್ಲಿ ರವೀಂದ್ರ ಜಡೇಜಾ ಕಠಿಣ ಹೋರಾಟ ನಡೆಸಿದ್ದರು. ಆದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಕೆಎಲ್‌ ರಾಹುಲ್‌ 39 ರನ್‌ ಹಾಗೂ ರವೀಂದ್ರ ಜಡೇಜಾ 61 ರನ್‌ಗಳಿಸಿದ್ದರು. ಭಾರತ ತಂಡ 170 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ 22 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ಗೆಲುವಿನ ಮೂಲಕ ಇಂಗ್ಲೆಂಡ್‌ ತಂಡ 2-1 ಮುನ್ನಡೆ ಪಡೆದಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೌರವ್‌ ಗಂಗೂಲಿ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇನ್ನಷ್ಟು ಉತ್ತಮವಾಗಿ ಕಠಿಣ ಹೋರಾಟ ನಡಸಿದ್ದರೆ, ಭಾರತ ತಂಡ ಗೆಲುವು ಪಡೆದಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ನನಗೆ ಸ್ವಲ್ಪ ಬೇಸರವಾಯಿತು. ಈ ಸರಣಿಯಲ್ಲಿ ಭಾರತ ತಂಡದ ಬ್ಯಾಟಿಂಗ್‌ ನೋಡಿದರೆ, 190 ರನ್‌ಗಳ ಗುರಿಯನ್ನು ಅವರು ಸುಲಭವಾಗಿ ಚೇಸ್‌ ಮಾಡಬಹುದಿತ್ತು. ರವೀಂದ್ರ ಜಡೇಜಾ ಅವರ ಬ್ಯಾಟಿಂಗ್‌ ಹಾಗೂ ತಂಡದಲ್ಲಿನ ಬ್ಯಾಟಿಂಗ್‌ ಗುಣಮಟ್ಟ ನೋಡಿದರೆ, ಈ ಸರಣಿಯಲ್ಲಿ ಸುಲಭವಾಗಿ 2-1 ಮುನ್ನಡೆ ಪಡೆಯಬಹುದಿತ್ತು. 190 ರನ್‌ಗಳನ್ನು ಚೇಸ್‌ ಮಾಡಿಲ್ಲವಲ್ಲ ಎಂಬ ಕಾರಣಕ್ಕೆ ಟೀಮ್‌ ಇಂಡಿಯಾ ಆಟಗಾರರು ಕೂಡ ತುಂಬಾ ನಿರಾಶೆಯಾಗಿರುತ್ತಾರೆಂದು ನಾನು ಭಾವಿಸುತ್ತೇನೆ. ಏಕೆಂದರೆ ತಂಡದಲ್ಲಿ ಆ ರೀತಿಯ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಿದ್ದಾರೆ," ಎಂದು ಬಿಸಿಸಿಐ ಮಾಜಿ ನಾಯಕ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

IND vs ENG: ಕರುಣ್‌ ನಾಯರ್‌ ಔಟ್‌, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

"ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸ್ವಲ್ಪ ಕಠಿಣ ಹೋರಾಟ ನಡೆಸಿದ್ದರೆ, ಪ್ರವಾಸಿ ತಂಡ ಸುಲಭವಾಗಿ ಗೆಲುವು ಪಡೆದಿರುತ್ತಿತ್ತು," ಎಂದಿದ್ದಾರೆ ದಾದಾ.

ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಆದರೆ, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ಕೊನೆಯ ಹಂತದಲ್ಲಿ ಕಠಿಣ ಹೋರಾಟ ನಡೆಸಿದ್ದರು. ಬುಮ್ರಾ ಹಾಗೂ ಜಡೇಜಾ 35 ರನ್‌ಗಳ ಜೊತೆಯಾಟವನ್ನು ಆಡಿದ್ದರು. ನಂತರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್‌ ಸಿರಾಜ್‌ ಕೊನೆಯ ವಿಕೆಟ್‌ಗೆ 23 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆದರೆ, ಚೆಂಡನ್ನು ರಕ್ಷಣಾತ್ಮಕವಾಗಿ ಆಡುತ್ತಿದ್ದರೂ ಟೈಲೆಂಟರ್‌ಗಳು ವಿಕೆಟ್‌ ಒಪ್ಪಿಸಿದ್ದರು.

IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್‌ ವಿರುದ್ಧ ಆರ್‌ ಅಶ್ವಿನ್‌ ಕಿಡಿ!

"ರವೀಂದ್ರ ಜಡೇಜಾ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು ಇದೇ ರೀತಿಯಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪ್ರದರ್ಶನವನ್ನು ತೋರಿದರೆ ಅವರು ಸಾಧ್ಯವಾದಷ್ಟು ದೀರ್ಘಾವದಿ ಭಾರತ ತಂಡದ ಪರ ಆಡಲಿದ್ದಾರೆ. ಅವರು ಈಗಾಗಲೇ ಭಾರತ ತಂಡದಲ್ಲಿ ದೀರ್ಘಾವಧಿ ಆಡಿದ್ದಾರೆ. ಅವರು 80ಕ್ಕೂ ಅಧಿಕ ಟೆಸ್ಟ್‌ ಪಂದ್ಯಗಳು ಹಾಗೂ 200ಕ್ಕೂ ಅಧಿಕ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನೀವು ಅವರಿಂದ ಬೌಲಿಂಗ್‌, ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ ನೋಡಬಹುದು. ಅವರು ವಿಶೇಷ ಆಟಗಾರ ಹಾಗೂ ಅವರು ಕಳೆದ ಹಲವು ವರ್ಷಗಳಿಂದ ಬ್ಯಾಟಿಂಗ್‌ನಲ್ಲಿ ಸುಧಾರಿಸಿಕೊಂಡಿದ್ದಾರೆ," ಎಂದು ಸೌರವ್‌ ಗಂಗೂಲಿ ತಿಳಿಸಿದ್ದಾರೆ.