ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ನಾಲ್ಕನೇ ಟೆಸ್ಟ್‌ನಲ್ಲಿ ರಿಷಭ್‌ ಪಂತ್‌ಗೆ ವಿಕೆಟ್‌ ಕೀಪಿಂಗ್‌ ನೀಡಲ್ಲ ಎಂದ ಕೋಚ್‌!

Ryan Ten Doeschate on Rishah Pant: ಗಾಯದಿಂದ ಬಳಲುತ್ತಿರುವ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಜುಲೈ 23 ರಂದು ಮ್ಯಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ನಲ್ಲಿಯೂ ವಿಕೆಟ್‌ ಕೀಪಿಂಗ್‌ ನಿರ್ವಹಿಸುವುದಿಲ್ಲವೆಂದು ಟೀಮ್‌ ಇಂಡಿಯಾ ಸಹಾಯಕ ಕೋಚ್‌ ರಯಾನ್‌ ಟೆನ್‌ ಡಶಾಟ್‌ ತಿಳಿಸಿದ್ದಾರೆ.

ನಾಲ್ಕನೇ ಟೆಸ್ಟ್‌ನಲ್ಲಿಯೂ ಪಂತ್‌ಗೆ ವಿಕೆಟ್‌ ಕೀಪಿಂಗ್‌ ಇಲ್ಲ: ಕೋಚ್‌

ನಾಲ್ಕನೇ ಟೆಸ್ಟ್‌ನಲ್ಲಿಯೂ ರಿಷಭ್‌ ಪಂತ್‌ಗೆ ವಿಕೆಟ್‌ ಕೀಪಿಂಗ್‌ ಇಲ್ಲ.

Profile Ramesh Kote Jul 17, 2025 9:43 PM

ನವದೆಹಲಿ: ಗಾಯದಿಂದ ಗುಣಮುಖರಾಗುತ್ತಿರುವ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ (Rishabh Pant) ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಜುಲೈ 23 ರಂದು ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಆಡಲಿದ್ದಾರೆಂದು ಸ್ಪಷ್ಟಪಡಿಸಿದ ಟೀಮ್‌ ಇಂಡಿಯಾ ಸಹಾಯಕ ಕೋಚ್‌ ರಯಾನ್‌ ಟೆನ್‌ ಡಶಾಟ್‌ (Ryan Test Doeschate), ಆದರೆ ಅವರು ವಿಕೆಟ್‌ ಕೀಪಿಂಗ್‌ ನಿರ್ವಹಿಸುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ. ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ರಿಷಭ್‌ ಪಂತ್‌ ಎಡಗೈ ತೋರು ಬೆರಳಿಗೆ ಚೆಂಡನ್ನು ತಗುಲಿಸಿಕೊಂಡು ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಆ ಪಂದ್ಯದಲ್ಲಿ ಧ್ರುವ್‌ ಜುರೆಲ್‌ ವಿಕೆಟ್‌ ಕೀಪಿಂಗ್‌ನಲ್ಲಿ ತೊಡಗಿದ್ದರು.

ರಿಷಭ್‌ ಪಂತ್‌ ಈ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಆಡಿದ ಮೂರು ಟೆಸ್ಟ್‌ ಪಂದ್ಯಗಳಿಂದ 70.83ರ ಸರಾಸರಿಯಲ್ಲಿ 425 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಿಂದ ಕ್ರಮವಾಗಿ 74 ರನ್‌ ಹಾಗೂ 9 ರನ್‌ಗಳನ್ನು ಕಲೆ ಹಾಕಿದ್ದಾರೆ. ಆದರೆ, ಬೆರಳಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರ ಹೊರತಾಗಿಯೂ ಪಂತ್‌ ಬ್ಯಾಟಿಂಗ್‌ ಕಠಿಣ ಹೋರಾಟ ನಡಸಿ ಪ್ರಥಮ ಇನಿಂಗ್ಸ್‌ನಲ್ಲಿ 74 ರನ್‌ಗಳನ್ನು ಕಲೆ ಹಾಕಿದ್ದರು.

IND vs ENG: ಭಾರತ ತಂಡದಲ್ಲಿ ಮೊಹಮ್ಮದ್‌ ಸಿರಾಜ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್‌ ಚೋಪ್ರಾ!

"ಟೆಸ್ಟ್‌ ಪಂದ್ಯಕ್ಕೂ ಮುನ್ನ ರಿಷಭ್‌ ಪಂತ್‌ ಮ್ಯಾಂಚೆಸ್ಟರ್‌ನಲ್ಲಿ ಬ್ಯಾಟಿಂಗ್‌ ನಡೆಸಲಿದ್ದಾರೆ. ಪಂತ್‌ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆಂಬ ಬಗ್ಗೆ ನಾನು ಯೋಚಿಸುವುದಿಲ್ಲ. ಅವರು ನೋವಿನ ಹೊರತಾಗಿಯೂ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟ್‌ ಮಾಡಿದ್ದರು, ಅದು ಅವರಿಗೆ ಸುಲಭವಾಗುತ್ತದೆ," ಎಂದು ಡಶಾಟ್‌ ತಿಳಿಸಿದ್ದಾರೆ.

ರಿಷಭ್‌ ಪಂತ್‌ ಅವರು ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸುವುದು ಕೂಡ ಪಂದ್ಯದ ಕೊನೆಯ ಕ್ಷಣದಲ್ಲಿ ನಿರ್ಧಾರವಾಗಲಿದೆ ಎಂದು ಸಹಾಯಕ ಕೋಚ್‌ ತಿಳಿಸಿದ್ದಾರೆ. ಲಾರ್ಡ್ಸ್‌ನಲ್ಲಿ ಸಂಭವಿಸಿದ್ದ ಸನ್ನಿವೇಶವನ್ನು ಮುಂದುವರಿಸಲು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಇಷ್ಟವಿಲ್ಲ. ಹಾಗಾಗಿ, ಪಂತ್‌ ಅವರನ್ನು ವಿಕೆಟ್‌ ಕೀಪಿಂಗ್‌ನಲ್ಲಿ ಮುಂದುವರಿಸಲು ಸಾಧ್ಯವಾದಷ್ಟು ಪ್ರಯತ್ನಿಸಲಾಗುತ್ತದೆ.

IND vs ENG: ಶುಭಮನ್‌ ಗಿಲ್‌ರನ್ನು ಹಿಂದಿಕ್ಕಬಲ್ಲ ಆಟಗಾರನನ್ನು ಹೆಸರಿಸಿದ ಓವೈಸ್‌ ಶಾ!

"ಕೀಪಿಂಗ್ ಪ್ರಕ್ರಿಯೆಯ ಕೊನೆಯ ಭಾಗವಾಗಿದೆ. ಅವರು ಕೀಪಿಂಗ್ ಮಾಡಬಲ್ಲರು ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಇನಿಂಗ್ಸ್‌ನ ಅರ್ಧದಾರಿಯಲ್ಲೇ ಕೀಪರ್ ಅನ್ನು ಬದಲಾಯಿಸಬೇಕಾದ ಪರಿಸ್ಥಿತಿ ಮತ್ತೆ ಬರಬಾರದು," ಎಂದು ಅವರು ತಿಳಿಸಿದ್ದಾರೆ.

ರಿಷಭ್‌ ಪಂತ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ತಂಡವು ಸಾಧ್ಯವಾದಷ್ಟು ಸಮಯವನ್ನು ನೀಡುತ್ತಿದೆ. ಗಾಯದ ಬೆರಳಿಗೆ ವಿಶ್ರಾಂತಿ ನೀಡುವ ಮತ್ತು ಮ್ಯಾಂಚೆಸ್ಟರ್ ಟೆಸ್ಟ್‌ಗೆ ಮುಂಚಿತವಾಗಿ ಚೇತರಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಲು ಅವರು ಗುರುವಾರ ತರಬೇತಿಯಿಂದ ಹೊರಗುಳಿದ್ದರು.

IND vs ENG: ಕರುಣ್‌ ನಾಯರ್‌ ಔಟ್‌, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

"ಆದರೆ ಅವರು ಇಂದು(ಬುಧವಾರ) ವಿಶ್ರಾಂತಿ ಪಡೆದರು, ಸಾಧ್ಯವಾದಷ್ಟು ಕಾಲ ಬೆರಳಿಗೆ ವಿರಾಮ ನೀಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಆಶಾದಾಯಕವಾಗಿ ಅವರು ಮೊದಲ ಸೆಷನ್‌ನಲ್ಲಿ ಮ್ಯಾಂಚೆಸ್ಟರ್‌ಗೆ ಹೋಗುವುದು ಒಳ್ಳೆಯದು. ಅವರು ಸಮೀಕರಣದಲ್ಲಿದ್ದಾರೆ, ಆದರೆ ನಾನು ಹೇಳುತ್ತಿರುವಂತೆ ಅವರು ಫಿಟ್ ಆಗಿದ್ದರೆ, ಅವರು ಮುಂದಿನ ಟೆಸ್ಟ್ ಆಡುತ್ತಾರೆ ಮತ್ತು ವಿಕೆಟ್‌ ಕೀಪಿಂಗ್‌ ಕೂಡ ನಿರ್ವಹಿಸಲಿದ್ದಾರೆ," ಟೆನ್ ಡಶಾಟ್‌ ತಿಳಿಸಿದ್ದಾರೆ.