ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND A vs AFG A: ಅಫ್ಘಾನಿಸ್ತಾನ ಎದುರು ಗೆದ್ದು ಫೈನಲ್‌ಗೆ ಪ್ರವೇಶಿಸಿದ ಭಾರತ ಎ ತಂಡ!

IND A vs AFG A Match Highlights: ನಿಶಾಂತ್‌ ಸಿಂಧು ಅವರ ಸ್ಪಿನ್‌ ಮೋಡಿಯ ಬಲದಿಂದ ಭಾರತ ಎ ತಂಡ, ಅಫ್ಘಾನಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ 101 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ತ್ರಿಕೋನ ಎ ಸರಣಿಯಲ್ಲಿ ತಿಲಕ್‌ ವರ್ಮಾ ನಾಯಕತ್ವದ ಭಾರತ ಎ ತಂಡ ಫೈನಲ್‌ಗೆ ಅರ್ಹತೆ ಪಡೆಯಿತು. ಇನ್ನುಳಿದ ಒಂದು ಒಂದು ಸ್ಥಾನಕ್ಕೆ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಕೊನೆಯ ಲೀಗ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

Tri Series: ಆಫ್ಘನ್‌ ಎದುರು ಗೆದ್ದು ಫೈನಲ್‌ಗೆ ಪ್ರವೇಶಿಸಿದ ಭಾರತ ಎ!

ಅಫ್ಘಾನಿ ಸ್ತಾನ ಎ ಎದುರು ವಿರುದ್ಧ ಫೈನಲ್‌ಗೇರಿದ ಭಾರತ ಎ. -

Profile
Ramesh Kote Jun 17, 2026 6:44 PM

ದಾಂಬೂಲ: ನಿಶಾಂತ್‌ ಸಿಂಧು (Nishant Sindhu) ಅವರ ಸ್ಪಿನ್‌ ಮೋಡಿಯ ನೆರವಿನಿಂದ ಭಾರತ ಎ ತಂಡ, ಎದುರಾಳಿ ಅಫ್ಘಾನಿಸ್ತಾನ ಎ ವಿರುದ್ಧ 101 ರನ್‌ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ತ್ರಿಕೋನ ಏ ಸರಣಿಯ (Tri Series 2026) ಫೈನಲ್‌ಗೆ ಪ್ರವೇಶ ಮಾಡಿತು. ಬ್ಯಾಟಿಂಗ್‌ನಲ್ಲಿ ಅಜೇಯ 21 ರನ್‌ ಹಾಗೂ ಬೌಲಿಂಗ್‌ನಲ್ಲಿ 4 ವಿಕೆಟ್‌ಗಳ ಕಬಳಿಸಿದ ಬ್ಯಾಟಿಂಗ್‌ ಆಲ್‌ರೌಂಡರ್‌ ನಿಶಾಂತ್‌ ಸಿಂಧು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂದ ಹಾಗೆ ಜೂನ್‌ 19 ರಂದು ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವೆ ನಡೆಯುವ ಪಂದ್ಯದಲ್ಲಿ ಗೆದ್ದ ತಂಡ, ಭಾರತ ಎ ವಿರುದ್ಧ ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

ಇಲ್ಲಿನ ರಣಗಿರಿ ಇಂಟರ್‌ನ್ಯಾನಷಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಏಕೆಂದರೆ, ಕಳೆದ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ ಸೂಪರ್‌ ಓವರ್‌ನಲ್ಲಿ ಸೋಲು ಅನುಭವಿಸಿತ್ತು. ಹಾಗಾಗಿ ಫೈನಲ್‌ಗೆ ಪ್ರವೇಶಿಸಲು ತಿಲಕ್‌ ವರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಆಫ್ಘನ್‌ ತಂಡವನ್ನು ಮಣಿಸಬೇಕಾಗಿತ್ತು. ಆದರೆ, ಈ ಪಂದ್ಯದಲ್ಲಿ ಟಾಸ್‌ ಭಾರತ ಎ ಪರವಾಗಿ ಬರಲಿಲ್ಲ. ಎದುರಾಳಿ ಆಫ್ಘನ್‌ ಎ ತಂಡ ಟಾಸ್‌ ಗೆದ್ದು ಭಾರತ ಎ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು.

IND vs AFG: ನಾಲ್ಕು ವರ್ಷಗಳ ಬಳಿಕ ಒಡಿಐ ಶತಕ ಬಾರಿಸಿದ ಇಶಾನ್‌ ಕಿಶನ್‌!

ಭಾರತ ಎ ಗೆ ಭರ್ಜರಿ ಆರಂಭ ತಂದುಕೊಟ್ಟ ಪ್ರಿಯಾಂಶ್‌-ವೈಭವ್‌

ಅಂದ ಹಾಗೆ ಭಾರತ ಎ ತಂಡದ ಮೊದಲನೇ ಯೋಜನೆ ಟಾಸ್‌ ವೇಳೆಯೇ ಉಲ್ಟಾ ಆಗಿತ್ತು. ಆದರೂ ಭಾರತ ಎ ತಂಡ ಬ್ಯಾಟಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿತು. ಅದರಲ್ಲಿಯೂ ವಿಶೇಷವಾಗಿ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಟೀಮ್‌ ಮ್ಯಾನೇಜ್‌ಮೆಂಟ್‌ ನೀಡಿದ್ದ ಜವಾಬ್ದಾರಿಯನ್ನು ಉತ್ತಮವಾಗಿ ಪೂರ್ಣಗೊಳಿಸಿದರು. ಆರಂಭಿಕ ಪ್ರಿಯಾಂಶ್‌ ಆರ್ಯ 42 ಎಸೆತಗಳಲ್ಲಿ 58 ರನ್‌ಗಳನ್ನು ಗಳಿಸುವ ಜೊತೆಗೆ ಮೊದಲನೇ ವಿಕೆಟ್‌ಗೆ ವೈಭವ್‌ ಸೂರ್ಯವಂಶಿ ಜೊತೆಗೆ 75 ರನ್‌ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿದ ಬಳಿಕ ವಿಕೆಟ್‌ ಒಪ್ಪಿಸಿದರು. ಇದಕ್ಕೂ ಮುನ್ನ ವೈಭವ್‌ ಸೂರ್ಯವಂಶಿ (38 ರನ್‌) ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್‌ ಆಡುವಲ್ಲಿ ಮತ್ತೊಮ್ಮೆ ವಿಫಲರಾದರು.



ತಿಲಕ್‌-ಕುಶಾಗ್ರ ಅರ್ಧಶತಕ

ಋತುರಾಜ್‌ ಗಾಯಕ್ವಾಡ್‌ 30 ರನ್‌ ಗಳಿಸಿ ಔಟ್‌ ಆದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮಾ ಹಾಗೂ ಕುಮಾರ್‌ ಕುಶಾಗ್ರ ಅವರು ಕ್ರಮವಾಗಿ 59 ರನ್‌ ಹಾಗೂ 58 ರನ್‌ ಗಳಿಸಿದರು ಹಾಗೂ 104 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 250ರ ಸನಿಹ ತಂದರು. ಕೊನೆಯಲ್ಲಿ ವಿಪ್ರಜ್‌ ನಿಗಮ್‌ ಹಾಗೂ ನಿಶಾಂತ್‌ ಸಿಂಧು ಕ್ರಮವಾಗಿ 30 ರನ್‌ ಹಾಗೂ 21 ರನ್‌ಗಳನ್ನು ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ಎ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 319 ರನ್‌ ಕಲೆ ಹಾಕಿತು.

ವೈಭವ್‌ ಸೂರ್ಯವಂಶಿಯನ್ನು ಬೆಂಚ್‌ ಕಾಯಿಸಬೇಕಾಗಿತ್ತೆಂದ ಸಂಜಯ್‌ ಮಾಂಜ್ರೇಕರ್‌!

ಅಫ್ಘಾನಿಸ್ತಾನ ಎ 218ಕ್ಕೆ ಆಲ್‌ಔಟ್‌

ಬಳಿಕ 320 ರನ್‌ಗಳ ದೊಡ್ಡ ಗುರಿಯನ್ನು ಹಿಂಬಾಲಿಸಿದ ಅಫ್ಘಾನಸ್ತಾನ ಎ ತಂಡ ಸ್ಕೋರ್‌ ಬೋರ್ಡ್‌ ಒತ್ತಡಕ್ಕೆ ಒಳಗಾಯಿತು. ನಾಯಕ ಇಮ್ರಾನ್‌ ಮಿರ್‌ (32 ರನ್‌) ಅವರು ಉತ್ತಮ ಆರಂಭ ಪಡೆದ ಹೊರತಾಗಿಯೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಫೈಝಲ್‌ ಶಿನೊಝಾದ (46 ರನ್‌) ಹಾಗೂ ಬಹಿರ್‌ ಶಾ (56 ರನ್‌) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ಭಾರತ ಎ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು.

ಭಾರತ ಎ ಪರ ಸ್ಪಿನ್‌ ಮೋಡಿ ಮಾಡಿದ ನಿಶಾಂತ್‌ ಸಿಂಧು 6.5 ಓವರ್‌ಗಳಿಗೆ 31 ರನ್‌ ನೀಡಿ 4 ವಿಕೆಟ್‌ಗಳ ಸಾಧನೆ ಮಾಡಿದರು. ಆ ಮೂಲಕ ಆಫ್ಘನ್‌ ತಂಡವನ್ನು ಆಲ್‌ಔಟ್‌ ಮಾಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು. ಇವರಿಗೆ ಸಾಥ್‌ ನೀಡಿದ ಯಶ್‌ ಥಾಕೂರ್‌ ಎರಡು ವಿಕೆಟ್‌ ಪಡೆದರು ಅಂತಿಮವಾಗಿ ಆಫ್ಘನ್‌ ಎ ತಂಡ 36.5 ಓವರ್‌ಗಳಿಗೆ 218 ರನ್‌ಗಳಿಗೆ ಆಲ್‌ಔಟ್‌ ಆಯಿತು.