ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI: ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌!

India vs West Indies 2nd T20i: ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ನಡುಣ ಎರಡನೇ ಟಿ20ಐ ಪಂದ್ಯ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ಹಾಗೂ ಮುಖಾಮುಖಿ ದಾಖಲೆ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

IND vs WI: ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಭಾರತ vs ವೆಸ್ಟ್‌ ಇಂಡೀಸ್‌ ನಡುವಣ ಎರಡನೇ ಟಿ20ಐ ಪಂದ್ಯ. -

Profile
Ramesh Kote Oct 8, 2026 1:28 PM

ನವದೆಹಲಿ: ಮೊದಲನೇ ಟಿ20ಐ ಪಂದ್ಯದ ಗೆಲುವಿನ ಮೂಲಕ 5 ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ (India), ಇದೀಗ ವೆಸ್ಟ್‌ ಇಂಡೀಸ್‌ (West Indies) ಎದುರು ಎರಡನೇ ಟಿ20ಐ ಪಂದ್ಯಕ್ಕೆ (IND vs WI) ಸಜ್ಜಾಗುತ್ತಿದೆ. ಎರಡನೇ ಪಂದ್ಯ ಅಕ್ಟೋಬರ್‌ 9 ರಂದು ರಾಂಚಿಯ ಜೆಸ್‌ಸಿಎ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಆರಂಭಿಕ ಪಂದ್ಯವನ್ನು ಸೋತಿರುಗ ಪ್ರವಾಸಿ ವಿಂಡೀಸ್‌, ಇದೀಗ ರಾಂಚಿಯಲ್ಲಿ ಗೆದ್ದು ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.

ಉಭಯ ತಂಡಗಳ ನಡುವಣ ಮೊದಲನೇ ಪಂದ್ಯ ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ವೆಸ್ಟ್‌ ಇಂಡೀಸ್‌ ತಂಡ, ಶೇಯ್‌ ಹೋಪ್‌ ಹಾಗೂ ಶೆರ್ಫೆನ್‌ ಋದರ್‌ಫೋರ್ಡ್‌ ತಲಾ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 171 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ್ದ ಟೀಮ್‌ ಇಂಡಿಯಾ, ಶ್ರೇಯಸ್‌ ಅಯ್ಯರ್‌ ಅವರ ಸ್ಪೋಟಕ ಶತಕದ ಬಲದಿಂದ ಇನೂ 32 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

IND vs WI: ಶ್ರೇಯಸ್‌ ಅಯ್ಯರ್‌ ಅಬ್ಬರದ ಶತಕದಿಂದ ವೆಸ್ಟ್‌ ಇಂಡೀಸ್‌ಗೆ ಶಾಕ್‌ ನೀಡಿದ ಭಾರತ!

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬಗ್ಗೆ ಮಾತನಾಡುವುದಾದರೆ, ಎರಡನೇ ಪಂದ್ಯದಲ್ಲಿಯೂ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಹಾಗಾಗಿ ಕಳೆದ ಪಂದ್ಯದಲ್ಲಿ ಆಡಿದ್ದ ಅದೇ ಆಡುವ ಬಳಗವನ್ನು ಉಳಿಸಿಕೊಳ್ಳಬಹುದು. ಬ್ಯಾಟಿಂಗ್‌ನಲ್ಲಿ ಅಭಿಷೇಕ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಇಬ್ಬರೂ ವಿಫಲರಾಗಿದ್ದರು. ಇದರ ಹೊರತಾಗಿಯೂ ಅವರನ್ನು ಎರಡನೇ ಪಂದ್ಯಕ್ಕೆ ಉಳಿಸಕೊಳ್ಳಲಾಗುತ್ತದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಮಯಾಂಕ್‌ ಯಾದವ್‌ 10ರ ಸರಾಸರಿಯಲ್ಲಿ ರನ್‌ ನೀಡಿದ್ದರೂ ಅವರನ್ನು ಉಳಿಸಿಕೊಳ್ಳಲಾಗುತ್ತದೆ.

ಪಿಚ್‌ ರಿಪೋರ್ಟ್‌

ಜೆಎಸ್‌ಸಿಎ ಇಂಟರ್‌ನ್ಯಾಷನ್‌ ಕ್ರಿಕೆಟ್‌ ಕ್ರೀಡಾಂಗಣದ ಪಿಚ್‌ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಗಿಯಾಗಿದೆ. ಹಾಗಾಗಿ ಎರಡನೇ ಪಂದ್ಯದಲ್ಲಿಯೂ ರನ್‌ ಹೊಳೆ ಹರಿಯುವ ಸಾಧ್ಯತೆ ಇದೆ. ಆದರೆ, ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್‌ಗಳು ಈ ಪಿಚ್‌ನಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಆದರೆ, ವೇಗದ ಬೌಲರ್‌ಗಳು ಹೊಸ ಚೆಂಡಿನಲ್ಲಿ ಪಿಚ್‌ನ ಲಾಭವನ್ನು ಪಡೆಯಬಹುದಾಗಿದೆ. ಈ ಅಂಗಣದಲ್ಲಿಯೂ ಟಾಸ್‌ ಗೆದ್ದ ತಂಡದ ನಾಯಕ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

IND vs WI: 42 ಬಾಲ್‌ಗಳಲ್ಲಿ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಶ್ರೇಯಸ್‌ ಅಯ್ಯರ್‌!

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌ (ನಾಯಕ), ತಿಲಕ್‌ ವರ್ಮಾ, ಶಿವಂ ದುಬೇ, ನಮನ್‌ ಧೀರ್‌, ಅಕ್ಷರ್‌ ಪಟೇಲ್‌, ಅರ್ಷದೀಪ್‌ ಸಿಂಗ್‌, ಕುಲ್ದೀಪ್‌ ಯಾದವ್‌, ಮಯಾಂಕ್‌ ಯಾದವ್‌

ವೆಸ್ಟ್‌ ಇಂಡೀಸ್‌: ಶೇಯ್‌ ಹೋಪ್‌ (ನಾಯಕ, ವಿಕೆಟ್‌ ಕೀಪರ್‌), ಕಮಿಲ್‌ ಪೂರನ್‌, ಶಿಮ್ರಾನ್‌ ಹೆಟ್ಮಾಯೆರ್‌, ರೊವ್ಮನ್‌ ಪೊವೆಲ್‌, ಶೆರ್ಫೆನ್‌ ಋದರ್‌ಫೋರ್ಡ್‌, ರಾಸ್ಟನ್‌ ಚೇಸ್‌, ರೊಮ್ಯಾರಿಯೊ ಶೆಫರ್ಡ್‌, ಮ್ಯಾಥ್ಯೂ ಫೋರ್ಡ್‌, ಶಮರ್‌ ಸ್ಪ್ರಿಂಗರ್‌, ಅಕೀಲ್‌ ಹೊಸೇನ್‌, ಶಮರ್‌ ಜೋಸೆಫ್‌

IND vs WI: ಪದಾರ್ಪಣೆ ಪಂದ್ಯದಲ್ಲಿಯೇ 3 ವಿಕೆಟ್‌ ಕಿತ್ತು ಓಜಾ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ನಮನ್‌ ಧೀರ್‌!

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 32

ಭಾರತದ ಗೆಲುವು: 21

ವೆಸ್ಟ್‌ ಇಂಡೀಸ್‌ ಗೆಲುವು: 10

ನೋ ರಿಸಲ್ಟ್‌: 01

ಪಂದ್ಯದ ವಿವರ

ಭಾರತ vs ವೆಸ್ಟ್‌ ಇಂಡೀಸ್‌

ಎರಡನೇ ಟಿ20ಐ ಪಂದ್ಯ

ದಿನಾಂಕ: ಅಕ್ಟೋಬರ್‌ 9, 2026,

ಸಮಯ: ಸಂಜೆ 07:00 ಗಂಟೆಗೆ ಆರಂಭ

ಸ್ಥಳ: ಜೆಎಸ್‌ಸಿಎ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ಲಾಂಪೆಕ್ಸ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಜಿಯೊ ಹಾಟ್‌ಸ್ಟಾರ್‌