Women's Cricket: ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಕನ್ನಡತಿ ವೇದಾ ಕೃಷ್ಣಮೂರ್ತಿ!
ಭಾರತ ಮಹಿಳಾ ಕ್ರಿಕೆಟ್ ತಂಡದ ವೇದಾ ಕೃಷ್ಣಮೂರ್ತಿ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ಹಠಾತ್ ವಿದಾಯ ಘೋಷಿಸಿದ್ದಾರೆ. ಶುಕ್ರವಾರ (ಜುಲೈ 25ರಂದು) ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. 32ರ ವಯಸ್ಸಿನ ವೇದಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ವೃತ್ತಿ ಜೀವನದಲ್ಲಿ ಬೆಂಬಲ ನೀಡಿದ ಆಟಗಾರರು, ಕೋಚ್‌ಗಳು, ಕುಟುಂಬ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ವೇದಾ ಕೃಷ್ಣಮೂರ್ತಿ.

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (Veda Krishnamurthy) ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ಹಠಾತ್ ವಿದಾಯ ಘೋಷಿಸಿದ್ದಾರೆ. ಜುಲೈ 25ರಂದು ಶುಕ್ರವಾರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. 32ರ ಪ್ರಾಯದ ವೇದಾ, ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬೆಂಬಲ ನೀಡಿದ ತಂಡದ ಆಟಗಾರರು, ಕೋಚ್‌ಗಳು, ಕುಟುಂಬ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ಚಿಕ್ಕಮಗಳೂರಿನ ಕಡೂರು ಮೂಲದ ವೇದಾ ಕೃಷ್ಣಮೂರ್ತಿ 2011ರಲ್ಲಿ ಕ್ರಿಕೆಟ್ ವೃತ್ತಿ ಬದುಕಿಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ಒಟ್ಟು 124 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ 48 ಏಕದಿನ ಪಂದ್ಯಗಳು ಹಾಗೂ 76 ಟಿ20ಐ ಪಂದ್ಯಗಳು ಒಳಗೊಂಡಿವೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲಿ ಕೇವಲ 18ನೇ ವಯಸ್ಸಿನಲ್ಲಿಯೇ ಇಂಗ್ಲೆಂಡ್ ವಿರುದ್ಧ ಡರ್ಬಿಯಲ್ಲಿ ನಡೆದಿದ್ದ ಪಂದ್ಯದಲ್ಲಿ 51 ರನ್ ಗಳಿಸಿ ಎಲ್ಲರ ಗಮನವನ್ನು ಸೆಳೆದಿದ್ದರು.
2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಆಟಗಾರ್ತಿಯಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಕೇವಲ 45 ಎಸೆತಗಳಲ್ಲಿ 70 ರನ್ ಬಾರಿಸಿ ಭಾರತ ಫೈನಲ್ ತಲುಪಲು ಪ್ರಮುಖ ಪಾತ್ರ ವಹಿಸಿದ್ದರು. ವೇದಾ ಕೊನೆಯ ಬಾರಿ 2020ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲೂ ಗುರಿತಿಸಿಕೊಂಡಿದ್ದ ಅವರು, ಗುಜರಾತ್ ಜಯಂಟ್ಸ್ ಪರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದರು. ಇನ್ನು ಏಕದಿನ ಪಂದ್ಯಗಳಲ್ಲಿ 25.90ರ ಸರಾಸರಿಯಲ್ಲಿ ಒಟ್ಟು 829 ರನ್‌ಗಳನ್ನು ಗಳಿಸಿದ್ದಾರೆ. 875 ಟಿ20ಐ ರನ್‌ಗಳನ್ನು ಗಳಿಸಿದ್ದಾರೆ.
IND vs ENG: ಅರ್ಧಶತಕ ಬಾರಿಸಿ ರಾಹುಲ್ ದ್ರಾವಿಡ್‌ರ ದಾಖಲೆ ಮುರಿದ ಜೋ ರೂಟ್!
ವಿದಾಯದ ಪೋಸ್ಟ್ ಹಂಚಿಕೊಂಡ ವೇದಾ
ಕ್ರಿಕೆಟ್ ವೃತ್ತಿಬದುಕಿಗೆ ವಿದಾಯ ಹೇಳುವ ಕುರಿತು ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ವೇದಾ ಕೃಷ್ಣಮೂರ್ತಿ, "ದೊಡ್ಡ ಕನಸುಗಳನ್ನು ಹೊಂದಿರುವ ಸಣ್ಣ ಪಟ್ಟಣದ ಹುಡುಗಿ. ಕಡೂರಿನ ಶಾಂತ ಹಾದಿಗಳಿಂದ ಹಿಡಿದು ಭಾರತದ ಜೆರ್ಸಿಯನ್ನು ಧರಿಸುವವರೆಗೆ ಬಂದಿದ್ದೇನೆ. ಈ ಆಟ ನನಗೆ ಸಂತೋಷ, ನೋವು ಮತ್ತು ಕುಟುಂಬ ಎಲ್ಲವನ್ನೂ ನೀಡಿತು. ಇಂದು ನಾನು ಆಡುವುದಕ್ಕೆ ವಿದಾಯ ಹೇಳುತ್ತೇನೆ, ಆದರೆ ಕ್ರಿಕೆಟ್‌ಗೆ ಅಲ್ಲ. ನನ್ನ ಕುಟುಂಬ, ತಂಡದ ಸದಸ್ಯರು, ತರಬೇತುದಾರರು, ಸ್ನೇಹಿತರು ಮತ್ತು ತೆರೆಮರೆಯಲ್ಲಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅಭಿಮಾನಿಗಳ ಪ್ರೀತಿಗೆ ನಾನೆಂದು ಆಭಾರಿಯಾಗಿದ್ದೇನೆ. ನನಗೆ ಬದುಕು ಕಟ್ಟಿಕೊಟ್ಟ ಕ್ರಿಕೆಟ್‌ಗೆ ನಾನು ವಾಪಾಸ್ ನೀಡುತ್ತೇನೆ. ನಾನು ನನ್ನ ಹೃದಯದಲ್ಲಿ ಕಿಚ್ಚಿನೊಂದಿಗೆ ಮತ್ತು ಉತ್ಸಾಹಭರಿತಳಾಗಿ ಪ್ರತಿ ಹೆಜ್ಜೆಯಲ್ಲೂ ಆಡಿದೆ. ಯಾವಾಗಲೂ ತಂಡಕ್ಕಾಗಿ ಹಾಗೂ ಭಾರತಕ್ಕಾಗಿ ನನ್ನ ಹೃಯದ ಮಿಡಿಯಲಿದೆ," ಎಂದು ವೇದಾ ಕೃಷ್ಣಮೂರ್ತಿ ಬರೆದುಕೊಂಡಿದ್ದಾರೆ.
From a small-town girl with big dreams to wearing the India jersey with pride.
— Veda Krishnamurthy (@vedakmurthy08) July 25, 2025
Grateful for everything cricket gave me the lessons, the people, the memories.
It’s time to say goodbye to playing, but not to the game.
Always for India. Always for the team. 🇮🇳 pic.twitter.com/okRdjYuW2R
ವೇದಾ ಕೃಷ್ಣಮೂರ್ತಿ ಅವರ ಕ್ರಿಕೆಟ್ ವೃತ್ತಿ ಬದುಕಿನ ಐತಿಹಾಸಿಕ ಕ್ಷಣಗಳು
ವೇದಾ ಕೃಷ್ಣಮೂರ್ತಿ ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಅನೇಕ ಐತಿಹಾಸಿಕ ಹೆಜ್ಜೆಗಳನ್ನಿಟ್ಟಿದ್ದಾರೆ. ಇದರಲ್ಲಿ ಮುಖ್ಯವಾಗಿ 2017ರಲ್ಲಿ ಭಾರತ ತಂಡ ಐಸಿಸಿ ಐಕದಿನ ವಿಶವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಗಿತು. ಈ ವೇಳೆ ವೇದಾ ಅವರು ಕೂಡ ತಂಡದ ಭಾಗವಾಗಿದ್ದರು. ಇನ್ನು ಇದೇ ರೀತಿ 2020ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿಯೂ ಭಾರತ ತಂಡ ಆಸ್ಟ್ರೇಲಿಯಾ ವಿರುದ್ದ ರನ್ನರ್ ಅಪ್‌ಸ್ಥಾನ ಪಡದುಕೊಂಡಿತ್ತು. ಆಗಲೂ ಕೂಡ ವೇದಾ ತಂಡದ ಸದಸ್ಯರಾಗಿದ್ದರು. ಇದಲ್ಲದೇ ವೇದಾ ಅವರು ಮಹಿಳಾ ಬಿಗ್ ಬಾಶ್ ಲೀಗ್‌ನಲ್ಲಿ ಭಾಗಿಯಾದ ಭಾರತದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಬಿಗ್ ಬಾಷ್ ಲೀಗ್‌ನ ಮೂರನೇ ಸೀಸನ್‌ನಲ್ಲಿ ವೇದಾ ಹೋಬರ್ಟ್ ಹರಿಕೇನ್ಸ್ ತಂಡದ ಪರ ಆಡಿದ್ದರು. ಇನ್ನು ದೇಶಿಯ ಕ್ರಿಕೆಟ್‌ನಲ್ಲಿಯೂ ಛಾಪು ಮೂಡಿಸಿದ್ದ ವೇದಾ ಆರಂಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಆ ಬಳಿಕ ರೈಲ್ವೇಸ್ ತಂಡ ಸೇರಿಕೊಂಡಿದ್ದರು.