ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರ್‌ಸಿಬಿಯನ್ನು ತೊರೆದು ಇಂಗ್ಲೆಂಡ್‌ ಹೆಡ್‌ ಕೋಚ್‌ ಹುದ್ದೆಗೆ ಸೇರಲ್ಲ ಎಂದ ಆಂಡಿ ಫ್ಲವರ್‌!

ಇಂಗ್ಲೆಂಡ್‌ ಟೆಸ್ಟ್‌ ತಂಡದ ಹೆಡ್‌ ಕೋಚ್‌ ಆಗುವ ಅವಕಾಶವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೋಚ್‌ ಆಂಡಿ ಫ್ಲವರ್‌ ನಿರಾಕರಿಸಿದ್ದಾರೆ. ದಿ ಟೆಲಿಗ್ರಾಫ್‌ ಜೊತೆ ಮಾತನಾಡಿದ ಆರ್‌ಸಿಬಿ ಕೋಚ್‌, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತಾವು ಮಾಡುತ್ತಿರುವ ಕೆಲಸದಲ್ಲಿ ಖುಷಿಯಾಗಿದ್ದೇನೆಂದು ಹೇಳಿಕೊಂಡಿದ್ದಾರೆ.

ಆರ್‌ಸಿಬಿಯನ್ನು ಬಿಟ್ಟು ಹೋಗಲ್ಲ ಎಂದ ಆಂಡಿ ಫ್ಲವರ್‌!

ಇಂಗ್ಲೆಂಡ್‌ ಟೆಸ್ಟ್‌ ಕೋಚ್‌ ಆಫರ್‌ ನಿರಾಕರಿಸಿದ ಆಂಡಿ ಫ್ಲವರ್‌. -

Profile
Ramesh Kote Jul 17, 2026 8:03 PM

ನವದೆಹಲಿ: ಇಂಗ್ಲೆಂಡ್‌ ಟೆಸ್ಟ್‌ ಕ್ರಿಕೆಟ್‌ ತಂಡದ ಹೆಡ್‌ ಕೋಚ್‌ ಆಗುವ ಅವಕಾಶವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ತರಬೇತಿದಾರ ಆಂಡಿ ಫ್ಲವರ್‌ (Andy Flower) ನಿರಾಕರಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೇರಿದಂತೆ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತಾವು ನಿರ್ವಹಿಸುತ್ತಿರುವ ಕೆಲಸದ ಬಗ್ಗೆ ತನಗೆ ಸಂಪೂರ್ಣ ಖುಷಿಯಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಬ್ರೆಂಡನ್‌ ಮೆಕಲಮ್‌ (Brendon Mccullum) ಅವರು ಇತ್ತೀಚೆಗೆ ಇಂಗ್ಲೆಂಡ್‌ ಟೆಸ್ಟ್‌ ತಂಡದ ಕೋಚ್‌ ಹುದ್ದೆಯನ್ನು ತೊರೆದಿದ್ದರು, ಇದೀಗ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಅವರ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಹುಡುಕುತ್ತಿದೆ.

ಮೆಕಲಮ್ ಅವರ ಸ್ಥಾನವನ್ನು ತುಂಬಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB)ಯ ಪ್ರಮುಖ ಅಭ್ಯರ್ಥಿಯಾಗಿ ಪರಿಗಣಿಸಲ್ಪಟ್ಟಿದ್ದ ಆಂಡಿ ಫ್ಲವರ್, ತಮ್ಮ ಪ್ರಸ್ತುತ ಕೋಚಿಂಗ್ ಜವಾಬ್ದಾರಿಗಳ ಬಗ್ಗೆ ತೃಪ್ತರಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ, ತಾವು ಕಾರ್ಯನಿರ್ವಹಿಸುತ್ತಿರುವ ಐಪಿಎಲ್ ಫ್ರಾಂಚೈಸಿಯನ್ನು ತೊರೆಯುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

IND vs ENG: ರೋಹಿತ್‌ ಶರ್ಮಾ ಒಡಿಐ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಬ್ಯಾಟಿಂಗ್‌ ಕೋಚ್‌!

ಲಂಡನ್ ಸ್ಪಿರಿಟ್ ತಂಡದ ಮಾಧ್ಯಮ ದಿನದ ವೇಳೆ ಶುಕ್ರವಾರ ಲಾರ್ಡ್ಸ್‌ನಲ್ಲಿ ಮಾತನಾಡಿದ ಫ್ಲವರ್, “ಈ ವಿಷಯದ ಬಗ್ಗೆ ನಾನು ರಾಬ್ (ಕೀ) ಮತ್ತು ಇಸಿಬಿಯೊಂದಿಗೆ ಮಾತನಾಡಿದ್ದೇನೆ. ಪ್ರಸ್ತುತ ನಾನು ಮಾಡುತ್ತಿರುವ ಕೆಲಸದಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ ಎಂಬುದೇ ಮುಖ್ಯ ವಿಷಯ. ನಾನು ಉತ್ತಮ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ನನ್ನ ಸುತ್ತಲೂ ಉತ್ತಮ ತಂಡಗಳು ಮತ್ತು ಉತ್ತಮ ವ್ಯಕ್ತಿಗಳಿದ್ದಾರೆ. ಈಗ ನಾನು ಮಾಡುತ್ತಿರುವ ಕೆಲಸದಲ್ಲಿ ನನಗೆ ತುಂಬಾ ಆರಾಮದಾಯಕವಾಗಿದೆ,” ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್ ತಂಡದ ಕೋಚ್ ಆಗಿದ್ದ ಅವಧಿಯಲ್ಲಿ ಆಂಡಿ ಫ್ಲವರ್, ತವರಿನಲ್ಲಿ ಹಾಗೂ ವಿದೇಶದಲ್ಲಿ ನಡೆದ ಆ್ಯಶಸ್ ಸರಣಿಗಳಲ್ಲಿ ಗೆಲುವು, ಜೊತೆಗೆ ಭಾರತದಲ್ಲಿ ನಡೆದ ಟೆಸ್ಟ್ ಸರಣಿ ಜಯ ಸೇರಿದಂತೆ ಹಲವು ಮಹತ್ವದ ಯಶಸ್ಸುಗಳನ್ನು ತಂಡಕ್ಕೆ ತಂದುಕೊಟ್ಟಿದ್ದರು. ರಾಷ್ಟ್ರೀಯ ತಂಡದ ಕೋಚ್ ಹುದ್ದೆಯಿಂದ ದೂರವಾದ ಬಳಿಕ ಫ್ರಾಂಚೈಸಿ ಕ್ರಿಕೆಟ್‌ನಲ್ಲೂ ಅವರು ಗಮನಾರ್ಹ ಯಶಸ್ಸು ಗಳಿಸಿದ್ದು, ಇತ್ತೀಚೆಗೆ ಆರ್‌ಸಿಬಿ ತಂಡವನ್ನು ಸತತ ಎರಡು ಬಾರಿ ಐಪಿಎಲ್ ಟೂರ್ನಿಗಳಲ್ಲಿ ಚಾಂಪಿಯನ್ಸ್‌ ಮಾಡಿದ್ದಾರೆ.

LPL 2026: ಭಾರತ ಅಂಡರ್‌-19 ತಂಡದ ಮಾಜಿ ಆಟಗಾರ ಮಂಜೀತ್‌ ಕಲ್ರಾ ಶ್ರೀಲಂಕಾದಲ್ಲಿ ಬಂಧನ!

“ನಾನು ಹಿಂದೆ ಇಂಗ್ಲೆಂಡ್ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಇಂಗ್ಲೆಂಡ್‌ನ ಮುಖ್ಯ ಕೋಚ್ ಆಗುವ ಅವಕಾಶ ಸಿಕ್ಕಿದ್ದು ನನಗೆ ಅದ್ಭುತ ಅನುಭವ. ಟೆಸ್ಟ್ ತಂಡದ ಕೋಚ್ ಆಗುವುದು ನನಗೆ ಅಥವಾ ಬೇರೆ ಯಾರಿಗಾದರೂ ಗೌರವದ ವಿಷಯವಾಗಿರುತ್ತದೆ. ಆದರೆ, ಪ್ರಸ್ತುತ ನನ್ನ ಕೆಲಸದಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ. ನಾನು ಈಗ ಮಾಡುತ್ತಿರುವ ಕೆಲಸವನ್ನೇ ಮುಂದುವರಿಸಲು ಬಯಸುತ್ತೇನೆ,” ಎಂದು ಹೇಳಿದರು.