Asian Games 2026: ಶ್ರೀಲಂಕಾ ವಿರುದ್ಧ ಅರ್ಧಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಇಶಾನ್ ಕಿಶನ್!
ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರು ಶ್ರೀಲಂಕಾ ವಿರುದ್ಧ 2026ಎ ಏಷ್ಯಾ ಕ್ರೀಡಾಕೂಟದ ಸೆಮಿಫೈನಲ್ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಿದರು. ಆ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು 50ಕ್ಕೂ ಅಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿಯನ್ನು ಇಶಾನ್ ಕಿಶನ್ ಹಿಂದಿಕ್ಕಿದ್ದಾರೆ.
80 ರನ್ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಇಶಾನ್ ಕಿಶನ್. -
ನವದೆಹಲಿ: ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ (Asian Games 2026) ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan), ಶ್ರೀಲಂಕಾ ಎದುರು ಸ್ಪೋಟಕ ಇನಿಂಗ್ಸ್ ಆಡಿದರು. ಅವರು 46 ಎಸೆತಗಳಲ್ಲಿ 80 ರನ್‌ಗಳ ಸ್ಪೋಟಕ ಇನಿಂಗ್ಸ್ ಆಡಿದರು. ಆ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ (Virat Kohli) ಅವರನ್ನು ಇಶಾನ್ ಕಿಶನ್ ಹಿಂದಿಕ್ಕಿದ್ದಾರೆ ಹಾಗೂ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರ ದಾಖಲೆ ಸನಿಹವಾಗಿದ್ದಾರೆ.
ಏಷ್ಯಾ ಕ್ರೀಡಾಕೂಟದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ವಲ್ಪ ಬದಲಾವಣೆಯನ್ನು ತರಲಾಯಿತು. ವೈಭವ್ ಸೂರ್ಯವಂಶಿ ಅವರನು ಆರಂಭಿಕನಾಗಿ ಕಣಕ್ಕೆ ಇಳಿಸಿ, ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಆಡಿದ್ದರಿಂದ, ಇಶಾನ್ ಕಿಶನ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕಾಯಿತು. ಅಗ್ರ ಕ್ರಮಾಂಕ ವಿಫಲವಾದ ಕಾರಣ, ಇಶಾನ್ ಕಿಶನ್ ಅವರು ಮಧ್ಯಮ ಕ್ರಮಾಂಕದಲ್ಲಿ ದೀರ್ಘಾವಧಿ ಬ್ಯಾಟ್ ಮಾಡಲು ಸಾಧ್ಯವಾಯಿತು.
ಏಷ್ಯನ್ ಗೇಮ್ಸ್; ಶ್ರೀಲಂಕಾ ವಿರುದ್ಧ 124 ರನ್ ಜಯ ಸಾಧಿಸಿದ ಭಾರತ; ಫೈನಲ್‌ನಲ್ಲಿ ಪಾಕ್ ಎದುರಾಳಿ
ಅದರಂತೆ ಸ್ಪೋಟಕ ಬ್ಯಾಟ್ ಮಾಡಿದ ಇಶಾನ್ ಕಿಶನ್ ಅವರು 46 ಎಸೆತಗಳಲ್ಲಿ 173.91 ರ ಸ್ಟ್ರೈಕ್ ರೇಟ್‌ನಲ್ಲಿ 80 ರನ್‌ಗಳನ್ನು ಬಾರಿಸಿದರು. ಇದರಲ್ಲಿ ಅವರು ನಾಲ್ಕು ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಬಾರಿಸಿದರು. ಇವರ ಬ್ಯಾಟಿಂಗ್ ಬಲದಿಂದ ಭಾರತ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 169 ರನ್‌ಗಳನ್ನು ಕಲೆ ಹಾಕಿತು.
ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಇಶಾನ್ ಕಿಶನ್
2025ರ ಕ್ಯಾಲೆಂಡರ್ ವರ್ಷದಲ್ಲಿ ಇಶಾನ್ ಕಿಶನ್ ಎಂಟು ಬಾರಿ 50ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ2016ರಲ್ಲಿ 7 ಬಾರಿ 50ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದ ವಿರಾಟ್ ಕೊಹ್ಲಿಯನ್ನು ಇದೀಗ ಇಶಾನ್ ಕಿಶನ್ ಹಿಂದಿಕ್ಕಿದ್ದಾರೆ. ಆದರೆ, ಸೂರ್ಯಕುಮಾರ್ ಯಾದವ್ ಅವರು 9 ಬಾರಿ 50ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿ ಅಗ್ರ ಸಾಲಿನಲ್ಲಿದ್ದಾರೆ.
ಭಾರತದ ದಾಖಲೆಯ ರನ್ ಚೇಸ್ ಬಳಿಕ ಗುವಾಹಟಿ ಪಿಚ್ ವಿರುದ್ಧ ಗೌತಮ್ ಗಂಭೀರ್ ಕಿಡಿ
2025ರ ಕ್ಯಾಲೆಂಡರ್ ವರ್ಷದಲ್ಲಿ ಇಶಾನ್ ಕಿಶನ್ 28 ಟ20ಐ ಇನಿಂಗ್ಸ್‌ಗಳಲ್ಲಿ 985 ರನ್‌ಗಳನ್ನು ಬಾರಿಸಿದರು. ಇದರಲ್ಲಿ ಒಂದು ಶತಕ ಹಾಗೂ ಏಳು ಅರ್ಧಶತಕಗಳು ಒಳಗೊಂಡಿವೆ. ಇದೀಗ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಲು ಇಶಾನ್‌ಗೆ ಇನ್ನು ಕೇವಲ 80ಕ್ಕೂ ಅಧಿಕ ರನ್‌ಗಳ ಅಗತ್ಯವಿದೆ. ಸೂರ್ಯ 2022ರ ಕ್ಯಾಲೆಂಡರ್ ವರ್ಷದಲ್ಲಿ 1,164 ರನ್‌ಗಳನ್ನು ಬಾರಿಸಿದ್ದರು. ಅವರು 46.56ರ ಸರಾಸರಿ ಹಾಗೂ 187ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಬಾರಿಸಿದ್ದರು ಹಾಗೂ ಇದರಲ್ಲಿ ಅವರು ಎರಡು ಶತಕಗಳು ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದರು.
8️⃣0️⃣* Runs
— BCCI (@BCCI) October 1, 2026
4️⃣6️⃣ Deliveries
4️⃣ Fours
5️⃣ Sixes
Ishan Kishan stood tall under pressure today 💥👌
Scorecard ▶️ https://t.co/DjHV9q6htT#TeamIndia | #AsianGames | @ishankishan51 pic.twitter.com/VHHVlzIaFk
ಏಷ್ಯಾ ಕ್ರೀಡಾಕೂಟದಲ್ಲಿ ಫೈನಲ್‌ಗೇರಿದ ಭಾರತ
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಪರ ಇಶಾನ್ ಕಿಶನ್ ಜತೆಗೆ ವೈಭವ್ ಸೂರ್ಯವಂಶಿ ಕೂಡ 21 ಎಸೆತಗಳಲ್ಲಿ 38 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು ಆರು ಬೌಂಡರಿಗಳು ಹಾಗೂ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಹೀನಾಯವಾಗಿ ವಿಕೆಟ್ ಒಪ್ಪಿಸಿದ್ದರಿಂದ ಭಾರತ ತಂಡ 87 ರನ್‌ಗಳಿಗೆ 4ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 170ರ ಸನಿಹ ತಂದರು. ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ಕೇವಲ 45 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಗೆಲುವಿನ ಮೂಲಕ ಭಾರತ ತಂಡ ಏಷ್ಯನ್ ಗೇಮ್ಸ್ ಫೈನಲ್‌ಗೆ ಪ್ರವೇಶ ಮಾಡಿತು.