IND vs ENG: ಭಾರತದ ಎದುರು ಏಕಾಂಗಿ ಹೋರಾಟ ನಡೆಸಿ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟು ಜೋ ರೂಟ್!
IND vs ENG 2nd ODI Highlights: ಜೋ ರೂಟ್ ನಿರ್ಣಾಯಕ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಎದುರು 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೀವಂತವಾಗಿರಿಸಿಕೊಂಡಿತು. ಭಾರತದ ಬೌಲರ್‌ಗಳು ಕಠಿಣ ಹೋರಾಟ ನೀಡಿದರೂ ಕಡಿಮೆ ಗುರಿಯನ್ನು ನೀಡಿದ್ದರ ಪರಿಣಾಮ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಭಾರತದ ಎದುರು ಇಂಗ್ಲೆಂಡ್‌ಗೆ 4 ವಿಕೆಟ್ ಜಯ. -
ಕಾರ್ಡಿಫ್: ಜೋ ರೂಟ್ (Joe Root) ಅವರ ಏಕಾಂಗಿ ಹೋರಾಟದ ಬಲದಿಂದ ಇಂಗ್ಲೆಂಡ್ ತಂಡ, ಎರಡನೇ ಪಂದ್ಯದಲ್ಲಿ(IND vs ENG) ಭಾರತದ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೀವಂತವಾಗಿರಿಸಿಕೊಂಡಿತು. ಮೊದಲನೇ ಪಂದ್ಯವನ್ನು ಸೋತಿದ್ದ ಆಂಗ್ಲರು ಇದೀಗ ಎರಡನೇ ಹಣಾಹಣಿಯಲ್ಲಿ ಗೆದ್ದು ಸರಣಿಯನ್ನು 1-1 ಸಮಬಲ ಕಾಯ್ದುಕೊಂಡಿದ್ದಾರೆ. ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ಜುಲೈ 19 ರಂದು ಲಂಡನ್ ಲಾರ್ಡ್ಸ್ ಅಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದ ತಂಡ, ಏಕದಿನ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ, ಹಾಗಾಗಿ ಈ ಕದನ ಅತ್ಯಂತ ಕುತೂಹಲದಿಂದ ಕೂಡಿರುತ್ತದೆ.
ಇಂಗ್ಲೆಂಡ್‌ಗೆ ಏಕದಿನ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಗುರುವಾರ ಇಲ್ಲಿನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದ ಗೆಲುವು ತುಂಬಾ ನಿರ್ಣಾಯಕವಾಗಿತ್ತು. ಹಾಗಾಗಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಜೋಫ್ರಾ ಆರ್ಚರ್ ಮತ್ತು ಗಸ್ ಅಟ್ಕಿನ್ಸನ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಭಾರತ ತಂಡ ವಿರಾಟ್ ಕೊಹ್ಲಿ(65 ರನ್) ಹಾಗೂ ಶ್ರೇಯಸ್ ಅಯ್ಯರ್ (66 ರನ್) ಅವರ ಅರ್ಧಶತಕಗಳ ಹೊರತಾಗಿಯೂ ಇನ್ನಿತರ ಬ್ಯಾಟರ್‌ಗಳ ವೈಫಲ್ಯದಿಂದ 44 ಓವರ್‌ಗಳಿಗೆ 233 ರನ್‌ಗಳಿಗೆ ಆಲ್‌ಔಟ್ ಆಯಿತು.
IND vs ENG: ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ರಾಹುಲ್ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಇಂಗ್ಲೆಂಡ್‌ಗೆ ಆರಂಭಿಕ ಆಘಾತ
ಬಳಿಕ ಸಾಧಾರಣ ಗುರಿಯನ್ನು ನೀಡಿದರ ಹೊರತಾಗಿಯೂ ಭಾರತದ ಬೌಲರ್‌ಗಳು 45ನೇ ಓವರ್‌ವರೆಗೂ ಕಠಿಣ ಹೋರಾಟವನ್ನು ನಡೆಸಿದ್ದರು. ಬೆನ್ ಡಕೆಟ್ ಹಾಗೂ ಜೇಕಬ್ ಬೆಥೆಲ್ ಅವರನ್ನು 8 ರನ್ ಇರುವಾಗಲೇ ಔಟ್ ಮಾಡಿದ ಭಾರತ, ಆತಿಥೇಯರಿಗೆ ಆರಂಭಿಕ ಆಘಾತ ನೀಡಿತ್ತು. ಹ್ಯಾರಿ ಬ್ರೂಕ್ (16) ಅವರು ಸ್ವಲ್ಪ ಹೊತ್ತು ಆಡಿ ವಿಕೆಟ್ ಒಪ್ಪಿಸಿದರು. 31 ಎಸೆತಗಳಲ್ಲಿ 26 ರನ್ ಗಳಿಸಿ ಉತ್ತಮ ಆರಂಭ ಪಡೆದ ಹೊರತಾಗಿಯೂ ಸ್ಯಾಮ್ ಕರನ್, ಶಿವಂ ದುಬೇಗೆ ಔಟ್ ಆದರು. ಜೋಸ್ ಬಟ್ಲರ್ (17) ಕೂಡ ನಿರಾಶೆ ಮೂಡಿಸಿದರು.
England win the second ODI by 4 wickets.#TeamIndia's focus now shifts to the series decider on Sunday.
— BCCI (@BCCI) July 16, 2026
Scorecard ▶️ https://t.co/2Z0BQOPWjC #ENGvIND pic.twitter.com/CfyMZuZ71Y
ಜೋ ರೂಟ್ ಏಕಾಂಗಿ ಹೋರಾಟ
ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಜೋ ರೂಟ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಅವರು ಹ್ಯಾರಿ ಬ್ರೂಕ್ ಜೊತೆ 45 ರನ್‌ಗಳ ಜೊತೆಯಾಟವನ್ನು ಆಡಿದರೆ, 30 ರನ್ ಗಳಿಸಿದ ವಿಲ್ ಜ್ಯಾಕ್ಸ್ ಜೊತೆಗೆ 72 ರನ್‌ಗಳ ಜೊತೆಯಾಟವನ್ನು ಆಡಿದರು. ಅಂತಿಮವಾಗಿ ಅವರು ಆಡಿದ 133 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಅಜೇಯ 99 ರನ್ ಗಳಿಸಿ ಕೇವಲ ಒಂದು ರನ್ ಅಂತರದಲ್ಲಿ ಶತಕ ವಂಚಿತರಾದರು. ಅವರು ಶತಕ ಗಳಿಸಲು ಅವಕಾಶ ಇತ್ತಾದರೂ ಗಸ್ ಅಟ್ಕಿನ್ಸನ್ ಅವರು 16 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿ ತಂಡವನ್ನು ಬೇಗ ಗೆಲುವಿನ ಗಡಿ ದಾಟಿಸಿದರು. ಅಲ್ಲದೆ ರೂಟ್ ಅವರ ಶತಕ ಗಳಿಸುವಅವಕಾಶವನ್ನು ತಪ್ಪಿಸಿದರು. ಅಂತಿಮವಾಗಿ ಇಂಗ್ಲೆಂಡ್ 44.1 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿ ಗೆದ್ದು ಬೀಗಿತು.
Because you deserve a graphic anyway ❤️ pic.twitter.com/tvmAq3FufC
— England Cricket (@englandcricket) July 16, 2026
ಕೊಹ್ಲಿ-ಶ್ರೇಯಸ್ ಅರ್ಧಶತಕ
ಭಾರತದ ಪರ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ (31) ಹಾಗೂ ರೋಹಿತ್ ಶರ್ಮಾ (21) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಕೇವಲ ಒಂದು ರನ್‌ಗೆ ಔಟ್ ಆದರು. ಆದರೆ, ನಾಲ್ಕನೇ ವಿಕೆಟ್‌ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 67 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಇದಕ್ಕೂ ಮುನ್ನ ಕೊಹ್ಲಿ ಹಾಗೂ ರೋಹಿತ್ ಜೋಡಿಯಿಂದ 60 ರನ್ ಜೊತೆಯಾಟ ಮೂಡಿಬಂದಿತ್ತು.
Innings Break!
— BCCI (@BCCI) July 16, 2026
Virat Kohli & Shreyas Iyer with vital fifties for #TeamIndia.
Over to the bowlers to defend this!
Scorecard ▶️ https://t.co/2Z0BQOPWjC #ENGvIND pic.twitter.com/4w8wjK1unh
ಅದ್ಭುತವಾಗಿ ಬ್ಯಾಟ್ ಮಾಡಿದ ಕೊಹ್ಲಿ 66 ಎಸೆತಗಳಲ್ಲಿ 65 ರನ್ ಗಳಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಶ್ರೇಯಸ್ ಅಯ್ಯರ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 44ನೇ ಓವರ್‌ವರೆಗೂ ಏಕಾಂಗಿ ಹೋರಾಟ ನಡೆಸಿ 71 ಎಸೆತಗಳಲ್ಲಿ 66 ರನ್‌ಗಳನ್ನು ಗಳಿಸಿದರು. ಆ ಮೂಲಕ ತಂಡದ ಮೊತ್ತವನ್ನು 230ರ ಗಡಿಯನ್ನು ದಾಟಿಸಿದರು. ಆದರೆ, ಶ್ರೇಯಸ್‌ಗೆ ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡಲಿಲ್ಲ. ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೇ ನಿರಾಶೆ ಮೂಡಿಸಿದರೆ, ಕೊನೆಯಲ್ಲಿ ಜಸ್‌ಪ್ರೀತ್ ಬುಮ್ರಾ ನಿರ್ಣಾಯಕ 20 ರನ್ ಗಳಿಸಿದ್ದರು.