ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs WI: ಚೊಚ್ಚಲ ಅರ್ಧಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಮಿಚೆಲ್‌ ಒವೆನ್!

ವೆಸ್ಟ್‌ ಇಂಡೀಸ್‌ ವಿರುದ್ಧ ಅರ್ಧಶತಕ ಹಾಗೂ ಒಂದು ವಿಕೆಟ್‌ ಪಡೆಯುವ ಮೂಲಕ ಆಸ್ಟ್ರೇಲಿಯಾ ಆಲ್‌ರೌಂಡರ್‌ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಲ್ಲಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಪದಾರ್ಪಣೆ ಟಿ20ಐ ಪಂದ್ಯದಲ್ಲಿ ಹೆಚ್ಚು ರನ್‌ ಹಾಗೂ ಒಂದು ವಿಕೆಟ್‌ ಕಿತ್ತ ಮೊದಲ ಆಟಗಾರ ಎಂಬ ದಾಖಲೆಯನ್ನು ಮಿಚೆಲ್‌ ಒವೆನ್‌ ಬರೆದಿದ್ದಾರೆ.

ಚೊಚ್ಚಲ ಟಿ20ಐ ಪಂದ್ಯದಲ್ಲಿಯೇ ದಾಖಲೆ ಬರೆದ ಮಿಚೆಲ್‌ ಒವೆನ್!

ಪದಾರ್ಪಣೆ ಟಿ20ಐ ಪಂದ್ಯದಲ್ಲಿಯೇ ದಾಖಲೆ ಬರೆದ ಮಿಚೆಲ್‌ ಒವೆನ್‌.

Profile Ramesh Kote Jul 21, 2025 3:33 PM

ಜಮೈಕಾ: ವೆಸ್ಟ್‌ ಇಂಡೀಸ್‌ ವಿರುದ್ಧ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿಯೇ (AUS vs WI) ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಮಿಚೆಲ್‌ ಒವೆನ್‌ (Mitchell Owen) ಗಮನ ಸೆಳೆದಿದ್ದಾರೆ. ಬ್ಯಾಟಿಂಗ್‌ನಲ್ಲಿ ಅರ್ಧಶತಕ ಹಾಗೂ ಬೌಲಿಂಗ್‌ನಲ್ಲಿ ಒಂದು ವಿಕೆಟ್‌ ಕಬಳಿಸುವ ಮೂಲಕ ಮಿಚೆಲ್‌ ಒವೆನ್‌ ಟಿ20ಐ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡ್‌ ವಾನ್‌ ಡೆರ್‌ ಮರ್ವೆ ಅವರ ದಾಖಲೆಯನ್ನು ಆಸೀಸ್‌ ಆಲ್‌ರೌಂಡರ್‌ ಮುರಿದಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಮಿಚೆಲ್‌ ಒವೆನ್‌ ಆಲ್‌ರೌಂಡರ್‌ ಆಟದ ಬಲದಿಂದ ಆಸ್ಟ್ರೇಲಿಯಾ (Australia) ತಂಡ 3 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಕಿಂಗ್ಸ್‌ಸ್ಟನ್‌ನ ಸಬೀನಾ ಪಾರ್ಕ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಮಿಚೆಲ್‌ ಮಾರ್ಷ್‌, ರಾಷ್ಟ್ರೀಯ ತಂಡದ ಚೊಚ್ಚಲ ಕ್ಯಾಪ್‌ ಅನ್ನು ನೀಡಿದ್ದರು. ಬ್ಯಾಟಿಂಗ್‌ ಆಲ್‌ರೌಂಡರ್‌ ಆಗಿರುವ ಮಿಚೆಲ್‌ ಒವೆನ್‌ಗೆ ವೆಸ್ಟ್‌ ಇಂಡೀಸ್‌ ಇನಿಂಗ್ಸ್‌ನಲ್ಲಿ ಬೌಲಿಂಗ್‌ಗೆ ಅವಕಾಶ ನೀಡಲಾಗಿತ್ತು. ಅವರು ಕೇವಲ ಬೌಲ್‌ ಮಾಡಿದ ಒಂದು ಓವರ್‌ನಲ್ಲಿ 14 ರನ್‌ ನೀಡಿ ಒಂದು ವಿಕೆಟ್‌ ಕಿತ್ತಿದ್ದರು. ಅವರು ಆತಿಥೇಯ ತಂಡದ ನಾಯಕ ಶೇಯ್‌ ಹೋಪ್‌ ಅವರನ್ನು ಔಟ್‌ ಮಾಡಿದ್ದರು.

AUS vs WI: ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಟಿ20ಐ ಗೆದ್ದು ಶುಭಾರಂಭ ಮಾಡಿದ ಆಸ್ಟ್ರೇಲಿಯಾ!

ನಂತರ ಆಸ್ಟ್ರೇಲಿಯಾ ತಂಡದ 190 ರನ್‌ಗಳ ಚೇಸಿಂಗ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಅವರು ಸ್ಪೋಟಕ ಬ್ಯಾಟ್‌ ಮಾಡಿದ್ದರು. ಅವರು ಆಡಿದ್ದ ಕೇವಲ 39 ಎಸೆತಗಳಲ್ಲಿ 55 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕ ಸಿಡಿಸಿದರು. ಆ ಮೂಲಕ ಆಸ್ಟ್ರೇಲಿಯಾ ತಂಡದ ಮೂರು ವಿಕೆಟ್‌ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಮಿಚೆಲ್‌ ಒವೆನ್‌ ಟಿ20ಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಆಸ್ಟ್ರೇಲಿಯಾ ತಂಡ 78ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ವೇಳೆ ಕ್ರೀಸ್‌ಗೆ ಬಂದ ಮಿಚೆಲ್‌ ಒವೆನ್‌, ಕ್ಯಾಮೆರಾನ್‌ ಗ್ರೀನ್‌ ಜೊತೆ ಕೇವಲ 40 ಎಸೆತಗಳಲ್ಲಿ 80 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಒವೆನ್‌ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು ವಿಶೇಷ. ನಂತರ ಆಲ್ಝಾರಿ ಜೋಸೆಫ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.



ಇತಿಹಾಸ ಬರೆದ ಮಿಚೆಲ್‌ ಒವೆನ್‌

ಅದ್ಭುತ ಆಲ್‌ರೌಂಡ್ ಪ್ರದರ್ಶನದೊಂದಿಗೆ ಮಿಚೆಲ್ ಒವೆನ್ ಪೂರ್ಣ ಸದಸ್ಯ ತಂಡದ ವಿರುದ್ಧ ಟಿ20ಐ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಗಳಿಸಿದ ಮತ್ತು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 23 ವರ್ಷದ ಒವೆನ್, ದಕ್ಷಿಣ ಆಫ್ರಿಕಾದ ತಾರೆ ರಾಸ್ಸಿ ವ್ಯಾನ್ ಡೆರ್ ಮೆರ್ವೆ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು, ಅವರು ಟೆಸ್ಟ್ ಆಡುವ ರಾಷ್ಟ್ರದ ವಿರುದ್ಧ ಆಡುವಾಗ ವಿಕೆಟ್ ಪಡೆದ ಆರಂಭಿಕ ಆಟಗಾರನ ದಾಖಲೆಯನ್ನು ಮುರಿದಿದ್ದಾರೆ.



ಟಿ20ಐ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿಯೇ ಅರ್ಧಶತಕ ಹಾಗೂ ವಿಕೆಟ್‌ ಪಡೆದ ಆಟಗಾರರು

ಮಿಚೆಲ್‌ ಒವೆನ್‌ (ಆಸ್ಟ್ರೇಲಿಯಾ): 50 ರನ್‌, ಒಂದು ವಿಕೆಟ್‌ (ವೆಸ್ಟ್‌ ಇಂಡೀಸ್‌ ವಿರುದ್ಧ 2025)

ರಾಸಿ ವ್ಯಾನ್‌ ಡೆರ್‌ ಮರ್ವೆ (ದಕ್ಷಿಣ ಆಫ್ರಿಕಾ): 48 ರನ್‌, ಒಂದು ವಿಕೆಟ್‌ (ಆಸ್ಟ್ರೇಲಿಯಾ ವಿರುದ್ಧ 2009)

ಪಾಲ್‌ ಕಾಲಿಂಗ್‌ವುಡ್‌ (ಇಂಗ್ಲೆಂಡ್‌): 46 ರನ್‌, 2 ವಿಕೆಟ್‌ (ಆಸ್ಟ್ರೇಲಿಯಾ ವಿರುದ್ದ 2005)

ಹುಸೇನ್‌ ಟಲಾಟ್‌ (ಪಾಕಿಸ್ತಾನ): 41 ರನ್‌, ಒಂದು ವಿಕೆಟ್‌ (ವೆಸ್ಟ್‌ ಇಂಡೀಸ್‌ ವಿರುದ್ದ 2018)

ಸನತ್‌ ಜಯಸೂರ್ಯ (ಶ್ರೀಲಂಕಾ): 41 ರನ್‌, ಒಂದು ವಿಕೆಟ್‌ (ಇಂಗ್ಲೆಂಡ್‌ ವಿರುದ್ದ 2006)