ENG vs IND: ವಾಸಿಂ ಅಕ್ರಮ್ 2 ದಾಖಲೆಯ ಮೇಲೆ ಕಣ್ಣಿಟ್ಟ ಜಸ್‌ಪ್ರೀತ್ ಬುಮ್ರಾ
ಇನಿಂಗ್ಸ್ ಒಂದರಲ್ಲಿ ಬುಮ್ರಾ ಇನ್ನೊಂದು 5 ವಿಕೆಟ್ ಗೊಂಚಲು ಪಡೆದರೆ, ಅಕ್ರಮ್ ಅವರನ್ನು ಹಿಂದಿಕ್ಕಿ ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳನ್ನು ಪಡೆದ ಮೊದಲ ಏಷ್ಯನ್ ಬೌಲರ್ ಆಗುವ ಅವಕಾಶವನ್ನು ಹೊಂದಿದ್ದಾರೆ. ಸದ್ಯ ಉಭಯ ಆಟಗಾರರು 11 ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.


ಮ್ಯಾಂಚೆಸ್ಟರ್: ಅವಳಿ ಅನುಭವಿ ವೇಗಿಗಳಾದ ಆಕಾಶ್‌ದೀಪ್ ಮತ್ತು ಅರ್ಶ್‌ದೀಪ್ ಸಿಂಗ್ ಗಾಯವಾದ ಕಾರಣದಿಂದ ಜಸ್‌ಪ್ರೀತ್ ಬುಮ್ರಾ(Jasprit Bumrah)ರನ್ನು 4ನೇ ಟೆಸ್ಟ್‌ನಲ್ಲಿ(ENG vs IND) ಆಡಿಸುವುದು ಖಚಿತ. ಈ ಹಿಂದೆ ಕಾರ್ಯದೊತ್ತಡ ಕಾರಣಕ್ಕೆ ಬುಮ್ರಾಗೆ ನಾಲ್ಕನೇ ಟೆಸ್ಟ್‌ನಿಂದ ವಿಶ್ರಾಂತಿ ನೀಡಲಾಗುವುದು ಎಂದು ಹೇಳಲಾಗಿತ್ತು. ಇದೀಗ ವೇಗಿಗಳಿಬ್ಬರು ಗಾಯವಾದ ಕಾರಣ ಬುಮ್ರಾ ಸೇವೆ ತಂಡಕ್ಕೆ ಪ್ರಮುಖವಾಗಿದೆ. ನಾಲ್ಕನೇ ಟೆಸ್ಟ್‌ನಲ್ಲಿ ಬುಮ್ರಾ ಆಡಿದರೆ ಪಾಕಿಸ್ತಾದನ ಮಾಜಿ ದಿಗ್ಗಜ ವೇಗಿ ವಾಸಿಂ ಅಕ್ರಮ್(Wasim Akram) ಅವರ ದಾಖಲೆಯೊಂದನ್ನು ಮುರಿಯುವ ಅವಕಾಶವಿದೆ.
ಜುಲೈ 23 ರಂದು ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಐದು ವಿಕೆಟ್ ಕಿತ್ತರೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಮೊದಲ ಏಷ್ಯನ್ ಬೌಲರ್ ಎಂಬ ದಾಖಲೆ ನಿರ್ಮಿಸಲಿದಾರೆ. ಸದ್ಯ ಈ ದಾಖಲೆ ವಾಸಿಂ ಅಕ್ರಮ್ ಹೆಸರಿನಲ್ಲಿದೆ. ವಾಸಿಂ ಅಕ್ರಮ್ ತಮ್ಮ 17 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ, ಇಂಗ್ಲೆಂಡ್‌ನಲ್ಲಿ 14 ಪಂದ್ಯಗಳನ್ನು ಆಡಿದ್ದಾರೆ ಮತ್ತು 53 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಬುಮ್ರಾ ಈವರೆಗೆ 11 ಟೆಸ್ಟ್‌ಗಳಿಂದ 49* ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇನಿಂಗ್ಸ್ ಒಂದರಲ್ಲಿ ಬುಮ್ರಾ ಇನ್ನೊಂದು 5 ವಿಕೆಟ್ ಗೊಂಚಲು ಪಡೆದರೆ, ಅಕ್ರಮ್ ಅವರನ್ನು ಹಿಂದಿಕ್ಕಿ ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳನ್ನು ಪಡೆದ ಮೊದಲ ಏಷ್ಯನ್ ಬೌಲರ್ ಆಗುವ ಅವಕಾಶವನ್ನು ಹೊಂದಿದ್ದಾರೆ. ಸದ್ಯ ಉಭಯ ಆಟಗಾರರು 11 ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.
ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಏಷ್ಯನ್ ಬೌಲರ್‌ಗಳು
ವಾಸಿಂ ಅಕ್ರಮ್(ಪಾಕ್)- 14 ಪಂದ್ಯ, 53 ವಿಕೆಟ್
ಇಶಾಂತ್ ಶರ್ಮ(ಭಾರತ)-15 ಪಂದ್ಯ, 51 ವಿಕೆಟ್
ಜಸ್‌ಪ್ರೀತ್ ಬುಮ್ರಾ(ಭಾರತ)-11 ಪಂದ್ಯ, 49 ವಿಕೆಟ್
ಮೊಹಮ್ಮದ್ ಆಮೀರ್(ಪಾಕ್)-12 ಪಂದ್ಯ, 49 ವಿಕೆಟ್
ಮುತ್ತಯ್ಯ ಮುರಳೀಧರನ್(ಲಂಕಾ)-6 ಪಂದ್ಯ 48 ವಿಕೆಟ್
ಇದನ್ನೂ ಓದಿ ENG vs IND: ಸರಣಿಯಿಂದ ಹೊರಬಿದ್ದ ನಿತೀಶ್ ಕುಮಾರ್; 4ನೇ ಪಂದ್ಯಕ್ಕೆ ಅರ್ಶ್‌ದೀಪ್ ಅಲಭ್ಯ