ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪಾಕಿಸ್ತಾನ ಟಿ20ಐ ತಂಡ ಪ್ರಕಟ, ಶಾಹೀನ್ ಅಫ್ರಿದಿ ಕಮ್‌ಬ್ಯಾಕ್!
Pakistan T20I Squad Announced: ವೆಸ್ಟ್ ಇಂಡೀಸ್ ಪ್ರವಾಸದ ಟಿ20ಐ ಸರಣಿಗೆ ಪಾಕಿಸ್ತಾನ ತಂಡವನ್ನು ಜುಲೈ 25 ರಂದು ಪ್ರಕಟಿಸಲಾಗಿದೆ. ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರು ಚುಟುಕು ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಾನ ಕಳೆದುಕೊಂಡಿದ್ದ ಶಾಹೀನ್ ಅಪ್ರಿದಿ ಇದೀಗ ಟಿ20ಐ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪಾಕಿಸ್ತಾನ ತಂಡಗಳ ಪ್ರಕಟ.

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಗೆ ಪಾಕಿಸ್ತಾನ ತಂಡವನ್ನು (Pakistan T20I Squad) ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಜುಲೈ 25 ರಂದು ಶುಕ್ರವಾರ ಪ್ರಕಟಿಸಿದೆ. ದೀರ್ಘಾವಧಿ ಬಳಿಕ ಹಿರಿಯ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Sha Afridi) ಪಾಕಿಸ್ತಾನ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಇವರು ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಕೊನೆಯ ಬಾರಿ ಪಾಕಿಸ್ತಾನ ತಂಡವನ್ನು ಚುಟುಕು ಸ್ವರೂಪದಲ್ಲಿ ಪ್ರತಿನಿಧಿಸಿದ್ದರು. ಆದರೆ, ನಂತರ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟಿ20ಐ ಸರಣಿಯ ತಂಡದಿಂದ ಅವರನ್ನು ಕೈ ಬಿಡಲಾಗಿತ್ತು. ಇದೀಗ ಇವರ ಜೊತೆಗೆ ವೇಗಿ ಹ್ಯಾರಿ ರೌಫ್ ಹಾಗೂ ಹಸನ್ ಅಲಿಗೆ ಪಾಕಿಸ್ತಾನ ಟಿ20ಐ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.
ಇನ್ನು ಹಿರಿಯ ಬ್ಯಾಟ್ಸ್‌ಮನ್ ಬಾಬರ್ ಆಝಮ್ ಅವರನ್ನು ಟಿ20ಐ ತಂಡದಿಂದ ಮತ್ತೊಮ್ಮೆ ಹೊರಗಿಡಲಾಗಿದೆ. ಮೊಹಮ್ಮದ್ ರಿಝ್ವಾನ್ ನಾಯಕತ್ವದ ಪಾಕಿಸ್ತಾನ ಏಕದಿನ ತಂಡದಲ್ಲಿ ಬಾಬರ್ ಆಝಮ್ ಹಾಗೂ ಶಾಹೀನ್ ಶಾ ಅಫ್ರಿದಿ ಇದ್ದಾರೆ. ಪಾಕಿಸ್ತಾನ ತಂಡದಲ್ಲಿರುವ ಏಕೈಕ ಅನ್‌ಕ್ಯಾಪ್ಡ್ ಆಟಗಾರ ಹಸನ್ ನವಾಝ್. ಸಲ್ಮಾನ್ ಅಲಿ ಅಘಾ ಅವರು ಪಾಕಿಸ್ತಾನ ಟಿ20ಐ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ತಂಡದಲ್ಲಿ ಇವರು ರಿಝ್ವಾನ್‌ಗೆ ಉಪ ನಾಯಕರಾಗಿದ್ದಾರೆ.
IND vs ENG: IND vs ENG: ಕನ್ನಡಿಗ ಕರುಣ್ ನಾಯರ್‌ರ ಟೆಸ್ಟ್ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್ ಪ್ರತಿಕ್ರಿಯೆ!
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನ ತಂಡ ಟಿ20ಐ ಸರಣಿಯನ್ನು 2-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಟಿ20ಐ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ಮೂರು ಟಿ20ಐ ಪಂದ್ಯಗಳನ್ನು ಯುಎಸ್‌ಎನ ಲೌಡರ್‌ಹಿಲ್‌ನಲ್ಲಿ ಆಡಿಸಲಾಗುತ್ತದೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿಯು ಕೆರಿಬಿಯನ್‌ನಲ್ಲಿ ನಡೆಯಲಿದೆ.
ವೆಸ್ಟ್ ಇಂಡೀಸ್ ವಿರುದ್ದದ ಟಿ20ಐ ಸರಣಿಗೆ ಪಾಕಿಸ್ತಾನ ತಂಡ
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖಾರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲಾತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿ.ಕೀ), ಮೊಹಮ್ಮದ್ ನವಾಝ್, ಸಹಿಬ್ದಾಝ್ ಫರ್ಹಾನ್ (ವಿ.ಕೀ), ಸೈಮ್ ಆಯುಬ್, ಶಾಹೀನ್ ಶಾ ಅಫ್ರಿದಿ ಹಾಗೂ ಸೂಫಿಯಾನ್ ಮೊಖಿಮ್
🚨BREAKING NEWS🚨
— Rayham (@RayhamUnplugged) July 25, 2025
- The T20i and ODI squad for the West Indies tour has been announced!
- Finally, the wait for Babar Azam, Muhammad Rizwan and Shaheen Shah Afridi is over🔥 pic.twitter.com/yxXWd94Mte
ಪಾಕಿಸ್ತಾನ ಏಕದಿನ ತಂಡ
ಮೊಹಮ್ಮದ್ ರಿಝ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ಉಪ ನಾಯಕ), ಅಬ್ದುಲ್ ಶಫಿಕ್, ಅಬ್ರಾರ್‌ಅಹ್ಮದ್, ಬಾಬರ್ ಆಝಮ್, ಫಹೀಮ್ ಅಶ್ರಫ್, ಫಖಾರ್ ಝಮಾನ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ನಸೀಮ್ ಶಾ, ಸೈಮ್ ಆಯುಬ್, ಶಾಹೀನ್ ಶಾ ಅಫ್ರಿದಿ ಹಾಗೂ ಸೂಫಿಯನ್ ಮೊಖಿಮ್
IND vs ENG: ಭಾರತ 358 ರನ್‌ಗಳಿಗೆ ಆಲ್‌ಔಟ್, ಎರಡನೇ ದಿನ ಇಂಗ್ಲೆಂಡ್ ಮೇಲುಗೈ!
ಪಾಕಿಸ್ತಾನ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ
ಜುಲೈ 31 – ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20ಐ, ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಮತ್ತು ಬ್ರೋವರ್ಡ್ ಕೌಂಟಿ ಕ್ರೀಡಾಂಗಣ, ಲೌಡರ್‌ಹಿಲ್, ಯುಎಸ್‌ಎ
ಆಗಸ್ಟ್ 2 – ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟಿ20ಐ, ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಮತ್ತು ಬ್ರೋವರ್ಡ್ ಕೌಂಟಿ ಕ್ರೀಡಾಂಗಣ, ಲೌಡರ್‌ಹಿಲ್, ಯುಎಸ್‌ಎ
ಆಗಸ್ಟ್ 3 – ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20ಐ, ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಮತ್ತು ಬ್ರೋವರ್ಡ್ ಕೌಂಟಿ ಕ್ರೀಡಾಂಗಣ, ಲೌಡರ್‌ಹಿಲ್, ಯುಎಸ್‌ಎ
ಆಗಸ್ಟ್ 8 – ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ, ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್ ಮತ್ತು ಟೊಬ್ಯಾಗೊ
ಆಗಸ್ಟ್ 10 – ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ, ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್ ಮತ್ತು ಟೊಬ್ಯಾಗೊ
ಆಗಸ್ಟ್ 12 – ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ, ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್ ಮತ್ತು ಟೊಬ್ಯಾಗೊ