ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಧ್ಯ ಪ್ರದೇಶ ತಂಡಕ್ಕೆ ಫುಲ್‌ ಟೈಮ್‌ ಕ್ಯಾಪ್ಟನ್‌ ಆಗಿ ರಜತ್‌ ಪಾಟಿದಾರ್‌ ನೇಮಕ!

ಮುಂಬರುವ 2025-26ರ ಸಾಲಿನ ದೇಶಿ ಕ್ರಿಕೆಟ್‌ ನಿಮಿತ್ತ ಮಧ್ಯ ಪ್ರದೇಶ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿ ರಜತ್‌ ಪಾಟಿದಾರ್‌ ನೇಮಕಗೊಂಡಿದ್ದಾರೆ. ಅಕ್ಟೋಬರ್‌ 15 ರಂದು ರಣಜಿ ಟ್ರೋಫಿ ಟೂರ್ನಿಯ ಮೂಲಕ ದೇಶಿ ಕ್ರಿಕೆಟ್‌ ಋತು ಆರಂಭವಾಗಲಿದೆ. ರಜತ್‌ ಪಾಟಿದಾರ್‌ ಈಗಾಗಲೇ ಹಲವು ಬಾರಿ ಮಧ್ಯ ಪ್ರದೇಶ ತಂಡವನ್ನು ಮುನ್ನಡೆಸಿದ್ದಾರೆ.

ಮಧ್ಯ ಪ್ರದೇಶ ತಂಡಕ್ಕೆ ರಜತ್‌ ಪಾಟಿದಾರ್‌ ಪೂರ್ಣ ಪ್ರಮಾಣದ ನಾಯಕ!

ಮಧ್ಯ ಪ್ರದೇಶ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿ ರಜತ್‌ ಪಾಟಿದಾರ್‌ ನೇಮಕ. -

Profile Ramesh Kote Oct 7, 2025 3:36 PM

ನವದೆಹಲಿ: ಮುಂಬರುವ 2025-26ರ ಸಾಲಿನ ದೇಶಿ ಕ್ರಿಕೆಟ್‌ ಋತುವಿನ ನಿಮಿತ್ತ ಮಧ್ಯ ಪ್ರದೇಶ ( Madhya Pradesh) ತಂಡದ ನಾಯಕನಾಗುವ ಮೂಲಕ ರಜತ್‌ ಪಾಟಿದಾರ್‌ (Rajat Patidar) ಅವರು ಶುಭಮ್‌ ಶರ್ಮಾ ಅವರ ಸ್ಥಾನವನ್ನು ತುಂಬಿದ್ದಾರೆ. ಅಕ್ಟೋಬರ್‌ 15 ರಂದು ರಣಜಿ ಟ್ರೋಫಿ (Ranji Trophy) ಟೂರ್ನಿಯ ಮೂಲಕ ಪ್ರಸಕ್ತ ಆವೃತ್ತಿಯ ದೇಶಿ ಕ್ರಿಕೆಟ್‌ ಆವೃತ್ತಿಯ ಶುರುವಾಗಲಿದೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ವರದಿ ಮಾಡಿದೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಮತ್ತು ರಾಜ್ಯ ತಂಡ ಹೆಸರಾಂತ ದೇಶಿ ತರಬೇತುದಾರ ಚಂದ್ರಕಾಂತ್ ಪಂಡಿತ್ ಅವರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ಹೊಂದಿದೆ.

ಕಳೆದ ಆವೃತ್ತಿಯಲ್ಲಿಯೇ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ವೇಳೆ ಮೊದಲ ಬಾರಿ ಮಧ್ಯ ಪ್ರದೇಶ ತಂಡದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ರಜತ್‌ ನಿರ್ವಹಿಸಿದ್ದರು. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮುನ್ನಡೆಸುವ ಸಾಧ್ಯತೆಯನ್ನು ಅರಿತ ನಂತರ, ಚಂದ್ರಕಾಂತ್‌ ಪಂಡಿತ್‌ ಅವರು ರಜತ್‌ಗೆ ರಾಜ್ಯ ತಂಡವನ್ನು ಚುಟುಕು ಟೂರ್ನಿಯಲ್ಲಿ ಮುನ್ನಡೆಸಲು ಅವಕಾಶವನ್ನು ಮಾಡಿಕೊಟ್ಟಿದ್ದರು. ನಂತರ ತಮ್ಮ ನಾಯಕತ್ವದಲ್ಲಿ ರಜತ್‌ ಪಾಟಿದಾರ್‌, ಆರ್‌ಸಿಬಿಗೆ ಚೊಚ್ಚಲ ಟ್ರೋಫಿಯನ್ನು ಗೆದ್ದುಕೊಟ್ಟಿದ್ದರು. ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ 10 ಪಂದ್ಯಗಳಿಂದ 61.14ರ ಸರಾಸರಿಯಲ್ಲಿ 428 ರನ್‌ಗಳನ್ನು ಅವರು ಬಾರಿಸಿದ್ದರು. ಇದರಲ್ಲಿ ಅವರ ಐದು ಅರ್ಧಶತಕಗಳನ್ನು ಬಾರಿಸಿದ್ದರು.

IND vs AUS: ಯಶಸ್ವಿ ಜೈಸ್ವಾಲ್‌ ಔಟ್‌, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

ರಜತ್‌ ನಾಯಕತ್ವದಲ್ಲಿ ದುಲೀಪ್‌ ಟ್ರೋಫಿ ಗೆದ್ದಿದ್ದ ಕೇಂದ್ರ ವಲಯ

ಇತ್ತೀಚೆಗೆ ರಜತ್‌ ಪಾಟಿದಾರ್‌ ಅವರು 2014-15ರ ಬಳಿಕ ಇದೇ ಮೊದಲ ಬಾರಿ ದುಲೀಪ್‌ ಟ್ರೋಫಿ ಗೆದ್ದಿದ್ದ ಕೇಂದ್ರ ವಲಯ ತಂಡವನ್ನು ಮುನ್ನಡೆಸಿದ್ದರು. ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಅವರು ಈ ಟೂರ್ನಿಯಲ್ಲಿ ಆಡಿದ್ದ ಮೂರು ಪಂದ್ಯಗಳ ಐದು ಇನಿಂಗ್ಸ್‌ಗಳಿಂದ 76.40ರ ಸರಾಸರಿ ಮತ್ತು 96ರ ಸ್ಟ್ರೈಕ್‌ ರೇಟ್‌ನಲ್ಲಿ 382 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು ಎರಡು ಶತಕಗಳು ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ದಕ್ಷಿಣ ವಲಯ ವಿರುದ್ಧದ ಫೈನಲ್‌ನಲ್ಲಿ ಅವರು ಶತಕವನ್ನು ಬಾರಿಸಿದ್ದರು.

ಕಳೆದ ವಾರ ವಿದರ್ಭ ವಿರುದ್ಧ ಇರಾನಿ ಕಪ್‌ ಪಂದ್ಯದಲ್ಲಿಯೂ ಶೇಷ ಭಾರತ ತಂಡವನ್ನು ರಜತ್‌ ಪಾಟಿದಾರ್‌ ಮುನ್ನಡೆಸಿದ್ದರು. ಶೇಷ ಭಾರತ ತಂಡದಲ್ಲಿ ರಜತ್‌ ಪಾಟಿದಾರ್‌ ಅವರ ಜೊತೆಗೆ ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌ ಹಾಗೂ ಅಭಿಮನ್ಯು ಈಶ್ವರನ್‌ ಅವರು ಕೂಡ ಆಡಿದ್ದರು. ಆದರೂ ಈ ಪಂದ್ಯದಲ್ಲಿ ವಿದರ್ಭ ಎದುರು ಶೇಷ ಭಾರತ ತಂಡ 93 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ 66 ರನ್‌ಗಳನ್ನು ಕಲೆ ಹಾಕಿದ್ದರು.

IND vs AUS-ʻರೋಹಿತ್‌ ಶರ್ಮಾಗೆ ನಾಯಕತ್ವ ನೀಡದೇ ಇರುವುದು ಆಘಾತಕಾರಿʼ: ಹರ್ಭಜನ್‌ ಸಿಂಗ್‌!

ಕಳೆದ ಋತುವಿನಲ್ಲಿ 529 ರನ್‌ ಗಳಿಸಿದ್ದ ಪಾಟಿದಾರ್‌

2024-25ರ ರಣಜಿ ಋತುವಿನಲ್ಲಿ ರಜತ್ 11 ಇನಿಂಗ್ಸ್‌ಗಳಲ್ಲಿ 48.09ರ ಸರಾಸರಿಯಲ್ಲಿ 529 ರನ್ ಗಳಿಸಿದ್ದಾರೆ, ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ ತಂಡದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಜಿ ನಾಯಕ ಶುಭಂ ಶರ್ಮಾ 13 ಇನಿಂಗ್ಸ್‌ಗಳಲ್ಲಿ ಮೂರು ಶತಕ ಮತ್ತು ನಾಲ್ಕು ಅರ್ಧಶತಕಗಳೊಂದಿಗೆ 104.77ರ ಸರಾಸರಿಯಲ್ಲಿ 943 ರನ್ ಗಳಿಸಿದ್ದರು.

ಪಾಟಿದಾರ್‌ ಪ್ರಥಮ ದರ್ಜೆ ಅಂಕಿಅಂಶ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಜತ್ ಪಾಟಿದಾರ್‌ 72 ಪಂದ್ಯಗಳು ಮತ್ತು 123 ಇನಿಂಗ್ಸ್‌ಗಳಲ್ಲಿ 44.41ರ ಸರಾಸರಿಯಲ್ಲಿ 5,196 ರನ್ ಗಳಿಸಿದ್ದಾರೆ, ಇದರಲ್ಲಿ 15 ಶತಕಗಳು, 27 ಅರ್ಧಶತಕಗಳು ಮತ್ತು 196 ಅವರ ಅತ್ಯುತ್ತಮ ಸ್ಕೋರ್ ಸೇರಿದೆ. ಈ ಋತುವಿನಲ್ಲಿ ಪಾಟಿದಾರ್ ಅವರ ಫಾರ್ಮ್ ಪ್ರಭಾವಶಾಲಿಯಾಗಿದೆ, ದುಲೀಪ್ ಟ್ರೋಫಿ ಮತ್ತು ಇರಾನಿ ಕಪ್‌ ಎರಡರಲ್ಲಿಯೂ ಏಳು ಇನಿಂಗ್ಸ್‌ಗಳಲ್ಲಿ ಈಗಾಗಲೇ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.