Ranji Trophy: ರಣಜಿ ಟ್ರೋಫಿ ಟೂರ್ನಿಗೆ ಮುಂಬೈ ತಂಡ ಪ್ರಕಟ, ಶಾರ್ದುಲ್ ಠಾಕೂರ್ ನಾಯಕ!
Mumbai Ranji Trophy Squad: ಮುಂಬರುವ 2025-26ರ ರಣಜಿ ಟ್ರೋಫಿ ಟೂರ್ನಿಗೆ ಮುಂಬೈ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ನಾಲ್ವರು ಟೀಮ್ ಇಂಡಿಯಾ ಸ್ಟಾರ್ ಆಟಗಾರರು ಸ್ಥಾನವನ್ನು ಪಡೆದಿದ್ದಾರೆ. ಮುಂಬೈ ತಂಡದ ನಾಯಕತ್ವವನ್ನು ಶಾರ್ದುಲ್ ಠಾಕೂರ್‌ಗೆ ನೀಡಲಾಗಿದೆ.

ಮುಂಬೈ ರಣಜಿ ಟ್ರೋಫಿ ತಂಡಕ್ಕೆ ಶಾರ್ದುಲ್ ಠಾಕೂರ್ ನಾಯಕ. -

ಮುಂಬೈ: ಮುಂಬರುವ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ 16 ಸದಸ್ಯರ ಮುಂಬೈ ತಂಡವನ್ನು ಪ್ರಕಟಿಸಿದ್ದು, ಶಾರ್ದುಲ್ ಠಾಕೂರ್‌ಗೆ (Shardul Thakur) ನಾಯಕತ್ವವನ್ನು ನೀಡಲಾಗಿದೆ. ಅಜಿಂಕ್ಯ ರಹಾನೆ (Ajinkya Rahane) ಸೇರಿದಂತೆ ನಾಲ್ವರು ಟೀಮ್ ಇಂಡಿಯಾ ಆಟಗಾರರಿಗೆ ಮುಂಬೈ ತಂಡದಲ್ಲಿ ಸ್ಥಾನವನ್ನು ನೀಡಿದೆ. ಅಜಿಂಕ್ಯ ರಹಾನೆ ನಾಯಕತ್ವದಿಂದ ಕೆಳಗೆ ಇಳಿದ ಕಾರಣ ಅವರ ಸ್ಥಾನವನ್ನು ಶಾರ್ದುಲ್ ಅಲಂಕರಿಸಿದ್ದಾರೆ. ಅಕ್ಟೋಬರ್ 15 ರಿಂದ 18ರವರೆಗೆ ಮುಂಬೈ ತನ್ನ ಮೊದಲನೇ ಪಂದ್ಯವನ್ನು ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಆಡಲಿದೆ. 42 ಬಾರಿ ರಣಜಿ ಚಾಂಪಿಯನ್ ತಂಡ, ಈ ಬಾರಿ ಎಲೈಟ್ ಡಿ ಗುಂಪಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.
ಕಳೆದ ಆವೃತ್ತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಮುಂಬೈ ತಂಡ ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಇದೀಗ ಸೇಡು ತೀರಿಸಿಕೊಳ್ಳಲು ಮುಂಬೈ ಎದುರು ನೋಡುತ್ತಿದೆ. ಹಿಮಾಚಲ ಪ್ರದೇಶ, ಡೆಲ್ಲಿ, ಹೈದರಾಬಾದ್, ರಾಜಸ್ಥಾನ್, ಛತ್ತೀಸಗಢ ಹಾಗೂ ಪಾಂಡಿಚೇರಿ ತಂಡಗಳು ಕೂಡ ಮುಂಬೈ ಜೊತೆ ಎಲೈಟ್ ಡಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾರ ಅನುಭವವನ್ನು ಪರಿಗಣಿಸಿ ಶಾರ್ದುಲ್ ಠಾಕೂರ್‌ಗೆ ನಾಯಕತ್ವವನ್ನು ನೀಡಲಾಗಿದೆ. ಕಳೆದ ಆವೃತ್ತಿಯಲ್ಲಿ ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದ್ದರು. ಸರ್ಫರಾಝ್ ಖಾನ್ ಕೂಡ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಪೃಥ್ವಿ ಶಾಗೆ ಎದುರಾಯ್ತು ಸಂಕಷ್ಟ, ತನಿಖೆ ಕೈಗೆತ್ತಿಕೊಂಡ ದಿಲೀಪ್ ವೆಂಗ್ಸರ್ಕಾರ್!
ಆಲ್‌ರೌಂಡರ್ ಶಿವಂ ದುಬೆ ಹಾಗೂ ಮುಶೀರ್ ಖಾನ್ ಅವರು ಕೂಡ ತಂಡದಲ್ಲಿದ್ದಾರೆ. ಕಾರು ಅಪಘಾತದಿಂದಾಗಿ ಕಳೆದ ಆವೃತ್ತಿಯಲ್ಲಿ ಮುಶೀರ್ ಖಾನ್ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ರನ್ ಹೊಳೆ ಹರಿಸಲು ಎದುರು ನೋಡುತ್ತಿದ್ದಾರೆ. ಮುಂಬೈ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಓಪನರ್ ಆಯುಷ್ ಮ್ಹಾತ್ರೆ ಅವರಿಗೆ ಹಿರಿಯರ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಅವರು ಭಾರತ ಅಂಡರ್-19 ತಂಡವನ್ನು ಮುನ್ನಡೆಸಿದ್ದರು. ಇವರು ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ.
ಶ್ರೇಯಸ್ ಅಯ್ಯರ್ ಔಟ್
ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರು ಬೆನ್ನು ನೋವಿನ ಕಾರಣ ರೆಡ್ ಬಾಲ್ ಕ್ರಿಕೆಟ್‌ನಿಂದ ವಿರಾಮ ಪಡೆದಿದ್ದಾರೆ. ಪೃಥ್ವಿ ಶಾ ಮುಂಬೈ ತಂಡವನ್ನು ತೊರೆದು ಮಹಾರಾಷ್ಟ್ರ ತಂಡಕ್ಕೆ ಸೇರಿದ್ದಾರೆ. ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್ ಆಡಿದ್ದ ಸೂರ್ಯಕುಮಾರ್ ಯಾದವ್ ಕೂಡ ಗೈರಾಗಿದ್ದಾರೆ. ಶಿವಂ ದುಬೆ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಬಲ ತಂದುಕೊಡಲಿದ್ದಾರೆ.
#breaking India's T20 captain Suryakumar Yadav has been excluded from the Mumbai squad for their opening Ranji Trophy match against Jammu & Kashmir from Oct 15 in Srinagar https://t.co/Am2jnlASp1 pic.twitter.com/LFoTDTWQtQ
— Gaurav Gupta (@toi_gauravG) October 10, 2025
ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ದ ಗೆದ್ದು ರಣಜಿ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಕಾಣಲು ಮುಂಬೈ ಎದುರು ನೋಡುತ್ತಿದೆ. ಈ ಸೀಸನ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಲು ಶಾರ್ದುಲ್ ಠಾಕೂರ್ ಪಡೆ ಕಠಿಣ ಪರಿಶ್ರಮವನ್ನು ಪಡುತ್ತಿದೆ.
ಮುಂಬೈ ರಣಜಿ ಟ್ರೋಫಿ ತಂಡ: ಶಾರ್ದುಲ್ ಠಾಕೂರ್ (ನಾಯಕ), ಆಯುಷ್ ಮ್ಹಾತ್ರೆ, ಆಕಾಶ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತೋಮರ್ (ವಿಕೆಟ್ ಕೀಪರ್), ಸಿದ್ದೇಶ್ ಲಾಡ್, ಅಜಿಂಕ್ಯ ರಹಾನೆ, ಸರ್ಫರಾಝ್ ಖಾನ್, ಶಿವಂ ದುಬೆ, ಶ್ಯಾಮ್ಸ್ ಮುಲಾನಿ, ತನುಷ್ ಕೋಟಿಯನ್, ತುಷಾರ್ ದೇಶ್‌ಪಾಂಡೆ, ಸೈಲ್‌ವೆಸ್ಟರ್ ಡಿಸೌಝಾ, ಇರ್ಫಾನ್ ಉಮೈರ್, ಮುಶೀರ್ ಖಾನ್, ಅಖಿಲ್ ಹೆರ್ವಾಡೇಕರ್, ರಾಯ್‌ಸ್ಟನ್ ಡಿಯಾಸ್