ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026 Auction: ಡಿಸೆಂಬರ್‌ನಲ್ಲಿ 2026ರ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ?

IPL 2026 Auction: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ತಯಾರಿ ಶುರುವಾಗಿದೆ. ಮುಂದಿನ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್‌ ತಿಂಗಳಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಅದರಂತೆ ಆಟಗಾರರ ಪಟ್ಟಿ ಬಿಡುಗಡೆ ಮಾಡಲು ನವೆಂಬರ್‌ವರೆಗೆ ಅವಕಾಶವನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಿಸಿಸಿಐ ಇನ್ನೂ ಅಧೀಕೃತವಾಗಿ ತಿಳಿಸಿಲ್ಲ.

ಡಿಸೆಂಬರ್‌ನಲ್ಲಿ 2026 ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ?

2026ರ ಐಪಿಎಲ್‌ ಮಿನಿ ಹರಾಜಿಗೆ ದಿನಾಂಕ ಪ್ರಕಟ? -

Profile Ramesh Kote Oct 10, 2025 7:47 PM

ನವದೆಹಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026 mini Auction) ಟೂರ್ನಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್‌ ಮಧ್ಯದಲ್ಲಿ ನಡಯಲಿದೆ ಹಾಗೂ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಸಲ್ಲಿಸಲು ನವೆಂಬರ್‌ನಲ್ಲಿ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಕ್ರಿಕ್‌ಬಝ್‌ ವರದಿಯ ಪ್ರಕಾರ, ಮಿನಿ ಹರಾಜು ಪ್ರಕ್ರಿಯೆಯು ಡಿಸೆಂಬರ್‌ 13 ರಿಂದ 14ರ ಒಳಗೆ ನಡೆಯಬಹುದು. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಹಾಗೂ ಫ್ರಾಂಚೈಸಿಗಳ ಅಧಿಕಾರಿಗಳು ಮೇಲಿನ ದಿನಾಂಕಗಳ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ. ಆದರೆ, ಅಧಿಕೃತವಾಗಿ ಐಪಿಎಲ್‌ ಕೌನ್ಸಿಲ್‌ (IPL Council) ಪ್ರಕಟಣೆಯನ್ನು ಹೊರಡಿಸುವುದು ಬಾಕಿ ಇದೆ.

ಕಳೆದ 2025ರ ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆಯನ್ನು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಸಲಾಗಿತ್ತು. ಭಾರತದಿಂದ ಹೊರಗಡೆ ಐಪಿಎಲ್‌ ಹರಾಜು ಪ್ರಕ್ರಿಯೆಯನ್ನು ನಡೆಸಿದ್ದು ಇದೇ ಮೊದಲು. 2026ರ ಐಪಿಎಲ್‌ ಮಿನಿ ಹರಾಜು ದೇಶದಲ್ಲಿಯೇ ನಡೆಯಲಿದೆ ಎಂದು ನಂಬಲಾಗಿದೆ. ಈ ಬಾರಿ ವಿದೇಶದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಲು ಬಿಸಿಸಿಐಗೆ ಆಸಕ್ತಿ ಇಲ್ಲ ಎಂದು ತಿಳಿದುಬಂದಿದೆ.

ಆಟಗಾರರನ್ನುಉಳಿಸಿಕೊಂಡ ಹಾಗೂ ರಿಲೀಸ್‌ ಮಾಡಿದ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ಎಲ್ಲಾ ಫ್ರಾಂಚೈಸಿಗಳಿಗೆ ನವೆಂಬರ್‌ 15ಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಆಟಗಾರರನ್ನು ಉಳಿಸಿಕೊಳ್ಳುವ ಅವಧಿ ನಿರ್ಣಾಯಕವಾಗಿರುತ್ತದೆ, ಏಕೆಂದರೆ ಹಲವು ದೊಡ್ಡ ಹಣದ ಒಪ್ಪಂದಗಳನ್ನು ಬಿಡುಗಡೆ ಮಾಡುವುದರಿಂದ ಹಣವನ್ನು ಮುಕ್ತಗೊಳಿಸಲು ಮತ್ತು ತಂಡಗಳಲ್ಲಿನ ಪ್ರಮುಖ ಕ್ಷೇತ್ರಗಳನ್ನು ಬಲಪಡಿಸಲು ಇದರಿಂದ ಸಾಧ್ಯವಾಗುತ್ತದೆ. ಕೋಲ್ಕತ್ತಾ ನೈಟ್ ರೈಡರ್ಸ್‌ನ ವೆಂಕಟೇಶ್ ಅಯ್ಯರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಟಿ. ನಟರಾಜನ್ ಸೇರಿದಂತೆ ಇತರ ಆಟಗಾರರ ಭವಿಷ್ಯ ಪರಿಶೀಲನೆಯಲ್ಲಿದೆ.

Ranji Trophy: ರಣಜಿ ಟ್ರೋಫಿ ಟೂರ್ನಿಗೆ ಮುಂಬೈ ತಂಡ ಪ್ರಕಟ, ಶಾರ್ದುಲ್‌ ಠಾಕೂರ್‌ ನಾಯಕ!

ಭಾರತೀಯ ಕ್ರಿಕೆಟ್‌ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹಾಗಾಗಿ ಈ ಬಾರಿ ಅಶ್ವಿನ್‌ ಅವರ ಹೆಸರು ಹರಾಜಿನಲ್ಲಿ ಗೈರಾಗಲಿದೆ. ಅವರು ಇತ್ತೀಚೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ, ವಿಶ್ವದಾದಂತ್ಯ ಫ್ರಾಂಚೈಸಿ ಲೀಗ್‌ಗಳನ್ನು ಆಡಲು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ನಿರ್ಗಮನದಿಂದ ಚೆನ್ನೈ ಫ್ರಾಂಚೈಸಿ ಪರ್ಸ್‌ಗೆ 9.75 ಕೋಟಿ ರೂ ಸೇರ್ಪಡೆಯಾಗಲಿದೆ.

ಕಳೆದ ಐಪಿಎಲ್‌ ಟೂರ್ನಿಗೆ ಅಲಭ್ಯರಾಗಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಅವರು ಈ ಬಾರಿ ಮಿನಿ ಹರಾಜಿನಲ್ಲಿ ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿರುವ ಕಾರಣ ಅವರನ್ನು ಖರೀದಲಸು ಫ್ರಾಂಚೈಸಿಗಳು ಪೈಪೋಟಿ ನಡೆಸಬಹದು, ಹಾಗಾಗಿ ಅವರ ಬೆಲೆ ಜಾಸ್ತಿಯಾಗುವ ಸಾಧ್ಯತೆ ಇದೆ.

IND vs WI 2nd Test: ಯಶಸ್ವಿ ಜೈಸ್ವಾಲ್‌ ಭರ್ಜರಿ ಶತಕ, ದೊಡ್ಡ ಮೊತ್ತದತ್ತ ಭಾರತ ತಂಡ!

ಮುಂದಿನ ಮಿನಿ ಹರಾಜು ಫ್ರಾಂಚೈಸಿಗಳಿಗೆ ತುಂಬಾ ಲಾಭದಾಯಕವಾಗಲಿದೆ. ಏಕೆಂದರೆ ಕಳೆದ ಟೂರ್ನಿಯಲ್ಲಿ ತಂಡಗಳು ಯಾವ ವಿಭಾಗದಲ್ಲಿ ಸಮಸ್ಯೆಗಳನ್ನು ಎದುರಿಸಿತ್ತು, ಅದನ್ನು ಪರಿಹರಿಸಿಕೊಳ್ಳಲು ಮಿನಿ ಹರಾಜನ್ನು ಬಳಸಿಕೊಳ್ಳಲಿವೆ. ತಂಡವನ್ನು ಸಂಯೋಜನೆಯನ್ನು ಬಲಿಷ್ಠಗೊಳಿಸಿಕೊಳ್ಳಲು ಎಲ್ಲಾ ಫ್ರಾಂಚೈಸಿಗಳು ಗಮನವನ್ನು ಕೊಡಲಿವೆ.

ಆಟಗಾರರನ್ನು ಉಳಿಸಿಕೊಳ್ಳುವ ತಂತ್ರಗಳು, ಬಜೆಟ್ ಡೈನಾಮಿಕ್ಸ್ ಮತ್ತು ತಂಡದ ಸಂಯೋಜನೆ ಎಲ್ಲವೂ ಇರುವುದರಿಂದ, ಡಿಸೆಂಬರ್ ಹರಾಜು ಆಕರ್ಷಕ ವ್ಯವಹಾರವಾಗಲಿದೆ ಎಂದು ಭರವಸೆ ನೀಡುತ್ತದೆ. ಐಪಿಎಲ್ ವಿಕಸನಗೊಳ್ಳುತ್ತಲೇ ಇರುವುದರಿಂದ, 2026ರ ಋತುವನ್ನು ಅದ್ಭುತವಾಗಿ ನೀಡುವ ಸಾಮರ್ಥ್ಯವಿರುವ ತಂಡಗಳನ್ನು ರಚಿಸಲು ಫ್ರಾಂಚೈಸಿಗಳು ಅನುಭವ ಮತ್ತು ಯುವಕರನ್ನು ಹೇಗೆ ಸಮತೋಲನಗೊಳಿಸುತ್ತವೆ ಎಂಬುದರ ಮೇಲೆ ಎಲ್ಲರ ಕಣ್ಣುಗಳು ಇರುತ್ತವೆ.