ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG ಸಂಯೋಜನೆಯ ಪ್ಲೇಯಿಂಗ್‌ XI ಪ್ರಕಟಿಸಿದ ಆಕಾಶ ಚೋಪ್ರಾ!

ಭಾರತ ಹಾಗೂ ಇಂಗ್ಲೆಂಡ್‌ ಆಟಗಾರರನ್ನು ಒಳಗೊಂಡ ಸಂಯೋಜನೆಯ ಪ್ಲೇಯಿಂಗ್‌ XI ಅನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ವಿಶ್ಲೇಷಕ ಆಕಾಶ್‌ ಚೋಪ್ರಾ ಆಯ್ಕೆ ಮಾಡಿದ್ದಾರೆ. ಈ ಸರಣಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್‌ ಪ್ರದರ್ಶನವನ್ನು ತೋರಿದ್ದ ವಾಷಿಂಗ್ಟನ್‌ ಸುಂದರ್‌ ಅವರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ.

ಭಾರತ-ಇಂಗ್ಲೆಂಡ್‌ ಸಂಯೋಜನೆಯ ತಂಡ ಕಟ್ಟಿದ ಆಕಾಶ್‌ ಚೋಪ್ರಾ!

ಭಾರತ-ಇಂಗ್ಲೆಂಡ್‌ ಸಂಯೋಜನೆಯ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ.

Profile Ramesh Kote Aug 7, 2025 9:19 PM

ನವದೆಹಲಿ: ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ (IND vs ENG) ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಒಳಗೊಂಡ ಭಾರತ vs ಇಂಗ್ಲೆಂಡ್‌ ಸಂಯೋಜನೆ ಪ್ಲೇಯಿಂಗ್‌ XI ಅನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ವಿವರಣಾಕಾರ ಆಕಾಶ್‌ ಚೋಪ್ರಾ (Aakash Chopra) ಆಯ್ಕೆ ಮಾಡಿದ್ದಾರೆ. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಆಟಗಾರರನ್ನು ಚೋಪ್ರಾ ಆರಿಸಿದ್ದಾರೆ. ಆದರೆ, ಉತ್ತಮ ಆಲ್‌ರೌಂಡರ್‌ ಪ್ರದರ್ಶನವನ್ನು ತೋರಿದ್ದ ವಾಷಿಂಗ್ಟನ್‌ ಸುಂದರ್‌ (Washington Sundar) ಅವರನ್ನು ಈ ತಂಡದಿಂದ ಕೈ ಬಿಡಲಾಗಿದೆ.

ಈ ಸರಣಿಯಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಿಂದ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದ ವಾಷಿಂಗ್ಟನ್‌ ಸುಂದರ್‌ ಅವರನ್ನು ಆಕಾಶ್‌ ಚೋಪ್ರಾ ಕೈ ಬಿಟ್ಟಿದ್ದಾರೆ. ಆ ಮೂಲಕ ಅವರು ರವೀಂದ್ರ ಜಡೇಜಾ ಹಾಗೂ ಬೆನ್‌ ಸ್ಟೋಕ್ಸ್‌ ಅವರನ್ನು ಆಲ್‌ರೌಂಡರ್‌ಗಳ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

"ವಾಷಿಂಗ್ಟನ್‌ ಸುಂದರ್‌ ಅವರನ್ನು ಆಯ್ಕೆ ಮಾಡಲು ನಾನು ಯೋಚಿಸುತ್ತಿದ್ದೆ ಆದರೆ, ರವೀಂದ್ರ ಜಡೇಜಾ ಅವರನ್ನು ಆರಿಸಿದ್ದೇನೆ. ಇವರು ಕೂಡ ಸ್ಥಿರ ಪ್ರದರ್ಶನವನ್ನು ತೋರಿದ್ದಾರೆ. ಇವರು ಹೆಚ್ಚಿನ ವಿಕೆಟ್‌ಗಳನ್ನು ಪಡೆದಿಲ್ಲ ನಿಜ, ಆದರೆ ಇಲ್ಲಿನ ಪಿಚ್‌ಗಳು ಸ್ಪಿನ್‌ ಸ್ನೇಹಿಯಾಗಿಲ್ಲ," ಎಂದು ಆಕಾಶ್‌ ಚೋಪ್ರಾ ಸ್ಪಷ್ಟನೆ ನೀಡಿದ್ದಾರೆ.

IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್‌ ಬುಮ್ರಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

ಯಶಸ್ವಿ ಜೈಸ್ವಾಲ್‌- ಕೆಎಲ್‌ ರಾಹುಲ್‌ ಓಪನರ್ಸ್‌

"ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್ ಅವರು ಓಪನರ್ಸ್‌. ಜೈಸ್ವಾಲ್‌ ಮೊದಲು ಹಾಗೂ ಕೊನೆಯ ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿದ್ದರು. ಅವರು 500ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಕೆಎಲ್‌ ರಾಹುಲ್‌ ಅವರು ಕೂಡ ಉತ್ತಮ ಪ್ರದರ್ಶನವನ್ನು ತೋರಿದ್ದರು," ಎಂದು ತಿಳಿಸಿದ್ದಾರೆ.

ಆಕಾಶ್‌ ಚೋಪ್ರಾ ಮೂರು ಹಾಗೂ ನಾಲ್ಕನೇ ಕ್ರಮಾಂಕಗಳಲ್ಲಿ ಜೋ ರೂಟ್‌ ಹಾಗೂ ಶುಭಮನ್‌ ಗಿಲ್‌ ಅವರನ್ನು ಆರಿಸಿದ್ದಾರೆ.

"ಜೋ ರೂಟ್‌ ಅವರು ಇಲ್ಲದೆ ತಂಡವನ್ನು ಕಟ್ಟಲು ಸಾಧ್ಯವಿಲ್ಲ, ಹಾಗೆಯೇ ಶುಭಮನ್‌ ಗಿಲ್‌ ಇಲ್ಲದೆಯೂ ತಂಡವನ್ನು ರಚಿಸಲು ಆಗುವುದಿಲ್ಲ. ಏಕೆಂದರೆ ಅವರು 750ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಸರಣಿಯಲ್ಲಿ ಗಿಲ್‌ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆಗಿದ್ದಾರೆ.

IND vs ENG: ಜಸ್‌ಪ್ರೀತ್‌ ಬುಮ್ರಾ ಪ್ರದರ್ಶನದ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ಮಧ್ಯಮ ಕ್ರಮಾಂಕದಲ್ಲಿ ರಿಷಭ್‌ ಪಂತ್‌ ಹಾಗೂ ಹ್ಯಾರಿ ಬ್ರೂಕ್‌ ಅವರಿಗೆ ಆಕಾಶ್‌ ಚೋಪ್ರಾ ಚಾನ್ಸ್‌ ಕೊಟ್ಟಿದ್ದಾರೆ. "ನನ್ನ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌. ಅವರು ಪಾದದ ಮೂಳೆ ಮುರಿದಿದ್ದರೂ ಬ್ಯಾಟಿಂಗ್‌ಗೆ ಇಳಿದಿದ್ದರು. ಅವರು ಅಸಾಧಾರಣ ಪ್ರದರ್ಶನವನ್ನು ತೋರಿದ್ದರು," ಎಂದು ಚೋಪ್ರಾ ಹೊಗಳಿದ್ದಾರೆ.

7 ಮತ್ತು 8ನೇ ಸ್ಥಾನಗಳಲ್ಲಿ ಆಕಾಶ್‌ ಚೋಪ್ರಾ, ಕ್ರಮವಾಗಿ ಬೆನ್‌ ಸ್ಟೋಕ್ಸ್‌ ಮತ್ತು ರವೀಂದ್ರ ಜಡೇಜಾ ಅವರನ್ನು ಆರಿಸಿದ್ದಾರೆ. "ಬೆನ್‌ ಸ್ಟೋಕ್ಸ್‌ ಅಸಾಧಾರಣ ಪ್ರದರ್ಶನವನ್ನು ತೋರಿದ್ದಾರೆ. ಇವರು ಕೊನೆಯ ಪಂದ್ಯವನ್ನುಆಡಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಅವರು ಬ್ಯಾಟಿಂಗ್‌ನಲ್ಲಿ ರನ್‌ ಗಳಿಸಿದ್ದರು. ಆದರೆ, ಬೌಲಿಂಗ್‌ನಲ್ಲಿಯೂ ವಿಕೆಟ್‌ ಕಿತ್ತಿದ್ದರು," ಎಂದು ಅವರು ಶ್ಲಾಘಿಸಿದ್ದಾರೆ.

IND vs ENG: ʻಒಂದು ವೇಳೆ ಬೆನ್‌ ಸ್ಟೋಕ್ಸ್‌ ಆಡಿದ್ರೆ ಇಂಗ್ಲೆಂಡ್‌ ಗೆಲ್ಲುತ್ತಿತ್ತುʼ-ಮೈಕಲ್‌ ವಾನ್‌!

ವೇಗದ ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಹಾಗೂ ಇಂಗ್ಲೆಂಡ್‌ ತಂಡದ ಜಾಶ್‌ ಟಾಂಗ್‌ ಅವರನ್ನು ಆರಿಸಿದ್ದಾರೆ.

ಭಾರತ-ಇಂಗ್ಲೆಂಡ್‌ ಸಂಯೋಜನೆಯ ಪ್ಲೇಯಿಂಗ್‌ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಜೋ ರೂಟ್, ಶುಭಮನ್ ಗಿಲ್, ರಿಷಬ್ ಪಂತ್ (ವಿಕೆ), ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಜೋಶ್ ಟಂಗ್.