ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಲು ಕಾರಣ ತಿಳಿಸಿದ ವಿರಾಟ್ ಕೊಹ್ಲಿ!
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ನಾಯಕತ್ವ ಹಾಗೂ ಬ್ಯಾಟಿಂಗ್ ಎರಡೂ ಏಕಕಾಲದಲ್ಲಿ ನಿರ್ವಹಿಸುವಾಗ ಎದುರಾಗುತ್ತಿದ್ದ ಹೊರೆಯ ಕಾರಣ ಅಂದು ನಾಯಕತ್ವವನ್ನು ಬಿಡಬೇಕಾಯಿತು ಎಂದಿದ್ದಾರೆ.
ಭಾರತ ಟೆಸ್ಟ್ ನಾಯಕತ್ವದ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ. -
ನವದೆಹಲಿ: ಭಾರತೀಯ ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ವಿರಾಟ್ ಕೊಹ್ಲಿ(Virat Kohli) ಅಗ್ರ ಸ್ಥಾನದಲ್ಲಿದ್ದಾರೆ. ಏಕೆಂದರೆ ಅವರು ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕೆ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಆದರೆ, ಅವರು 2022ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ (IND vs SA 2022) ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತೊರೆದಿದ್ದರು. ಆ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ದೀರ್ಘಾವಧಿ ಬಳಿಕ ಅವರು ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೀರ್ಘಾವಧಿ ಸ್ವರೂಪದಲ್ಲಿ ಬ್ಯಾಟಿಂಗ್ ಹಾಗೂ ನಾಯಕತ್ವವನ್ನು ನಿರ್ವಹಿಸುವುದು ತಮ್ಮ ಮೇಲೆ ಹೊರೆ ಬೀಳುತ್ತಿತ್ತು ಎಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.
ತಂಡದ ನಾಯಕತ್ವ ಮತ್ತು ಪ್ರಮುಖ ಬ್ಯಾಟರ್ ಸೇರಿ ಎರಡು ದೊಡ್ಡ ಜವಾಬ್ದಾರಿಗಳನ್ನು ಏಕ ಕಾಲದಲ್ಲಿ ಸರಿದೂಗಿಸುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ಕೊಹ್ಲಿ, ಭಾರತ ಟೆಸ್ಟ್ ತಂಡದ ಹಿತದೃಷ್ಟಿಯಿಂದ ಈ ಎರಡೂ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಂಪೂರ್ಣ ಶ್ರಮ ಪಟ್ಟಿದ್ದರು. ಆದರೆ, ಇದನ್ನು ದೀರ್ಘಾವಧಿ ಮುಂದುವರಿಸಲು ಸಾಧ್ಯವಾಗದೆ, ತಂಡದ ಒಳಿತಿಗಾಗಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು.
IND vs AFG: ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ್ದ ಪ್ರಿನ್ಸ್ ಯಾದವ್‌ಗೆ ಭಾರತ ತಂಡದಲ್ಲಿ ಸ್ಥಾನ!
“ಕೊನೆಗೆ ನಾನು ತಂಡದ ಬ್ಯಾಟಿಂಗ್ ವಿಭಾಗದ ಕೇಂದ್ರಬಿಂದುವಾಗಿಯೂ, ನಾಯಕತ್ವದ ಪ್ರಮುಖ ಮುಖವಾಗಿಯೂ ಇದ್ದೆ. ನಿಜ ಹೇಳಬೇಕೆಂದರೆ, ಈ ಎರಡೂ ಜವಾಬ್ದಾರಿಗಳು ನನ್ನ ದಿನನಿತ್ಯದ ಜೀವನದ ಮೇಲೆ ಎಷ್ಟು ದೊಡ್ಡ ಒತ್ತಡವನ್ನು ಉಂಟುಮಾಡುತ್ತವೆ ಎಂಬುದನ್ನು ನಾನು ಅಂದು ಅರಿತಿರಲಿಲ್ಲ,” ಎಂದು ವಿರಾಟ್ ಕೊಹ್ಲಿ ಆರ್‌ಸಿಬಿ ಇನೋವೇಷನ್ ಲ್ಯಾಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
“ಆದರೆ ಭಾರತೀಯ ಕ್ರಿಕೆಟ್ ಯಾವಾಗಲೂ ಅಗ್ರ ಸ್ಥಾನದಲ್ಲಿಯೇ ಉಳಿಯಬೇಕು ಎಂಬ ಬಲವಾದ ಉದ್ದೇಶ ನನ್ನೊಳಗಿದ್ದ ಕಾರಣ, ನಾನು ಆ ಒತ್ತಡದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಅದಕ್ಕಾಗಿಯೇ ನಾಯಕತ್ವ ತೊರೆದ ವೇಳೆಗೆ ನಾನು ಸಂಪೂರ್ಣವಾಗಿ ಖಾಲಿಯಾಗಿದ್ದೆ. ನನ್ನೊಳಗೆ ಯಾವುದೇ ಶಕ್ತಿ ಉಳಿದಿರಲಿಲ್ಲ. ಆ ಜವಾಬ್ದಾರಿಗಳು ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. ಅದು ತುಂಬಾ ಕಠಿಣ ಅನುಭವವಾಗಿತ್ತು,” ಎಂದು ಅವರು ಭಾವುಕರಾಗಿದ್ದಾರೆ.
IPL 2026: ವಿರಾಟ್ ಕೊಹ್ಲಿ ಅಲ್ಲ! ಆರ್‌ಸಿಬಿಗೆ ಅತ್ಯಂತ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಡೇಲ್ ಸ್ಟೇನ್!
ವಿರಾಟ್ ಕೊಹ್ಲಿ ಅವರು ಭಾರತದ ಟೆಸ್ಟ್ ತಂಡವನ್ನು ಒಟ್ಟು 68 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 40 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಭಾರತ ತಂಡಕ್ಕೆ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ದಾಖಲೆಯನ್ನು ಅವರು ಹೊಂದಿದ್ದರು. ಒಟ್ಟಾರೆಯಾಗಿ ಈ ದಾಖಲೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (48 ಗೆಲುವು), ಸ್ಟೀವಾ (41 ಗೆಲುವು) ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ (53 ಗೆಲುವು) ವಿರಾಟ್ ಕೊಹ್ಲಿಗಿಂತ ಅಗ್ರ ಸ್ಥಾನಗಳಲ್ಲಿದ್ದಾರೆ.
ಟೆಸ್ಟ್ ನಾಯಕತ್ವದಿಂದ ಹಿಂದೆ ಸರಿದ ಬಳಿಕ, ಕೊಹ್ಲಿ ಅವರ ಫಾರ್ಮ್ ನಿಧಾನವಾಗಿ ಕುಸಿಯತೊಡಗಿತು. ಇದರಿಂದಾಗಿ ಅವರು 2025ರ ಬೇಸಿಗೆಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಬಲಗೈ ಬ್ಯಾಟರ್ ಕೊಹ್ಲಿ, 123 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 9,230 ರನ್‌ಗಳನ್ನು 46.85ರ ಸರಾಸರಿಯಲ್ಲಿ ಗಳಿಸಿದ್ದಾರೆ. ಅವರು ಈ ಮಾದರಿಯಲ್ಲಿ 30 ಶತಕಗಳನ್ನು ದಾಖಲಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ದಾಖಲಿಸಿದ್ದ ಅಜೇಯ 254 ರನ್‌ಗಳು ಇವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.