ಕೊಹ್ಲಿ, ರೋಹಿತ್, ಪೂಜಾರಾಗೆ ವಿದಾಯದ ಪಂದ್ಯ ನೀಡಬೇಕೆಂದ ಶ್ರೀಕಾಂತ್!
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತೀಯ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ಅವರಿಗೆ ಉತ್ತಮವಾಗಿ ಬೀಳ್ಕೊಡುಗೆ ನೀಡಬಹುದಿತ್ತು ಎಂದು ಭಾರತ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯದ ಪಂದ್ಯವನ್ನು ಆಡಿಸಬೇಕಾಗಿತ್ತೆಂದ ಶ್ರೀಕಾಂತ್.

ದುಬೈ: ಕಳೆದ ಮೇ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸದ ಆರಂಭಕ್ಕೂ ಮುನ್ನ ಹಿಟ್‌ಮ್ಯಾನ್ ರೋಹಿತ್ ಶರ್ಮಾ (Rohit Sharma) ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಇದಾದ ಐದು ದಿನಗಳ ನಂತರ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಅವರು ಕೂಡ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿ ಶಾಕ್ ನೀಡಿದ್ದರು. ಇದು ಭಾರತೀಯ ಕ್ರಿಕೆಟ್‌ಗೆ ಮಾತ್ರವಲ್ಲದೇ ಜಾಗತಿಕವಾಗಿ ಆಘಾತಕಾರಿ ಬೆಳವಣಿಗೆ ಎನ್ನಲಾಗಿತ್ತು. ಇದಾದ ಬಳಿಕ ಕಳೆದೆರಡು ದಿನಗಳ ಹಿಂದೆ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಚೇತೇಶ್ವರ್ ಪೂಜಾರ (Cheteshwar Pujara) ಅವರು ಕೂಡ ಎಲ್ಲಾ ಸ್ವರೂಪದ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ರೋಹಿತ್ ಮತ್ತು ಕೊಹ್ಲಿಯವರ ವಿದಾಯದ ನಂತರ ಕೆಲವು ದಿಗ್ಗಜರು ಅಶ್ವಿನ್ ಸೇರಿದಂತೆ ಮೂರು ಮಂದಿ ಶ್ರೇಷ್ಠ ಆಟಗಾರರಿಗೂ ಬಿಸಿಸಿಐ ಬೀಳ್ಕೊಡುಗೆ ನೀಡಬೇಕೆಂದು ಆಗ್ರಹಿಸಿದ್ದರು.
ಏಕೆಂದರೆ ಈ ಮೂವರು ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಈ ಹಿನ್ನೆಲೆ ಅವರನ್ನು ಸ್ಮರಿಸಬೇಕು ಎನ್ನುವ ಅಭಿಪ್ರಾಯ ಹೊರಹಾಕಿದ್ದರು. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಮಾತನಾಡಿ ಕೊಹ್ಲಿ, ರೋಹಿತ್, ಪೂಜಾರ ಅವರು ಉತ್ತಮ ಬೀಳ್ಕೊಡುಗೆಗೆ ಅರ್ಹರು. ಹಾಗಾಗಿ ಬಿಸಿಸಿಐ ಇವರಿಗೆ ವಿದಾಯದ ಪಂದ್ಯವನ್ನು ನೀಡಿ ಅವರ ಸಾಧನೆಯನ್ನು ಸ್ಮರಿಸಲು ಸಲಹೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಕಾರಣ ತಿಳಿಸಿದ ಮನೋಜ್ ತಿವಾರಿ!
ಕ್ರಿಸ್ ಶ್ರೀಕಾಂತ್ ಹೇಳಿದ್ದೇನು?
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಶ್ರೀಕಾಂತ್, "ನೀವು ನಿಮ್ಮ ದೇಶಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡಿದರೆ, ನೀವು ಅದ್ಭುತ ಕ್ರಿಕೆಟಿಗರಾಗಿರಬೇಕು. ಆದ್ದರಿಂದ ನಿಮಗೆ ಉತ್ತಮ ಬೀಳ್ಕೊಡುಗೆ ನೀಡಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತರಾದಾಗ ದೊಡ್ಡ ಸಂವಹನದ ಅಂತರವಿತ್ತು ಎಂದು ನನಗೆ ಮನವರಿಕೆಯಾಗಿದೆ. ಅವರು ಕೊಹ್ಲಿಯೊಂದಿಗೆ ಮಾತನಾಡಬೇಕಿತ್ತು, ಆದರೆ ಇದು ಆಟ ಮತ್ತು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದಲ್ಲ" ಎಂದು ತಿಳಿಸಿದ್ದಾರೆ.
ಈ ಹಿಂದೆ ಬಿಸಿಸಿಐ ಮುಖ್ಯ ಆಯ್ಕೆದಾರರಾಗಿ ಸೇವೆ ಸಲ್ಲಿಸಿದ್ದ ಶ್ರೀಕಾಂತ್, "ಕೊಹ್ಲಿಗೆ ಇನ್ನೂ ಕನಿಷ್ಠ ಎರಡು ವರ್ಷಗಳ ಟೆಸ್ಟ್ ಕ್ರಿಕೆಟ್ ಉಳಿದಿದೆ ಮತ್ತು ಅವರಿಗೆ ಸರಿಯಾದ ವಿದಾಯ ಹೇಳಲು ಅರ್ಹರು ಎಂದು ಒತ್ತಿ ಹೇಳಿದ್ದರು. ವಿರಾಟ್ ಕೊಹ್ಲಿ ನಿವೃತ್ತಿ ಹಾಗೆಯೇ ಆಯಿತು. ವಿರಾಟ್ ಕೊಹ್ಲಿ ಇದಕ್ಕಿಂತ ಉತ್ತಮವಾದ ಬೀಳ್ಕೊಡುಗೆಗೆ ಅರ್ಹರಾಗಿದ್ದರು. ಅವರಲ್ಲಿ ಇನ್ನೂ ಎರಡು ವರ್ಷಗಳ ಟೆಸ್ಟ್ ಕ್ರಿಕೆಟ್ ಬಾಕಿ ಇತ್ತು. ಆದರೆ ಇಂಗ್ಲೆಂಡ್‌ನಲ್ಲಿ ನಾವು ಆಡಿದ ಕಾರಣ, ಅವರ ಬಗ್ಗೆ ಅಂತಹ ಮಾತುಕತೆಗಳು ನಿಂತುಹೋದವು. ಆದಾಗ್ಯೂ, ವಿರಾಟ್ ಕೊಹ್ಲಿಯಂತಹ ಕ್ರಿಕೆಟಿಗನನ್ನು ಸ್ವಲ್ಪ ಸಮಯದವರೆಗೆ ಪಡೆಯುವುದು ಭಾರತಕ್ಕೆ ಕಷ್ಟಕರವಾಗಿರುತ್ತದೆ," ಎಂದು ಅವರು ಹೇಳಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ 2027ರ ವಿಶ್ವಕಪ್‌ನಲ್ಲಿ ಆಡುತ್ತಾರಾ? ರಾಸ್ ಟೇಲರ್ ಭವಿಷ್ಯ!
ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನ 14 ವರ್ಷಗಳು ಮತ್ತು 123 ಪಂದ್ಯಗಳನ್ನು ಒಳಗೊಂಡಿತ್ತು, ಈ ಅವಧಿಯಲ್ಲಿ ಅವರು 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು ಏಳು ದ್ವಿಶತಕಗಳು ಸೇರಿವೆ. ಅವರು 10,000 ರನ್‌ಗಳ ಗಡಿಗೆ ಕೇವಲ 770 ರನ್‌ಗಳ ಕಡಿಮೆ ಅಂತರದಲ್ಲಿ ನಿವೃತ್ತರಾದರು, ಭಾರತದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ತಮ್ಮ ಪರಂಪರೆಯನ್ನು ಗಟ್ಟಿಗೊಳಿಸಿದರು. ರೋಹಿತ್ ಶರ್ಮಾ 67 ಟೆಸ್ಟ್‌ಗಳಲ್ಲಿ 40.57ರ ಸರಾಸರಿಯಲ್ಲಿ 4,301 ರನ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು, ಇದರಲ್ಲಿ 12 ಶತಕಗಳು ಸೇರಿವೆ. ಅವರು 2022ರ ಮಾರ್ಚ್‌ನಲ್ಲಿ ನಾಯಕನಾಗಿ ಕೊಹ್ಲಿಯ ಸ್ಥಾನವನ್ನು ತುಂಬಿದ್ದರು. ಅವರ ಅವಧಿಯಲ್ಲಿ ಭಾರತ 12 ಗೆಲುವುಗಳು, ಒಂಬತ್ತು ಸೋಲುಗಳು ಮತ್ತು ಮೂರರಲ್ಲಿ ಡ್ರಾ ಆಗಿತ್ತು. ನಾಯಕನಾಗಿ ಅವರು 1,254 ರನ್‌ಗಳನ್ನು ಗಳಿಸಿದ್ದಾರೆ.
"ಚೇತೇಶ್ವರ್ ಪೂಜಾರ ಕೂಡ ಭಾರತ ತಂಡಕ್ಕೆ ಆಡಿದ್ದಾರೆ. ಹಾಗಾಗಿ ಅವರ ನಿವೃತ್ತಿ ಯೋಜನೆಗಳ ಬಗ್ಗೆಯೂ ಬಿಸಿಸಿಐ ಅವರೊಂದಿಗೆ ಮಾತನಾಡಬೇಕಿತ್ತು. ಸಹಜವಾಗಿ, ಆಟಗಾರನು ಸಹ ಈ ಬಗ್ಗೆ ಸಹಕರಿಸಬೇಕು ಮತ್ತು ಅವರ ಸಮಯ ಮುಗಿದಾಗ ಅರಿತುಕೊಳ್ಳಬೇಕು. ಅದು ಸಂಭವಿಸಿದ್ದರೆ, ಪೂಜಾರರಿಗೆ ಉತ್ತಮ ವಿದಾಯ ಸಿಗುತ್ತಿತ್ತು. ಆದರೆ ಇದು ಆಟಗಾರ, ಆಯ್ಕೆದಾರರು ಮತ್ತು ಬಿಸಿಸಿಐ ನಡುವಿನ ಸಹಕಾರದ ವಿಷಯವಾಗಿದೆ," ಎಂದು ಅವರು ತಿಳಿಸಿದ್ದಾರೆ.
Asia Cup 2025: ʻಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆʼ-ಹ್ಯಾರಿಸ್ ರೌಫ್ ಎಚ್ಚರಿಕೆ!
ಅಕ್ಟೋಬರ್ 19 ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಟ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ರೋಹಿತ್, ಕೊಹ್ಲಿ ವಿದಾಯದ ಬಳಿಕ ಶುಭಮನ್ ಗಿಲ್ ನೇತೃತ್ವದ ಭಾರತ ಟೆಸ್ಟ್ ತಂಡ, ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ತೋರಿ ಸರಣಿಯನ್ನು ಸಮಬಲಗೊಳಿಸಿಕೊಂಡಿತು.