ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's World Cup: ಗಾಯಾಳು ಪ್ರತೀಕಾ ರಾವಲ್‌ ಸ್ಥಾನಕ್ಕೆ ಭಾರತ ತಂಡ ಸೇರಿದ ಶಫಾಲಿ ವರ್ಮಾ!

ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಗಂಭೀರ ಗಾಯಕ್ಕೆ ತುತ್ತಾಗಿದ್ದ ಭಾರತೀಯ ಮಹಿಳಾ ತಂಡದ ಓಪನರ್ ಪ್ರತೀಕಾ ರಾವಲ್ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಆಸೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರ ಸ್ಥಾನವನ್ನು ಆರಂಭಿಕ ಆಟಗಾರ್ತಿಯಾಗಿ ಶಫಾಲಿ ವರ್ಮಾ ತುಂಬಲಿದ್ದಾರೆ.

World Cup: ಪ್ರತೀಕಾ ರಾವಲ್‌ಗೆ ಸ್ಥಾನಕ್ಕೆ ಶಫಾಲಿ ವರ್ಮಾ ಸೇರ್ಪಡೆ!

ಪ್ರತೀಕಾ ರಾವಲ್‌ ಸ್ಥಾನಕ್ಕೆ ಭಾರತ ತಂಡ ಸೇರಿದ ಶಫಲಿ ವರ್ಮಾ. -

Profile Ramesh Kote Oct 27, 2025 10:12 PM

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 30 ರಂದು ನಡೆಯುವ 2025ರ ಮಹಿಳಾ ಏಕದಿನ ವಿಶ್ವಕಪ್ (Women's World Cup 2025) ಸೆಮಿ ಫೈನಲ್ ಪಂದ್ಯವನ್ನು ಆಡಲು ಭಾರತ ಎದುರು ನೋಡುತ್ತಿದೆ. ಈ ಪಂದ್ಯಕ್ಕೆ ಸಜ್ಜಾಗುತ್ತಿರುವ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತಕ್ಕೆ ದೊಡ್ಡ ಆಘಾತ ಉಂಟಾಗಿದೆ. ಸ್ಟಾರ್ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ (Pratika Rawal) ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ (INDW vs BANW) ಫೀಲ್ಡಿಂಗ್ ವೇಳೆ ಗಾಯಕ್ಕೆ ತುತ್ತಾಗಿದ್ದರು ಹಾಗೂ ಮೈದಾನದಿಂದ ಹೊರಬಿದ್ದಿದ್ದರು. ಹಾಗಾಗಿ ಈ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಪರ ಅಮನ್‌ಜೋತ್‌ ಕೌರ್‌ ಇನಿಂಗ್ಸ್‌ ಆರಂಭಿಸಿದ್ದರು. ಇದೀಗ ಭರ್ಜರಿ ಫಾರ್ಮ್‌ನಲ್ಲಿರುವ ಪ್ರತೀಕಾ ರಾವಲ್‌ ವಿಶ್ವಕಪ್ ಸೆಮಿಫೈನಲ್‌ನಿಂದ ಹೊರ ನಡೆದಿದ್ದಾರೆ. ಇದರಿಂದ ಭಾರತ ಮಹಿಳಾ ತಂಡಕ್ಕೆ ಸೆಮಿಫೈನಲ್‌ಗೂ ಮುನ್ನ ಭಾರಿ ಹಿನ್ನಡೆಯಾಗಿದೆ.

ಗಂಭೀರ ಗಾಯಕ್ಕೆ ತುತ್ತಾಗಿರುವ ಪ್ರತೀಕಾ ರಾವಲ್ ಇಡೀ ಟೂರ್ನಿಯಿಂದಲೇ ಹೊರಬಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಯಾರಿಗೆ ಅವಕಾಶ ನೀಡಬೇಕೆಂಬ ಚರ್ಚೆಗಳು ನಡೆಯತ್ತಿವೆ. ಇದರ ನಡುವೆ ಅವರ ಬದಲು ಸ್ಪೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಐಸಿಸಿ ಮಹಿಳಾ ವಿಶ್ವಕಪ್ 2025ರ ಟೂರ್ನಿಯ ತಾಂತ್ರಿಕ ಸಮಿತಿಯು ಭಾರತ ತಂಡದಲ್ಲಿ ಪ್ರತಿಕಾ ರಾವಲ್ ಬದಲಿಗೆ ಶಫಾಲಿ ವರ್ಮಾ ಅವರನ್ನು ಆಯ್ಕೆ ಮಾಡಿದೆ. ಭಾನುವಾರ ಬಾಂಗ್ಲಾದೇಶ ವಿರುದ್ಧದ ಲೀಗ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ರಾವಲ್ ಅವರ ಬಲಗಾಲಿಗೆ ಗಾಯವಾಗಿತ್ತು. ಅವರು ಹೊರಗುಳಿದ ನಂತರ ಶಫಾಲಿ ವರ್ಮಾ ಅವರನ್ನು ಬದಲಿಯಾಗಿ ಹೆಸರಿಸಲಾಗಿದೆ. ಬದಲಿ ಆಟಗಾರ್ತಿಯನ್ನು ಅಧಿಕೃತವಾಗಿ ತಂಡಕ್ಕೆ ಸೇರಿಸುವುದಕ್ಕೂ ಮುನ್ನ ಟೂರ್ನಿಯ ತಾಂತ್ರಿಕ ಸಮಿತಿಯ ಅನುಮೋದನೆ ಅಗತ್ಯವಿದೆ.

Shreyas Iyer: ಶ್ರೇಯಸ್‌ ಅಯ್ಯರ್‌ ಆರೋಗ್ಯ ಗಭೀರ! ಐಸಿಯುಗೆ ದಾಖಲಾದ ಉಪ ನಾಯಕ!

2025 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಯ ತಾಂತ್ರಿಕ ಸಮಿತಿಯು ವಸಿಮ್ ಖಾನ್ (ಅಧ್ಯಕ್ಷರು, ಐಸಿಸಿ ಜನರಲ್ ಮ್ಯಾನೇಜರ್), ಗೌರವ್ ಸಕ್ಸೇನಾ (ಐಸಿಸಿ ಜನರಲ್ ಮ್ಯಾನೇಜರ್ - ಈವೆಂಟ್ಸ್ & ಕಾರ್ಪೊರೇಟ್ ಕಮ್ಯುನಿಕೇಷನ್ಸ್), ಅಬೆ ಕುರುವಿಲ್ಲಾ (ಬಿಸಿಸಿಐ ಟೂರ್ನಮೆಂಟ್ ಡೈರೆಕ್ಟರ್), ಮೆಲ್ ಜೋನ್ಸ್ (ನಾಮನಿರ್ದೇಶಿತ ಸದಸ್ಯರು) ಅವರನ್ನು ಒಳಗೊಂಡಿದೆ," ಎಂದು ಐಸಿಸಿ ಅಧಿಕೃತ ಹೇಳಿಕೆ ನೀಡಿದೆ.

ದೀರ್ಘಾವಧಿ ಬಳಿಕ ಭಾರತ ತಂಡಕ್ಕೆ ಮರಳಿದ ಶಫಾಲಿ ವರ್ಮಾ

ದೀರ್ಘಾವಧಿ ಬಳಿಕ ಸ್ಪೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಬಾರತ ತಂಡಕ್ಕೆ ಮರಳಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಶಫಾಲಿ, ವಿಶೇಷವಾಗಿ ಯಸ್ತಿಕಾ ಭಾಟಿಯಾ ಅವರನ್ನು ತಂಡದಿಂದ ಕೈ ಬಿಟ್ಟ ಹೊರತಾಗಿಯೂ, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದೆ ಇರುವುದು ಆಶ್ಚರ್ಯಕರವಾಗಿತ್ತು.

ಎಲ್ಲರೂ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಯ ಕಾಲು ಎಳೆಯುತ್ತಿದ್ದಾರೆ: ಎಬಿ ಡಿ ವಿಲಿಯರ್ಸ್‌!

ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡದ ಪರ ಶಫಾಲಿ 49 ಎಸೆತಗಳಲ್ಲಿ 70 ರನ್ ಗಳಿಸಿದರು ಮತ್ತು ಪ್ರಸ್ತುತ ನಡೆಯುತ್ತಿರುವ ಹಿರಿಯರ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರತೀಕಾ ರಾವಲ್‌ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಆರಂಭಿಕ ಆಟಗಾರ್ತಿ ಒಂಬತ್ತು ಪಂದ್ಯಗಳಲ್ಲಿ 56.83ರ ಸರಾಸರಿ ಮತ್ತು 182.ಸ್ಟ್ರೈಕ್ ರೇಟ್‌ನಲ್ಲಿ 341 ರನ್ ಕಲೆಹಾಕಿದ್ದಾರೆ. ಶಫಾಲಿ ಅವರು ಕೊನೆಯ ಬಾರಿ 2024ರ ಅಕ್ಟೋಬರ್‌ನಲ್ಲಿ ಭಾರತದ ಪರ ಏಕದಿನ ಪಂದ್ಯ ಆಡಿದ್ದರು.