ಅಫ್ಘಾನಿಸ್ತಾನ ಸರಣಿ, ಇಂಗ್ಲೆಂಡ್ ಪ್ರವಾಸದಿಂದ ಹರ್ಷಿತ್ ರಾಣಾ, ಆಕಾಶ್ ದೀಪ್ ಔಟ್?
ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಗಾಯಗೊಂಡಿದ್ದ ಹರ್ಷಿತ್ ರಾಣಾ ಮತ್ತು ಆಕಾಶ್ ದೀಪ್ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಫಿಟ್ನೆಸ್ ಮರಳಿ ಪಡೆಯಲು ಅವರಿಗೆ ಹೆಚ್ಚುವರಿ ಸಮಯದ ಅಗತ್ಯವಿದೆ. ಇದರ ಪರಿಣಾಮವಾಗಿ, ಅವರು ಅಫ್ಘಾನಿಸ್ತಾನ ಸರಣಿ ಮತ್ತು ಇಂಗ್ಲೆಂಡ್ ಪ್ರವಾಸ ಎರಡನ್ನೂ ಕಳೆದುಕೊಳ್ಳಬಹುದು.
ಇಂಗ್ಲೆಂಡ್ ಪ್ರವಾಸಕ್ಕೆ ಹರ್ಷಿತ್ ರಾಣಾ, ಆಕಾಶ್ ದೀಪ್ ಅನುಮಾನ. -
ನವದೆಹಲಿ: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ತವರು ಸರಣಿ ಮತ್ತು ಇಂಗ್ಲೆಂಡ್ ಪ್ರವಾಸದ ವೈಟ್-ಬಾಲ್ ಸರಣಿಗಳಿಗೆ ಭಾರತ ತಂಡದ ಯುವ ವೇಗಿಗಳಾದ ಆಕಾಶ್ ದೀಪ್ (Akash Deep) ಹಾಗೂ ಹರ್ಷಿತ್ ರಾಣಾ (Harshit Rana) ಅಲಭ್ಯರಾಗುವ ಸಾಧ್ಯತೆ ಇದೆ. ಅವರು ಸಂಪೂರ್ಣ ಪಂದ್ಯದ ಫಿಟ್ನೆಸ್‌ಗೆ ಮರಳಲು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಅವರು ಆಯ್ಕೆಗೆ ಅಲಭ್ಯರಾಗಿದ್ದಾರೆಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ. ಆಕಾಶ್ ದೀಪ್ ಪ್ರಸ್ತುತ ಬೆನ್ನಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ, ಆದರೆ ರಾಣಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಹರ್ಷಿತ್ ಗಾಯಕ್ಕೆ ತುತ್ತಾಗಿದ್ದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿರುವ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಬಿಸಿಸಿಐ ಮೂಲವೊಂದು ಬಿಸಿಸಿಐ ಜೊತೆ ಮಾತನಾಡುತ್ತಾ "ಆಕಾಶ್ ಮತ್ತು ಹರ್ಷಿತ್ ಅವರ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅವರು ಪಂದ್ಯಗಳನ್ನು ಆಡಲು ಅನುಮತಿ ಪಡೆಯಲು ಇನ್ನೂ ಸಾಕಷ್ಟು ಸಮಯದ ಅಗತ್ಯವಿದೆ. ಅಫ್ಘಾನಿಸ್ತಾನ ಸರಣಿ ಮತ್ತು ಇಂಗ್ಲೆಂಡ್ ಪ್ರವಾಸದ ಹೊತ್ತಿಗೆ ಅವರಿಬ್ಬರೂ ಫಿಟ್ ಆಗುವ ಸಾಧ್ಯತೆಯಿಲ್ಲ. ಅವರು ಇನ್ನೂ ಶಕ್ತಿ ವರ್ಧಕ ವ್ಯಾಯಾಮಗಳನ್ನು ಮುಂದುವರಿಸುತ್ತಿದ್ದಾರೆ. ಅದರ ನಂತರ ಜಾಗಿಂಗ್, ಸ್ಟ್ರೈಡ್ಸ್, ಸ್ಪ್ರಿಂಟ್ಸ್ ಹಾಗೂ ‘ರಿಟರ್ನ್ ಟು ಪ್ಲೇ’ (RTP) ಪ್ರೋಟೋಕಾಲ್‌ಗಳಿಗೆ ಸಂಬಂಧಿಸಿದ ಕೌಶಲ್ಯಾಭ್ಯಾಸಗಳನ್ನು ನಡೆಸುತ್ತಿದ್ದಾರೆ," ಎಂದು ತಿಳಿಸಿದೆ.
RCB vs GT: ರಜತ್ ಪಾಟಿದಾರ್‌ರ ವಿವಾದಾತ್ಮಕ ಕ್ಯಾಚ್ ಬಗ್ಗೆ ಪ್ರತಿಕ್ರಿಯಿಸಿದ ಜೇಸನ್ ಹೋಲ್ಡರ್!
ಆಕಾಶ್ ದೀಪ್ ಅವರನ್ನು ಹೆಚ್ಚಾಗಿ ರೆಡ್ ಬಾಲ್ ಕ್ರಿಕೆಟ್‌ಗೆ ನಿರೀಕ್ಷೆಯ ಆಟಗಾರ ಎಂದು ಪರಿಗಣಿಸಲಾಗಿದ್ದರೂ, ರಾಣಾ ಏಕದಿನ ಮತ್ತು ಟಿ20ಐ ಸ್ವರೂಪಗಳಲ್ಲಿ ತಂಡದ ಯೋಜನೆಗಳಲ್ಲಿ ಪ್ರಮುಖ ಅಂಶವಾಗಿ ಉಳಿದಿದ್ದಾರೆ. 2025ರಲ್ಲಿ ಹರ್ಷಿತ್ ಭಾರತದ ಅತ್ಯಂತ ಯಶಸ್ವಿ ಏಕದಿನ ಬೌಲರ್ ಆಗಿ ಹೊರಹೊಮ್ಮಿದರು. ಅವರು 14 ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದರು. ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡದ ಸದಸ್ಯರೂ ಆಗಿದ್ದರು.
ಇಂಗ್ಲೆಂಡ್‌ನಲ್ಲಿ ಆಕಾಶ್ ದೀಪ್ ಮಿಂಚು
ಆಕಾಶ್ ದೀಪ್ ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣವೆಂದರೆ ಕಳೆದ ವರ್ಷ ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆಂಡರ್ಸನ್-ತೆಂಡೂಲ್ಕರ್ ಟೆಸ್ಟ್ ಸರಣಿಯ ಸಮಯದಲ್ಲಿ ಅವರು ಒಂದೇ ಪಂದ್ಯದಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ಆಕಾಶ್ ದೀಪ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಹರ್ಷಿತ್‌ಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ನಂಬುತ್ತಾರೆ. ಆಗಸ್ಟ್‌ನಲ್ಲಿ ಹಿರಿಯ ಪುರುಷರ ದೇಶಿ ಋತುವಿನ ಆರಂಭವಾಗಲಿದೆ. ದುಲೀಪ್ ಟ್ರೋಫಿಯಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಬಹುದೆಂದು ನಿರೀಕ್ಷೆ ಮಾಡಲಾಗಿದೆ.
RCB vs GT: ರಜತ್ ಪಾಟಿದಾರ್‌ರ ವಿವಾದಾತ್ಮಕ ಕ್ಯಾಚ್ ಬಗ್ಗೆ ಪ್ರತಿಕ್ರಿಯಿಸಿದ ಜೇಸನ್ ಹೋಲ್ಡರ್!
ಅಫ್ಘಾನಿಸ್ತಾ ತಂಡದ ಭಾರತ ಪ್ರವಾಸ 2026
ಏಕೈಕ ಟೆಸ್ಟ್ ಪಂದ್ಯ: ಜೂನ್ 6 ರಿಂದ 10, 2026- ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣ, ನ್ಯೂ ಚಂಡೀಗಢ, ಬೆಳಿಗ್ಗೆ 9:30
ಮೊದಲನೇ ಏಕದಿನ ಪಂದ್ಯ: ಭಾನುವಾರ, ಜೂನ್ 14, 2026, ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ, ಧರ್ಮಶಾಲಾ- ಮಧ್ಯಾಹ್ನ 1:30ಕ್ಕೆ
ಎರಡನೇ ಏಕದಿನ ಪಂದ್ಯ: ಬುಧವಾರ, ಜೂನ್ 17, 2026, ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಲಖನೌ- 1:30 PM
ಮೂರನೇ ಏಕದಿನ ಪಂದ್ಯ: ಶನಿವಾರ, ಜೂನ್ 20, 2026, ಎಂ. ಎ. ಚಿದಂಬರಂ ಕ್ರೀಡಾಂಗಣ, ಚೆನ್ನೈ-ಮಧ್ಯಾಹ್ನ 1:30
ಭಾರತದ ಇಂಗ್ಲೆಂಡ್ ಪ್ರವಾಸ 2026
ಟಿ20ಐ ಸರಣಿ
ಮೊದಲನೇ T20I ಪಂದ್ಯ: ಬುಧವಾರ, ಜುಲೈ 1, 2026 , ರಿವರ್‌ಸೈಡ್ ಮೈದಾನ, ಚೆಸ್ಟರ್-ಲೆ-ಸ್ಟ್ರೀಟ್- ಮಧ್ಯರಾತ್ರಿ 11:00
ಎರಡನೇ T20I ಪಂದ್ಯ: ಶನಿವಾರ, ಜುಲೈ 4, 2026, ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್-ಸಂಜೆ 7:00 PM
ಮೂರನೇ T20I ಪಂದ್ಯ: ಮಂಗಳವಾರ, ಜುಲೈ 7, 2026, ಟ್ರೆಂಟ್ ಬ್ರಿಡ್ಜ್, ನಾಟಿಂಗ್ಹ್ಯಾಮ್- ರಾತ್ರಿ 11:00
ನಾಲ್ಕನೇ T20I ಪಂದ್ಯ: ಗುರುವಾರ, ಜುಲೈ 9, 2026 , ಕೌಂಟಿ ಮೈದಾನ, ಬ್ರಿಸ್ಟಲ್-ರಾತ್ರಿ 11:00
ಐದನೇ T20I ಪಂದ್ಯ: ಶನಿವಾರ, ಜುಲೈ 11, 2026 , ದಿ ರೋಸ್ ಬೌಲ್ (ಯುಟಿಲಿಟಾ ಬೌಲ್), ಸೌತಾಂಪ್ಟನ್- ರಾತ್ರಿ 11:00
IPL 2026: 200 ಸಿಕ್ಸರ್‌ಗಳ ಮೂಲಕ ದೊಡ್ಡ ದಾಖಲೆಯನ್ನು ಬರೆದ ಕೆಎಲ್ ರಾಹುಲ್!
ಒಡಿಐ ಸರಣಿ
ಮೊದಲನೇ ಒಡಿಐ ಪಂದ್ಯ: ಮಂಗಳವಾರ, ಜುಲೈ 14, 2026, ಎಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್-ಸಂಜೆ 5:30
ಎರಡನೇ ಒಡಿಐ ಪಂದ್ಯ: ಗುರುವಾರ, ಜುಲೈ 16, 2026 , ಸೋಫಿಯಾ ಗಾರ್ಡನ್ಸ್, ಕಾರ್ಡಿಫ್-ಸಂಜೆ 5:30,
ಮೂರನೇ ಒಡಿಐ ಪಂದ್ಯ: ಭಾನುವಾರ, ಜುಲೈ 19, 2026, ಲಾರ್ಡ್ಸ್, ಲಂಡನ್- ಮಧ್ಯಾಹ್ನ 3:30