ZIM vs NZ: ಜಿಂಬಾಬ್ವೆಯನ್ನು ಮಣಿಸಿ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದ ನ್ಯೂಜಿಲೆಂಡ್!
ಮಾರಕ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲೆಂಡ್ ತಂಡ, ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ ಜಿಂಬಾಬ್ವೆಯನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಸತತ ಎರಡನೇ ಗೆಲುವಿನೊಂದಿಗೆ, ನ್ಯೂಜಿಲೆಂಡ್ ಪಾಯಿಂಟ್ಸ್ ಟೇಬಲ್‌ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.

ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್ ತಂಡಕ್ಕೆ ಎಂಟು ವಿಕೆಟ್ ಜಯ.

ನವದೆಹಲಿ: ಮಾರಕ ಬೌಲಿಂಗ್ ನಂತರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನ್ಯೂಜಿಲೆಂಡ್ ತಂಡ ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ (NZ vs ZIM) ಜಿಂಬಾಬ್ವೆಯನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಸರಣಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ನ್ಯೂಜಿಲೆಂಡ್ ತಂಡ (New Zealand) ಪಾಯಿಂಟ್ಸ್ ಟೇಬಲ್‌ನಲ್ಲಿ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ. ಟಾಸ್ ಗೆದ್ದ ನಂತರ ಮೊದಲು ಬೌಲ್ ಮಾಡುವ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನಿರ್ಧಾರ ಸರಿಯಾಯಿತು. ಜಿಂಬಾಬ್ವೆಯ (Zimbabwe) ಬ್ಯಾಟಿಂಗ್ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಕೇವಲ 120 ರನ್‌ಗಳನ್ನು ಗಳಿಗೆ ಶಕ್ತವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಕಿವೀಸ್ 13.5 ಓವರ್‌ಗಳಲ್ಲಿ ಗುರಿಯನ್ನು ತಲುಪಿತು.
ವೆಸ್ಲಿ ಮಾಧೇವೆರೆ ಜಿಂಬಾಬ್ವೆ ಪರ 36 ರನ್‌ಗಳ ಹೋರಾಟದ ಇನಿಂಗ್ಸ್ ಆಡಿದರೆ, ಬ್ರಿಯಾನ್ ಬೆನೆಟ್ 21 ರನ್‌ಗಳ ಕೊಡುಗೆ ನೀಡಿದರು. ನ್ಯೂಜಿಲೆಂಡ್ ಬೌಲರ್‌ಗಳು ಬಿಗಿಯಾದ ಬೌಲಿಂಗ್ ಪ್ರದರ್ಶಿಸಿದರು, ಇದರಲ್ಲಿ ಮ್ಯಾಟ್ ಹೆನ್ರಿ ಅದ್ಭುತ ಬೌಲಿಂಗ್ ತೋರಿದರು ಮತ್ತು 3 ವಿಕೆಟ್‌ಗಳನ್ನು ಪಡೆದರು. ಇದರ ಹೊರತಾಗಿ, ರಚಿನ್ ರವೀಂದ್ರ ಮತ್ತು ಆಡಮ್ ಮಿಲ್ನೆ ಕೂಡ ಅತ್ಯುತ್ತಮ ಎಕಾನಮಿಯಲ್ಲಿ ಬೌಲ್ ಮಾಡಿ ತಲಾ ಒಂದು ವಿಕೆಟ್ ಪಡೆದರು.
ENG vs IND: ಟೆಸ್ಟ್ ಕ್ರಿಕೆಟ್‌ನ ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿ ರವೀಂದ್ರ ಜಡೇಜಾ!
ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಂದ ಅದ್ಭುತ ಆಟ
121 ರನ್‌ಗಳ ಸಾಧಾರಣ ಗುರಿಯನ್ನು ಹಿಂಬಾಲಿಸುವಲ್ಲಿ ನ್ಯೂಜಿಲೆಂಡ್ ತಂಡ ಯಶಸ್ವಿಯಾಯಿತು. ಆರಂಭಿಕ ಟಿಮ್ ಸೀಫರ್ಟ್ ಬೇಗ ಔಟಾದರೂ, ಡೆವೋನ್ ಕಾನ್ವೇ ಮತ್ತು ರಚಿನ್ ರವೀಂದ್ರ ಎರಡನೇ ವಿಕೆಟ್‌ಗೆ 59 ರನ್‌ಗಳ ಪ್ರಮುಖ ಪಾಲುದಾರಿಕೆಯನ್ನು ನೀಡಿದರು. ರಚಿನ್ ರವೀಂದ್ರ 19 ಎಸೆತಗಳಲ್ಲಿ 30 ರನ್‌ಗಳ ತ್ವರಿತ ಇನಿಂಗ್ಸ್ ಆಡಿದರು. ಇದರ ನಂತರ, ಡೆವೋನ್ ಕಾನ್ವೇ ಮತ್ತು ಡ್ಯಾರಿಲ್ ಮಿಚೆಲ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕಾನ್ವೇ 40 ಎಸೆತಗಳನ್ನು ಎದುರಿಸಿ ಔಟಾಗದೆ 59 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು.
Zimbabwe fall to eight-wicket defeat at the hands of New Zealand in the third match of the T20I Tri-Series at Harare Sports Club.
— Zimbabwe Cricket (@ZimCricketv) July 18, 2025
Match Details 👉 https://t.co/QScdXLJvHI#ExperienceZimbabwe #T20ITriSeries #ZIMvNZ pic.twitter.com/DNVs9uHaw1
ಡ್ಯಾರಿಲ್ ಮಿಚೆಲ್ ಕೂಡ ಅಜೇಯ 26 ರನ್ ಗಳಿಸಿದರು. ನ್ಯೂಜಿಲೆಂಡ್ 13.5 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ತಲುಪಿತು. ಈ ಸೋಲಿನೊಂದಿಗೆ, ಜಿಂಬಾಬ್ವೆಯ ಒತ್ತಡ ಅಧಿಕವಾಗಿದೆ. ಜಿಂಬಾಬ್ವೆ ಈ ಸರಣಿಯಲ್ಲಿ ತನ್ನ ಮೊದಲ ಗೆಲುವಿಗಾಗಿ ಇನ್ನಷ್ಟು ದಿನಗಳ ಕಾಯಬೇಕಾಗುತ್ತದೆ.
IND vs ENG: ಮ್ಯಾಂಚೆಸ್ಟರ್‌ನಲ್ಲಿ ಭಾರತದ ಟೆಸ್ಟ್ ಸಾಧನೆ ಹೇಗಿದೆ?
ಜಿಂಬಾಬ್ವೆ: 20 ಓವರ್‌ಗಳಿಗೆ 120-7 (ವೆಸ್ಲಿ ಮಾಧೇವೆರೆ 36, ಬ್ರಿಯಾನ್ ಬೆನೆಟ್ 21 ರನ್; ಮ್ಯಾಟ್ ಹೆನ್ರಿ 26ಕ್ಕೆ 3)
ನ್ಯೂಜಿಲೆಂಡ್: 13.5 ಓವರ್‌ಗಳಿಗೆ 122-2 (ಡೆವೋನ್ ಕಾನ್ವೆ 59*, ರಚಿನ್ ರವೀಂದ್ರ 30; ಬ್ಲೆಸಿಂಗ್ ಮುಜರಬಾನಿ 27ಕ್ಕೆ 1, ಮಪೋಸ 17ಕ್ಕೆ 1)
ಪಂದ್ಯ ಶ್ರೇಷ್ಢ ಪ್ರಶಸ್ತಿ: ಡೆವೋನ್ ಕಾನ್ವೆ