ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಬಲವಾದ ಕಾರಣವನ್ನು ತಿಳಿಸಿದ ರೋಹಿತ್‌ ಶರ್ಮಾ!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ಭಾರತ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದೀಗ ಅವರು ತಾವು ಟೆಸ್ಟ್‌ ಕಿಕೆಟ್‌ಗೆ ವಿದಾಯ ಹೇಳಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಟೆಸ್ಟ್‌ಗೆ ವಿದಾಯ ಹೇಳಲು ಕಾರಣ ತಿಳಿಸಿದ ರೋಹಿತ್‌ ಶರ್ಮಾ!

ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಗ್ಗೆ ಸ್ಪಷ್ಟನೆ ನೀಡಿದ ರೋಹಿತ್‌ ಶರ್ಮಾ.

Profile Ramesh Kote Aug 26, 2025 6:03 PM

ನವದೆಹಲಿ: ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಗೂ ಮುನ್ನ ಹಾಗೂ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಸಂದರ್ಭದಲ್ಲಿ ಭಾರತ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ (ODI World Cup 2027) ಟೂರ್ನಿಯವರೆಗೂ ಮುಂದುವರಿಯಲು ಬಯಸಿದ್ದಾರೆ. ಇದೀಗ ಅವರು ತಾವು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಬಲವಾದ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಸಿಯೆಟ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಐದು ದಿನಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುವುದು ಮಾನಸಿಕವಾಗಿ ಸವಾಲಿನ ಮತ್ತು ಬಳಲಿಕೆಯ ಸಂಗತಿ ಎಂದು ಬಹಿರಂಗಪಡಿಸಿದ್ದಾರೆ. ಈ ಕಾರಣದಿಂದಲೇ ಅವರು ದೀರ್ಘಾವಧಿ ಸ್ವರೂಪದಿಂದ ನಿವೃತ್ತರಾಗಿದ್ದಾರೆ ಎಂದು ಹೇಳಬಹುದು. ಮುಂಬೈನಲ್ಲಿ ತಮ್ಮ ಆರಂಭಿಕ ವರ್ಷಗಳಲ್ಲಿ ಮೂರು ದಿನಗಳ ಕಾಲ ಕ್ಲಬ್ ಕ್ರಿಕೆಟ್ ಆಡುವುದು ಹಾಗೂ ಕಠಿಣ ಸಂದರ್ಭಗಳನ್ನು ನಿರ್ವಹಿಸಲು ಹೇಗೆ ಸಹಾಯ ಮಾಡಿತು ಎಂಬುದನ್ನು ರೋಹಿತ್ ಶರ್ಮಾ ಸ್ಮರಿಸಿಕೊಂಡಿದ್ದಾರೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ 2027ರ ವಿಶ್ವಕಪ್‌ನಲ್ಲಿ ಆಡುತ್ತಾರಾ? ರಾಸ್‌ ಟೇಲರ್‌ ಭವಿಷ್ಯ!

"ಟೆಸ್ಟ್ ಕ್ರಿಕೆಟ್ ದೀರ್ಘಾಯುಷ್ಯವನ್ನು ಬಯಸುತ್ತದೆ. ನೀವು ಐದು ದಿನಗಳ ಕಾಲ ಆಡಬೇಕು. ಮಾನಸಿಕವಾಗಿ, ಇದು ತುಂಬಾ ಸವಾಲಿನ ಮತ್ತು ಬಳಲಿಕೆಯಿಂದ ಕೂಡಿರುತ್ತದೆ," ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

"ಮುಂಬೈನಲ್ಲಿ ಕ್ಲಬ್ ಪಂದ್ಯಗಳು ಸಹ ಎರಡು ಅಥವಾ ಮೂರು ದಿನಗಳವರೆಗೆ ನಡೆಯುತ್ತವೆ. ನಾವು ಆ ರೀತಿಯಲ್ಲಿ ಬೆಳೆದಿದ್ದೇವೆ. ಇದು ದೀರ್ಘ-ರೂಪದ ಕ್ರಿಕೆಟ್ ಅನ್ನು ಎದುರಿಸಲು ಮತ್ತು ಕಠಿಣ ಸಂದರ್ಭಗಳಿಗೆ ಪ್ರತಿಕ್ರಿಯಿಸಲು ಚಿಕ್ಕ ವಯಸ್ಸಿನಿಂದಲೇ ನಿಮಗೆ ತರಬೇತಿ ನೀಡುತ್ತದೆ," ಎಂದು ಅವರು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಕಾರಣ ತಿಳಿಸಿದ ಮನೋಜ್‌ ತಿವಾರಿ!

ಒಡಿಐ ಕ್ರಿಕೆಟ್‌ಗೆ ರೋಹಿತ್‌ ಶರ್ಮಾ ವಿದಾಯ ಹೇಳುತ್ತಾರಾ?

ಅಕ್ಟೋಬರ್‌ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡಲು ಎದುರು ನೋಡುತ್ತಿದ್ದಾರೆ. ಈ ಸರಣಿಯಲ್ಲಿ ಹಿಟ್‌ಮ್ಯಾನ್‌ 50 ಓವರ್‌ಗಳ ಸ್ವರೂಪಕ್ಕೆ ವಿದಾಯ ಹೇಳಬಹುದೆಂದು ಹೇಳಲಾಗುತ್ತಿದೆ. ಆದರೆ, ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಈ ಊಹಾಪೋಹಗಳನ್ನು ನಿರಾಕರಿಸಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರು ತಮಗೆ ಆಡಬೇಕೆನಿಸುವವರೆಗೂ ಆಡಲಿ ಎಂದು ಅವರು ತಿಳಿಸಿದ್ದಾರೆ.

"ಅವರು ಏಕೆ ನಿವೃತ್ತಿ ಪಡೆಯಬೇಕು? ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಇಬ್ಬರು ತಮಗೆ ಆಡಬೇನಿಸುವವರೆಗೂ ಏಕದಿನ ಕ್ರಿಕೆಟ್‌ ಆಡಲಿ. ಅವರಿನ್ನೂ ಆಡುತ್ತಿದ್ದಾರೆ, ಹಾಗಾಗಿ ಈಗಲೇ ನಿವೃತ್ತಿ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ? ಜನರು ಏಕೆ ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ನಮ್ಮ ನಿಯಮ ಸ್ಪಷ್ಟವಾಗಿದೆ. ನಿವೃತ್ತಿ ಪಡೆಯುವಂತೆ ಬಿಸಿಸಿಐ ಎಂದಿಗೂ ಸೂಚನೆ ನೀಡುವುದಿಲ್ಲ. ಅವರೇ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ. ರೋಹಿತ್‌ ಶರ್ಮಾ ಅವರೇ ಈ ಕರೆಯನ್ನು ತೆಗೆದುಕೊಳ್ಳಬೇಕು," ಎಂದು ರಾಜೀವ್‌ ಶುಕ್ಲಾ ಹೇಳಿದ್ದಾರೆ.