ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cristiano Ronaldo: ಕೊನೆ ಕ್ಷಣದಲ್ಲಿ ಭಾರತ ಪ್ರವಾಸದಿಂದ ಹಿಂದೆ ಸರಿದ ಕ್ರಿಸ್ಟಿಯಾನೊ ರೊನಾಲ್ಡೊ

ಅಲ್-ನಾಸರ್ ತಂಡವು ಸೋಮವಾರ ತಡರಾತ್ರಿ ಗೋವಾಕ್ಕೆ ಆಗಮಿಸಲಿದ್ದು, ಟೂರ್ನಿಯ ಮೂರನೇ ಗುಂಪು ಹಂತದ ಪಂದ್ಯವನ್ನು ಆಡಲಿದೆ. ಸೌದಿ ಕ್ಲಬ್ ಈಗಾಗಲೇ ರೊನಾಲ್ಡೊ ಇಲ್ಲದೆಯೇ AFC ಚಾಂಪಿಯನ್ಸ್ ಲೀಗ್ 2 ಪಂದ್ಯಗಳಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದೆ ಮತ್ತು ನಾಕೌಟ್ ಸುತ್ತಿಗೆ ಮುನ್ನಡೆಯಲು ಉತ್ತಮ ಸ್ಥಾನದಲ್ಲಿದೆ.

ಎಫ್‌ಸಿ ಗೋವಾ ಪಂದ್ಯ ತಿರಸ್ಕರಿಸಿದ ರೊನಾಲ್ಡೊ

-

Abhilash BC Abhilash BC Oct 20, 2025 6:29 PM

ಪಣಜಿ: ಪೋರ್ಚುಗಲ್‌ನ ಫುಟ್ಬಾಲ್‌ ದಂತಕಥೆಯಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರ ಆಟ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ತೀವ್ರ ನಿರಾಶೆಯ ಸುದ್ದಿಯೊಂದು ಹೊರಬಿದ್ದಿದೆ. ಭಾರತೀಯ ಕ್ಲಬ್‌ನ ಹಲವಾರು ವಿನಂತಿಗಳ ಹೊರತಾಗಿಯೂ, ಕ್ರಿಸ್ಟಿಯಾನೊ ರೊನಾಲ್ಡೊ ಎಫ್‌ಸಿ ಗೋವಾ ವಿರುದ್ಧದ ಅಲ್-ನಾಸರ್‌ನ ಎಎಫ್‌ಸಿ ಚಾಂಪಿಯನ್ಸ್ ಲೀಗ್ 2 ಪಂದ್ಯಕ್ಕಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.

ಲಿಯೋನೆಲ್ ಮೆಸ್ಸಿ ಮತ್ತು ಅವರ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವು ಆಸ್ಟ್ರೇಲಿಯಾ ವಿರುದ್ಧದ ಅಂತರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡಲು ಸಜ್ಜಾಗಿರುವಾಗಲೇ ಈ ನಿರ್ಧಾರ ಬಂದಿದೆ.

ಈ ಹಿಂದೆ ವರದಿಯಾದ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ರೊನಾಲ್ಡೊ ಭಾರತಕ್ಕೆ ಭೇಟಿ ನೀಡಲಿದ್ದು, ಎಫ್‌ಸಿ ಗೋವಾ(FC Goa) ವಿರುದ್ಧದ ಎಎಫ್‌ಸಿ ಚಾಂಪಿಯನ್ಸ್ ಲೀಗ್ 2 ಪಂದ್ಯವನ್ನು ಆಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದೀಗ ರೊನಾಲ್ಡೊ, ಎಫ್‌ಸಿ ಗೋವಾ ಪಂದ್ಯಕ್ಕಾಗಿ ಭಾರತ ಪ್ರವಾಸವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಸೌದಿ ಮಾಧ್ಯಮ ಅಲ್ ರಿಯಾಧಿಯಾ ಪ್ರಕಾರ, ರೊನಾಲ್ಡೊ ಅಕ್ಟೋಬರ್ 22 ರಂದು ಫಟೋರ್ಡಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ರೂಪ್ ಡಿ ಪಂದ್ಯಕ್ಕಾಗಿ ಅಲ್-ನಾಸರ್‌ ಪ್ರಯಾಣ ತಂಡದಿಂದ ಹೊರಗುಳಿದಿದ್ದಾರೆ. ಎಫ್‌ಸಿ ಗೋವಾದ ಆಡಳಿತ ಮಂಡಳಿಯು ರೊನಾಲ್ಡೊ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಅಲ್-ನಾಸರ್‌ ಕ್ಲಬ್‌ಗೆ ಅವರನ್ನು ಒತ್ತಾಯಿಸಿತ್ತು, ಅವರ ಉಪಸ್ಥಿತಿಯು ಪಂದ್ಯದ ಬೇಡಿಕೆ ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಗಮನವನ್ನು ಸೆಳೆಯುತ್ತದೆ ಎಂದು ಆಶಿಸಿತ್ತು.

ಇದನ್ನೂ ಓದಿ Cristiano Ronaldo: ಫುಟ್ಬಾಲ್‌ನ ಮೊದಲ ಬಿಲಿಯನೇರ್ ಆಗಿ ಹೊರ ಹೊಮ್ಮಿದ ರೊನಾಲ್ಡೊ

ಅಲ್-ನಾಸರ್ ತಂಡವು ಸೋಮವಾರ ತಡರಾತ್ರಿ ಗೋವಾಕ್ಕೆ ಆಗಮಿಸಲಿದ್ದು, ಟೂರ್ನಿಯ ಮೂರನೇ ಗುಂಪು ಹಂತದ ಪಂದ್ಯವನ್ನು ಆಡಲಿದೆ. ಸೌದಿ ಕ್ಲಬ್ ಈಗಾಗಲೇ ರೊನಾಲ್ಡೊ ಇಲ್ಲದೆಯೇ AFC ಚಾಂಪಿಯನ್ಸ್ ಲೀಗ್ 2 ಪಂದ್ಯಗಳಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದೆ ಮತ್ತು ನಾಕೌಟ್ ಸುತ್ತಿಗೆ ಮುನ್ನಡೆಯಲು ಉತ್ತಮ ಸ್ಥಾನದಲ್ಲಿದೆ. ಲೀಗ್‌ನಲ್ಲಿ ಪ್ರತಿ ತಂಡ ತನ್ನ ತವರಿನಲ್ಲಿ ಒಂದು ಪಂದ್ಯ, ಎದುರಾಳಿ ಕ್ಲಬ್‌ನ ತವರಿನಲ್ಲಿ ಒಂದ್ಯ ಪಂದ್ಯವನ್ನಾಡಲಿವೆ. ಹೀಗಾಗಿ ಅಲ್‌ ನಸ್ರ್‌ ಭಾರತಕ್ಕೆ ಆಗಮಿಸಿ ಗೋವಾ ವಿರುದ್ಧ ಆಡಬೇಕಿದೆ.