ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್ 2026ರ ಹರಾಜಿಗೂ ಮುನ್ನ ಟ್ರಯಲ್ಸ್ ನಡೆಸಿದ ಸಿಎಸ್‌ಕೆ

ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರು ಮುಂದಿನ ಆವೃತ್ತಿ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಕಳೆದ ಆವೃತ್ತಿ ಬಳಿಕ ಧೋನಿ ನಿವೃತ್ತಿ ನಿರ್ಧರಿಸಲು ಇನ್ನೂ ಸಮಯವಿದೆ ಎಂದು ಮಾತ್ರ ಹೇಳಿದ್ದರು. ಅಶ್ವಿನ್‌ ಅವರು ನಿವೃತ್ತಿ ಘೋಷಿಸಿರುವ ಕಾರಣ ಒಂದು ಸ್ಥಾನ ಖಾಲಿಯಾಗಿದೆ.

2026ರ ಐಪಿಎಲ್ ಹರಾಜಿಗೂ ಮುನ್ನ ಟ್ರಯಲ್ಸ್ ನಡೆಸಿದ ಸಿಎಸ್‌ಕೆ

-

Abhilash BC Abhilash BC Sep 20, 2025 12:22 PM

ಚೆನ್ನೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಈ ವರ್ಷದ ಕೊನೆಯಲ್ಲಿ ಆಟಗಾರರ ಹರಾಜಿಗೆ(IPL 2026 auction) ಮುಂಚಿತವಾಗಿ ಟ್ರಯಲ್ಸ್ ನಡೆಸುವ ಮೂಲಕ 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಋತುವಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಸಿಎಸ್‌ಕೆ-ಹೈ ಪರ್ಫಾರ್ಮೆನ್ಸ್ ಸೆಂಟರ್ ಮೈದಾನದಲ್ಲಿ ಟ್ರಯಲ್ಸ್ ನಡೆಯುತ್ತಿದ್ದು, ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. 2023 ರಲ್ಲಿ ಐದನೇ ಪ್ರಶಸ್ತಿಯನ್ನು ಗೆದ್ದ ನಂತರ, ತಂಡ ಕಳೆದ ಎರಡು ಆವೃತ್ತಿಗಳಲ್ಲಿ ಕನಿಷ್ಠ ಪ್ಲೇಆಫ್‌ಗೂ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಮುಂದಿನ ಆವೃತ್ತಿಯಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳುವ ಗುರಿಯನ್ನು ಹೊಂದಿರುವುದರಿಂದ ತನ್ನ ತಂಡದಲ್ಲಿ ಗಮನಾರ್ಹ ಬದಲಾವಣೆ ನೋಡಬಹುದು.

ಕಳೆದ ಋತುವಿನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ, ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಹೀಗಾಗಿ ಹರಾಜಿಗೂ ಮುನ್ನ ತಂಡದಲ್ಲಿನ ಹಲವು ಆಟಗಾರರನ್ನು ಕೈಬಿಡಲು ಫ್ರಾಂಚೈಸಿ ನಿರ್ಧರಿಸಿದೆ ಎನ್ನಲಾಗಿದೆ. ರಾಜಸ್ಥಾನ್‌ ರಾಯಲ್ಸ್‌ ನಾಯಕನಾಗಿರುವ ಸಂಜು ಸ್ಯಾಮ್ಸನ್‌ ಚೆನ್ನೈ ಸೇರಲಿದ್ದಾರೆ ಎನ್ನುವ ಮಾತುಗಳು ಈಗಾಗಲೇ ಕೇಳಿಬರುತ್ತಿದೆ.

ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರು ಮುಂದಿನ ಆವೃತ್ತಿ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಕಳೆದ ಆವೃತ್ತಿ ಬಳಿಕ ಧೋನಿ ನಿವೃತ್ತಿ ನಿರ್ಧರಿಸಲು ಇನ್ನೂ ಸಮಯವಿದೆ ಎಂದು ಮಾತ್ರ ಹೇಳಿದ್ದರು. ಅಶ್ವಿನ್‌ ಅವರು ನಿವೃತ್ತಿ ಘೋಷಿಸಿರುವ ಕಾರಣ ಒಂದು ಸ್ಥಾನ ಖಾಲಿಯಾಗಿದೆ.

ಇದನ್ನೂ ಓದಿ IPL 2026: ಕೋಲ್ಕತಾ ನೈಟ್‌ ರೈಡರ್ಸ್‌ಗೆ ರಾಹುಲ್‌ ದ್ರಾವಿಡ್‌ ಕೋಚ್‌ ಆಗುವ ಸಾಧ್ಯತೆ!