ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಯಶಸ್ವಿ ಜೈಸ್ವಾಲ್‌ ಮಾಡುತ್ತಿರುವ ತಾಂತ್ರಿಕ ತಪ್ಪನ್ನು ತಿಳಿಸಿದ ಸುನೀಲ್‌ ಗವಾಸ್ಕರ್‌!

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರು ಐದನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಅವರು 9 ಎಸೆತಗಳಲ್ಲಿ ಕೇವಲ ಎರಡು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ಬಗ್ಗೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಯಶಸ್ವಿ ಜೈಸ್ವಾಲ್‌ ಮಾಡುತ್ತಿರುವ ತಪ್ಪನ್ನು ತಿಳಿಸಿದ ಸುನೀಲ್‌ ಗವಾಸ್ಕರ್‌!

‌ಯಶಸ್ವಿ ಜೈಸ್ವಾಲ್‌ಗೆ ಮಹತ್ವದ ಸಲಹೆ ನೀಡಿದ ಸುನೀಲ್ ಗವಾಸ್ಕರ್‌.

Profile Ramesh Kote Jul 31, 2025 10:30 PM

ಲಂಡನ್‌: ಇಲ್ಲಿನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಐದನೇ ಹಾಗೂ ಟೆಸ್ಟ್‌ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ ಭಾರತ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುತ್ತಿದೆ. ಭಾರತ ತಂಡ 100 ರನ್‌ಗಳ ಒಳಗಾಗಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅಂದ ಹಾಗೆ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ (Yashasvi Jaiswal) ಅವರು ಐದನೇ ಟೆಸ್ಟ್‌ ಪ್ರಥಮ ಇನಿಂಗ್ಸ್‌ನಲ್ಲಿಯೂ ವಿಫಲರಾದರು. 9 ಎಸೆತಗಳನ್ನು ಆಡಿದ ಅವರು ಕೇವಲ ಎರಡು ರನ್‌ ಗಳಿಸಿ ಗಸ್‌ ಅಟ್ಕಿನ್ಸನ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕಳೆದ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿಯೂ ಜೈಸ್ವಾಲ್‌ ವಿಫಲರಾಗಿದ್ದರು. ಅಂದ ಹಾಗೆ ಯಶಸ್ವಿ ಜೈಸ್ವಾಲ್‌ ತಮ್ಮ ಬ್ಯಾಟಿಂಗ್‌ನಲ್ಲಿ ಏನು ಮಾಡುತ್ತಿದ್ದಾರೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಬಹಿರಂಗಪಡಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌ ಎಜ್‌ಬಾಸ್ಟನ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದ್ದರು. ಇದಾದ ಬಳಿಕ ಅವರಿಂದ ಯಾವುದೇ ದೊಡ್ಡ ಇನಿಂಗ್ಸ್‌ ಮೂಡಿಬರಲಿಲ್ಲ. ಈ ಬಗ್ಗೆ ಸೋನಿ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಸುನೀಲ್‌ ಗವಾಸ್ಕರ್‌, "ಜೈಸ್ವಾಲ್ ಅವರ ಆಟದಲ್ಲಿ ಸ್ವಲ್ಪ ಅನಿಶ್ಚಿತತೆ ಮತ್ತು ಆತ್ಮವಿಶ್ವಾಸದ ಕೊರತೆಯೂ ಇದೆ. ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ನಂತರ, ಅವರು ಹೆಚ್ಚು ನಿರರ್ಗಳವಾಗಿ ಕಾಣುತ್ತಿಲ್ಲ. ಅದಕ್ಕಾಗಿಯೇ ಅವರ ಫ್ರಂಟ್‌ ಫುಟ್‌ ಜಾಸ್ತಿ ಮುಂದಕ್ಕೆ ಹೋಗುತ್ತಿಲ್ಲ. ಆದರೆ ಅವರು ಉತ್ತಮ ಆಟಗಾರ," ಎಂದು ಹೇಳಿದರು.

IND vs ENG: ಓವಲ್‌ ಟೆಸ್ಟ್‌ನಲ್ಲಿ ಅರ್ಷದೀಪ್‌, ಕುಲ್ದೀಪ್‌ಗೆ ಸ್ಥಾನ ನೀಡದ ಗಂಭೀರ್‌ ವಿರುದ್ಧ ಫ್ಯಾನ್ಸ್‌ ಆಕ್ರೋಶ!

"ಯಾರಾದರೂ ಅವರೊಂದಿಗೆ ಕುಳಿತು ಕೆಲವು ತಾಂತ್ರಿಕ ಅಂಶಗಳಲ್ಲಿ ಕೆಲಸ ಮಾಡಿದರೆ; ಅವರ ಮುಂಭಾಗದ ಪಾದವನ್ನು ಮುಂದಕ್ಕೆ ಹಾಕುವುದು ಮತ್ತು ಅವರ ಭುಜವನ್ನು ಹೆಚ್ಚು ತೆರೆಯಬಹುದು. ಇದು ಅವರ ಬ್ಯಾಟಿಂಗ್‌ಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದೀಗ, ಅವರ ಹಿಂಭಾಗದ ಭುಜವು ಮೊದಲ ಅಥವಾ ಎರಡನೇ ಸ್ಲಿಪ್ ಕಡೆಗೆ ಹೋಗುತ್ತಿದೆ, ಇದು ಬ್ಯಾಟ್ ನೇರವಾಗಿ ಕೆಳಕ್ಕೆ ಬರಲು ಕಷ್ಟವಾಗುತ್ತದೆ. ಅವರ ಭುಜವು ವಿಕೆಟ್ ಕೀಪರ್ ಕಡೆಗೆ ಹೆಚ್ಚು ಇದ್ದು ಮೊದಲ ಸ್ಲಿಪ್ ಕಡೆಗೆ ಇದ್ದರೆ, ಬ್ಯಾಟ್ ನೇರವಾಗಿ ಕೆಳಗೆ ಬರುತ್ತದೆ, " ಎಂದು ಗವಾಸ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸರಣಿಗೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಅರೌಂಡ್‌ ದಿ ವಿಕೆಟ್‌ ಸೀಮಿರ್‌ಗಳ ಎದುರು 116ರ ಸರಾಸರಿಯನ್ನು ಹೊಂದಿದ್ದರು. ಇದರಲ್ಲಿ ಅವರು ಒಂದು ಬಾರಿ ವಿಕೆಟ್‌ ಒಪ್ಪಿಸಿದ್ದರು. ಪ್ರಸ್ತುತ ಸರಣಿಯಲ್ಲಿ ಏಳು ಔಟ್‌ಗಳೊಂದಿಗೆ ಅವರ ಸರಾಸರಿ ಈಗ 24.7 ಕ್ಕೆ ಇಳಿದಿದೆ. ಜೈಸ್ವಾಲ್ ಸರಣಿಯನ್ನು ಉತ್ತಮವಾಗಿ ಪ್ರಾರಂಭಿಸಿದ್ದರೂ ಮೊದಲ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಕ್ರಮವಾಗಿ 101 ಮತ್ತು 87 ರನ್ ಗಳಿಸಿದ್ದರು.

IND vs ENG: ಟಾಸ್‌ ವೇಳೆ‌ ರವಿ ಶಾಸ್ತ್ರಿ ಪ್ರಶ್ನೆಗೆ ಗೊಂದಲದ ಉತ್ತರವನ್ನು ಕೊಟ್ಟ ಶುಭಮನ್‌ ಗಿಲ್!

ಆದಾಗ್ಯೂ, ಅಂದಿನಿಂದ ಅವರು ಕಳೆದ ಐದು ಇನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ. ಈ ಸರಣಿಯಲ್ಲಿ ಇಲ್ಲಿಯವರೆಗೆ, ಇವರು ಒಂಬತ್ತು ಇನಿಂಗ್ಸ್‌ಗಳಿಂದ 32.55ರ ಸರಾಸರಿಯಲ್ಲಿ 293 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ.

ಇದರ ನಡುವೆ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದ ಬಳಿಕ, ಕೆಎಲ್ ರಾಹುಲ್ ಕೂಡ ಸರಣಿಯಲ್ಲಿ ಅಪರೂಪದ ವೈಫಲ್ಯ ಕಂಡರು, ಅವರು 14 ರನ್‌ಗಳಿಗೆ ಔಟಾದರು. ಆರಂಭಿಕ ಹೊಡೆತಗಳ ನಂತರ, ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್‌ ಭಾರತ ತಂಡವನ್ನು ಎರಡು ವಿಕೆಟ್‌ ನಷ್ಟಕ್ಕೆ 72 ರನ್‌ಗಳಿಗೆ ಭೋಜನ ವಿರಾಮಕ್ಕೆ ಕರೆದೊಯ್ದರು.