ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾಮನ್‌ವೆಲ್ತ್‌; 0.04 ಸೆಕೆಂಡ್‌ ಅಂತರದಲ್ಲಿ ಕಂಚು ಗೆದ್ದ ಗುಲ್ವೀರ್ ಸಿಂಗ್

Gulveer Singh: 5000 ಮೀ ಮತ್ತು 10,000 ಮೀ ಎರಡರಲ್ಲೂ ರಾಷ್ಟ್ರೀಯ ದಾಖಲೆಗಳನ್ನು ಹೊಂದಿರುವ 28 ವರ್ಷದ ಗುಲ್ವೀರ್ ಸಿಂಗ್, ತಮ್ಮ ಋತುವಿನ ಅತ್ಯುತ್ತಮ ಸಮಯವಾದ 13:03.93 ಗಿಂತ ಕಡಿಮೆ ಓಡಿದರು. ಅವರ 12:59.77 ರ ರಾಷ್ಟ್ರೀಯ ದಾಖಲೆಯ ಪ್ರಯತ್ನಕ್ಕಿಂತ ಬಹಳ ಹಿಂದಿತ್ತು.

0.04 ಸೆಕೆಂಡ್‌ ಅಂತರದಲ್ಲಿ ಕಂಚು ಗೆದ್ದ ಗುಲ್ವೀರ್ ಸಿಂಗ್

Gulveer Singh -

Abhilash BC
Abhilash BC Aug 2, 2026 5:46 PM

ಗ್ಲಾಸ್ಗೋ, ಆ.2: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 5000 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಹಾಗೂ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ದೇಶದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆ ಗುಲ್ವೀರ್ ಸಿಂಗ್ ಪಾತ್ರರಾಗಿದ್ದಾರೆ.

ಜುಲೈ 28 ರಂದು 10,000 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದಿದ್ದ ಹಾಲಿ ಏಷ್ಯನ್ ಚಾಂಪಿಯನ್ ಗುಲ್ವೀರ್, ಅಥ್ಲೆಟಿಕ್ಸ್ ಸ್ಪರ್ಧೆಯ ಕೊನೆಯ ದಿನದಂದು 5000 ಮೀಟರ್ ಓಟದಲ್ಲಿ 13 ನಿಮಿಷ 24.95 ಸೆಕೆಂಡುಗಳಲ್ಲಿ ಮೂರನೇ ಸ್ಥಾನ(ಕಂಚಿನ ಪದಕ) ಪಡೆದು ಐತಿಹಾಸಿಕ ಅವಳಿ ಪದಕ ಗೆದ್ದ ಸಾಧನೆ ಮಾಡಿದರು. ಕೀನ್ಯಾದ ಕಾರ್ನೆಲಿಯಸ್ ಕೆಂಬೊಯ್‌ಗಿಂತ ಕೇವಲ 0.04 ಅಂತರದಲ್ಲಿ ಕಂಚು ಗೆದ್ದರು.

ಕೀನ್ಯಾದ ಮ್ಯಾಥ್ಯೂ ಕಿಪ್ಚುಂಬಾ ಕಿಪ್ಸಾಂಗ್ 13:23.61 ಸಮಯದೊಂದಿಗೆ ಚಿನ್ನ ಗೆದ್ದರು, ಆದರೆ ಈ ಹಿಂದೆ 10,000 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದ ಆಸ್ಟ್ರೇಲಿಯಾದ ಕೈ ರಾಬಿನ್ಸನ್ 13:24.70 ಸಮಯದೊಂದಿಗೆ ಬೆಳ್ಳಿ ಗೆದ್ದರು.



ಆದಾಗ್ಯೂ, 5000 ಮೀ ಮತ್ತು 10,000 ಮೀ ಎರಡರಲ್ಲೂ ರಾಷ್ಟ್ರೀಯ ದಾಖಲೆಗಳನ್ನು ಹೊಂದಿರುವ 28 ವರ್ಷದ ಭಾರತೀಯ ಆಟಗಾರ, ತಮ್ಮ ಋತುವಿನ ಅತ್ಯುತ್ತಮ ಸಮಯವಾದ 13:03.93 ಗಿಂತ ಕಡಿಮೆ ಓಡಿದರು. ಅವರ 12:59.77 ರ ರಾಷ್ಟ್ರೀಯ ದಾಖಲೆಯ ಪ್ರಯತ್ನಕ್ಕಿಂತ ಬಹಳ ಹಿಂದಿತ್ತು.

ಲವ್ಲಿನಾಗೆ ಕ್ಷಮೆಯಾಚಿಸಿದ ಗ್ಲಾಸ್ಗೋ ರೆಸ್ಟೋರೆಂಟ್

ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್, ಬಾಕ್ಸಿಂಗ್ ತಂಡಕ್ಕೆ ಆಯೋಜಿಸಲಾಗಿದ್ದ ಸಂಭ್ರಮಾಚರಣೆಯ ಭೋಜನಕೂಟದಲ್ಲಿ ಜನಪ್ರಿಯ ಭಾರತೀಯ ರೆಸ್ಟೋರೆಂಟ್ ಭಾರತದ ತಪ್ಪಾದ ನಕ್ಷೆಯನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ರೆಸ್ಟೋರೆಂಟ್ ಮಾಲೀಕರು ಲವ್ಲಿನಾಗೆ ಕ್ಷಮೆಯಾಚಿಸಿದೆ. ಹೀಗಾಗಿ ಈ ವಿವಾದ ಸುಖಾಂತ್ಯ ಕಂಡಿದೆ.

18 ವರ್ಷಗಳ ನಂತರ ಭಾರತಕ್ಕೆ ತೈಪೆ ಓಪನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ 17 ವರ್ಷದ ತನ್ವಿ ಶರ್ಮಾ

ರೆಸ್ಟೋರೆಂಟ್‌ನ ಕರವಸ್ತ್ರದ (ಹ್ಯಾಂಡ್​ ಕರ್ಚೀಫ್​) ಮೇಲೆ ಮುದ್ರಿಸಲಾಗಿದ್ದ ಭಾರತದ ನಕ್ಷೆಯಲ್ಲಿ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳ ಭೂಪಟ ಇರುವುದು ಬೊರ್ಗೊಹೈನ್​ ಅವರ ಗಮನಕ್ಕೆ ಬಂದಿತ್ತು. ಈ ವಿಷಯಕ್ಕೆ ಅವರು ಮಾಲೀಕರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.