ಶತಕ ಸಿಡಿಸಿ ರೋಹಿತ್, ಕೊಹ್ಲಿ ಜತೆ ಎಲೈಟ್ ಪಟ್ಟಿ ಸೇರಿದ ಶುಭಮನ್ ಗಿಲ್
Shubman Gill: ಇದು ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನಿಂಗ್ಸ್‌ನಿಂದ ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಹೆಸರಿನಲ್ಲಿತ್ತು. ಉಭಯ ಆಟಗಾರರು 24 ಇನಿಂಗ್ಸ್‌ನಿಂದ ಈ ಮೈಲುಗಲ್ಲು ತಲುಪಿದ್ದರು.
Shubman Gill -
ಲಖನೌ, ಜೂ.17: ಅಫ್ಘಾನಿಸ್ತಾನ(India vs Afghanistan) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್(Shubman Gill) ಶತಕ ಬಾರಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಕಡಿಮೆ ಎಸೆತಗಳಿಂದ ಶತಕ ಬಾರಿಸಿದ 4ನೇ ಭಾರತೀಯ ನಾಯಕ ಎನಿಸಿಕೊಂಡರು.
ಈ ಪಂದ್ಯದಲ್ಲಿ ಆರಂಭಿಕ ಕ್ರಮಾಂಕದ ಬದಲು ವನ್‌ಡನ್ ಆಗಿ ಕಣಕ್ಕಿಳಿದ ಶುಭಮನ್ ಗಿಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸುವ ಮೂಲಕ ಸೊಗಸಾದ ಶತಕ ಬಾರಿಸಿ ಮಿಂಚಿದರು. 77 ಎಸೆತಗಳಿಂದ ಶತಕ ಪೂರ್ತಿಗೊಳಿಸಿದರು. ಅತಿ ವೇಗವಾಗಿ ಶತಕ ಬಾರಿಸಿದ ಭಾರತೀಯ ನಾಯಕ ಎಂಬ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿದೆ. ಅವರು 63 ಎಸೆತಗಳಿಂದ ಶತಕ ಬಾರಿಸಿದ್ದರು. ವೀರೇಂದ್ರ ಸೆಹವಾಗ್(69 ಎಸೆತ) ದ್ವಿತೀಯ ಸ್ಥಾನದಲ್ಲಿದ್ದಾರೆ.
ಭಾರತೀಯ ನಾಯಕರ ವೇಗದ ODI ಶತಕಗಳು
ರೋಹಿತ್ ಶರ್ಮಾ- 63 ಎಸೆತ, ದಕ್ಷಿಣ ಆಫ್ರಿಕಾ ವಿರುದ್ಧ
ವೀರೇಂದ್ರ ಸೆಹ್ವಾಗ್-69 ಎಸೆತ, ವೆಸ್ಟ್ ಇಂಡೀಸ್ ವಿರುದ್ಧ
ವಿರಾಟ್ ಕೊಹ್ಲಿ- 76 ಎಸೆತ, ಶ್ರೀಲಂಕಾ ವಿರುದ್ಧ
ಶುಭಮನ್ ಗಿಲ್- 77 ಎಸೆತ, ದಕ್ಷಿಣ ಆಫ್ರಿಕಾ ವಿರುದ್ಧ
Shubman Gill in his element ✨
— BCCI (@BCCI) June 17, 2026
Well played Captain 👏
Updates ▶️ https://t.co/JYJ5l44iJ6#TeamIndia | #INDvAFG | @IDFCFIRSTBank | @ShubmanGill pic.twitter.com/pIQdF3MDWn
ಇದು ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನಿಂಗ್ಸ್‌ನಿಂದ ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಹೆಸರಿನಲ್ಲಿತ್ತು. ಉಭಯ ಆಟಗಾರರು 24 ಇನಿಂಗ್ಸ್‌ನಿಂದ ಈ ಮೈಲುಗಲ್ಲು ತಲುಪಿದ್ದರು. ಇದೀಗ ಗಿಲ್ ಕೇವಲ 19 ಇನಿಂಗ್ಸ್‌ನಲ್ಲಿ ಈ ಗುರಿ ತಲುಪಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು.
ಕಡಿಮೆ ಇನ್ನಿಂಗ್ಸ್‌ನಲ್ಲಿ 1000 ODI ರನ್ (ಭಾರತ)
ಶುಭಮನ್ ಗಿಲ್-19 ಇನಿಂಗ್ಸ್
ವಿರಾಟ್ ಕೊಹ್ಲಿ/ಶಿಖರ್ ಧವನ್- 24 ಇನಿಂಗ್ಸ್
ನವಜೋತ್ ಸಿಧು/ಶ್ರೇಯಸ್ ಅಯ್ಯರ್- 25 ಇನಿಂಗ್ಸ್
ಇಶಾನ್ ಕಿಶನ್- 26 ಇನಿಂಗ್ಸ್
ಇಶಾನ್ ಕಿಶನ್ ದಾಖಲೆ
ಟಿ20 ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ 71 ಎಸೆತಗಳಿಂದ ಶತಕ ಬಾರಿಸಿ ಅಫ್ಘಾನಿಸ್ತಾನ ವಿರುದ್ಧ ಅತಿ ವೇಗವಾಗಿ ಶತಕ ಬಾರಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿದರು. ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್(57 ಎಸೆತ) ಹೆಸರಿನಲ್ಲಿದೆ. ಈ ಯಾದಿಯಲ್ಲಿ ರೋಹಿತ್ ಶರ್ಮ(63 ಎಸೆತ) ದ್ವಿತೀಯ ಸ್ಥಾನದಲ್ಲಿದ್ದಾರೆ.
IND vs AFG: 1000 ಒಡಿಐ ರನ್‌ಗಳನ್ನು ಪೂರ್ಣಗೊಳಿಸಿದ ಇಶಾನ್ ಕಿಶನ್!
ಅಫ್ಘಾನಿಸ್ತಾನ ವಿರುದ್ಧ ವೇಗದ ODI ಶತಕಗಳು (ಚೆಂಡುಗಳಿಂದ)
ಇಯಾನ್ ಮಾರ್ಗನ್- 57 ಎಸೆತ
ರೋಹಿತ್ ಶರ್ಮಾ- 63 ಎಸೆತ
ಇಶಾನ್ ಕಿಶನ್-71 ಎಸೆತ
ಗ್ಲೆನ್ ಮ್ಯಾಕ್ಸ್‌ವೆಲ್-76 ಎಸೆತ
ಶುಭಮನ್ ಗಿಲ್- 77 ಎಸೆತ