ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC 2025-27 points table: ವಿಂಡೀಸ್‌ ವಿರುದ್ಧ ಸರಣಿ ಗೆದ್ದು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಭಾರತ

ಮಂಗಳವಾರ ಅಂತಿಮ ದಿನದಾಟದಲ್ಲಿ ಭಾರತ ಗೆಲುವಿಗೆ 58 ರನ್‌ಗಳನ್ನು ಗಳಿಸುವ ಅಗತ್ಯವಿತ್ತು. ಭಾರತ ಗೆಲುವಿನತ್ತ ಸಾಗುತ್ತಿದ್ದಂತೆ ಸಾಯಿ ಸುದರ್ಶನ್(39) ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಗಿಲ್‌(13) ಬೇಗನೆ ವಿಕೆಟ್ ಕಳೆದುಕೊಂಡರು. ವೇಳೆ ಕೆಎಲ್ ರಾಹುಲ್ ಅವರು ಧ್ರುವ್ ಜುರೆಲ್ (6) ಜತೆಗೆ ಅಜೇಯ 58 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕ ಪಟ್ಟಿ: ಪ್ರಗತಿ ಸಾಧಿಸಿದ ಭಾರತ

-

Abhilash BC Abhilash BC Oct 14, 2025 11:52 AM

ನವದೆಹಲಿ: ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ(Arun jaitley stadium) ಮುಕ್ತಾಯ ಕಂಡ ಎರಡನೇ ಟೆಸ್ಟ್(IND vs WI 2nd Test) ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಈ ಸರಣಿ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(WTC 2025-27 points table) ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಈ ವರೆಗೆ ಭಾರತವು ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳು, ಎರಡು ಸೋಲುಗಳು ಮತ್ತು ಒಂದು ಡ್ರಾದೊಂದಿಗೆ ಗೆಲುವಿನ ಶೇಕಡಾವಾರು ಪ್ರಮಾಣವು 61.90 ಕ್ಕೆ ತಲುಪಿದೆ. ಆಸ್ಟ್ರೇಲಿಯಾ (100.0) ಮತ್ತು ಶ್ರೀಲಂಕಾ (66.67) ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದೆ. ಆಡಿದ ಎಲ್ಲ 5 ಪಂದ್ಯಗಳನ್ನು ಸೋಲಿರುವ ವೆಸ್ಟ್‌ ಇಂಡೀಸ್‌ ತಂಡ 6ನೇ ಸ್ಥಾನದಲ್ಲಿದೆ.

ಮಂಗಳವಾರ ಅಂತಿಮ ದಿನದಾಟದಲ್ಲಿ ಭಾರತ ಗೆಲುವಿಗೆ 58 ರನ್‌ಗಳನ್ನು ಗಳಿಸುವ ಅಗತ್ಯವಿತ್ತು. ಭಾರತ ಗೆಲುವಿನತ್ತ ಸಾಗುತ್ತಿದ್ದಂತೆ ಸಾಯಿ ಸುದರ್ಶನ್(39) ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಗಿಲ್‌(13) ಬೇಗನೆ ವಿಕೆಟ್ ಕಳೆದುಕೊಂಡರು. ವೇಳೆ ಕೆಎಲ್ ರಾಹುಲ್ ಅವರು ಧ್ರುವ್ ಜುರೆಲ್ (6) ಜತೆಗೆ ಅಜೇಯ 58 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಆಘಾತಕಾರಿ ಸರಣಿ ಸೋಲಿನ ನಂತರ, ಭಾರತವು ತವರಿನಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಬದಲಾವಣೆ ತಂದಿದೆ. ಶುಭಮನ್ ಗಿಲ್ ನೇತೃತ್ವದ ತಂಡವು ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಅನ್ನು ಇನ್ನಿಂಗ್ಸ್ ಮತ್ತು 140 ರನ್‌ಗಳಿಂದ ಗೆದ್ದಿತ್ತು.

ಇದನ್ನೂ ಓದಿ IND vs WI 2nd Test: ವಿಂಡೀಸ್‌ ಟೆಸ್ಟ್: ಭಾರತದ ಕ್ಲೀನ್ ಸ್ವೀಪ್ ಪರಾಕ್ರಮ

ವಿಶ್ವ ಟೆಸ್ಟ್‌ ಅಂಕಪಟ್ಟಿ

ಆಸ್ಟ್ರೇಲಿಯಾ-100 ಅಂಕ

ಶ್ರೀಲಂಕಾ-66.67 ಅಂಕ

ಭಾರತ-61.90 ಅಂಕ

ಇಂಗ್ಲೆಂಡ್‌-43.33 ಅಂಕ

ಬಾಂಗ್ಲಾದೇಶ-16.67 ಅಂಕ