ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಆರ್‌ಸಿಬಿ ಕಾಲ್ತುಳಿತ ದುರಂತದ ಬಳಿಕ ಭಾರತಕ್ಕೆ ಕೊಹ್ಲಿ ಮೊದಲ ಭೇಟಿ

ಕೊಹ್ಲಿ ಸರಣಿಗೂ ಮುನ್ನ ಲಂಡನ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ಆರು ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ತಯಾರಿಯಲ್ಲಿ ತಮ್ಮ ಕೌಶಲ್ಯ ಮತ್ತು ಫಿಟ್‌ನೆಸ್‌ನಲ್ಲಿ ತೀವ್ರವಾಗಿ ಕೆಲಸ ಮಾಡಿದ್ದಾರೆ. ಜೂನ್ 3 ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಅವರು ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು.

4 ತಿಂಗಳ ಬಳಿಕ ಭಾರತಕ್ಕೆ ಬಂದ ಕೊಹ್ಲಿ; ನಾಳೆ ಆಸೀಸ್‌ ಪ್ರವಾಸ

-

Abhilash BC Abhilash BC Oct 14, 2025 2:49 PM

ನವದೆಹಲಿ: ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ತಂಡದ ಸದಸ್ಯರೊಂದಿಗೆ ಆಸ್ಟ್ರೇಲಿಯಾಕ್ಕೆ(Australia tour) ತೆರಳುವ ಒಂದು ದಿನ ಮೊದಲು, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಮಂಗಳವಾರ ಬೆಳಿಗ್ಗೆ ನವದೆಹಲಿಗೆ ಬಂದರು. ಕೊಹ್ಲಿ ವಿಮಾನ ನಿಲ್ದಾಣದಿಂದ ಹೊರಟು ಬರುತ್ತಿರುವ ಫೋಟೊಗಳು ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿದು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ನಿವೃತ್ತಿ ಬಳಿಕ ಕೊಹ್ಲಿ ಭಾರತ ಪರ ಆಡುತ್ತಿರುವ ಮೊದಲ ಸರಣಿ(IND vs AUS ODI series) ಇದಾಗಿದೆ.

ಮೂಲಗಳು ತಿಳಿಸಿರುವಂತೆ, ಅವರು ಬುಧವಾರ ಬೆಳಿಗ್ಗೆ ರೋಹಿತ್ ಶರ್ಮಾ ಅವರೊಂದಿಗೆ ಭಾರತೀಯ ಕ್ರಿಕೆಟಿಗರ ಮೊದಲ ಬ್ಯಾಚ್‌ನೊಂದಿಗೆ ಆಸೀಸ್‌ಗೆ ಹೊರಡುವ ನಿರೀಕ್ಷೆಯಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಶುಭ್‌ಮನ್ ಗಿಲ್ ಬುಧವಾರ ಸಂಜೆ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.

ಕೊಹ್ಲಿ ಆಗಮನದ ವಿಡಿಯೊ



ಕೊಹ್ಲಿ ಸರಣಿಗೂ ಮುನ್ನ ಲಂಡನ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ಆರು ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ತಯಾರಿಯಲ್ಲಿ ತಮ್ಮ ಕೌಶಲ್ಯ ಮತ್ತು ಫಿಟ್‌ನೆಸ್‌ನಲ್ಲಿ ತೀವ್ರವಾಗಿ ಕೆಲಸ ಮಾಡಿದ್ದಾರೆ. ಜೂನ್ 3 ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಅವರು ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು. ಬೆಂಗಳೂರಿನಲ್ಲಿ ವಿಜಯೋತ್ಸವದ ಆಚರಣೆಯ ಒಂದು ದಿನದ ನಂತರ ಕೊಹ್ಲಿ ಲಂಡನ್‌ಗೆ ತೆರಳಿದ್ದರು.

ಇದನ್ನೂ ಓದಿ ಕೊಹ್ಲಿ-ರೋಹಿತ್‌ ಅವರೇ..... ಇನ್ನೂ ಸ್ವಲ್ಪ ದಿನ ಆಡಬಹುದಿತ್ತಲ್ವಾ? ಯಾಕಿಷ್ಟು ಆತುರ!

ನ್ಯೂಜಿಲೆಂಡ್ ಏಕದಿನ ಸರಣಿಗೆ ಮೊದಲು ಕನಿಷ್ಠ ಮೂರು ಅಥವಾ ನಾಲ್ಕು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಕೊಹ್ಲಿ ಆಡುವ ನಿರೀಕ್ಷೆಯಿದೆ. ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 24 ರಿಂದ ಆರಂಭವಾಗಲಿದ್ದು, ಜನವರಿ 11 ರಿಂದ 18 ರವರೆಗೆ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.