ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India vs Pakistan: ನವೆಂಬರ್​ 16ಕ್ಕೆ ಮತ್ತೆ ಭಾರತ-ಪಾಕಿಸ್ತಾನ ಕ್ರಿಕೆಟ್​ ಮುಖಾಮುಖಿ

ಇತ್ತೀಚೆಗೆ ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್‌ ಆಟಗಾರರ ಕೈಕುಲುಕದೆ, ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದ್ದರು. ಇದು ಮಹಿಳಾ ವಿಶ್ವಕಪ್‌ನಲ್ಲೂ ಮುಂದುವರಿದಿತ್ತು. ಇದೀಗ ರೈಸಿಂಗ್​ ಸ್ಟಾರ್ಸ್​ ಟೂರ್ನಿಯಲ್ಲೂ ನೋ ಶೇಕ್‌ಹ್ಯಾಂಡ್‌ ವಾರ್‌ ಮುಂದುವರಿಯುವ ಸಾಧ್ಯತೆ ಇದೆ.

Asia Cup Rising Stars: ಮತ್ತೆ ಭಾರತ-ಪಾಕಿಸ್ತಾನ ಕ್ರಿಕೆಟ್​ ಕದನ

-

Abhilash BC Abhilash BC Nov 2, 2025 9:38 AM

ದುಬೈ: ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ಥಾನ(India vs Pakistan) ತಂಡಗಳ ನಡುವೆ ಮತ್ತೊಂದು ಕ್ರಿಕೆಟ್‌ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಇದೇ ನವೆಂಬರ್​ 14ರಿಂದ ಕತಾರ್​ನಲ್ಲಿ ನಡೆಯುವ ಏಷ್ಯಾಕಪ್​ ರೈಸಿಂಗ್​ ಸ್ಟಾರ್ಸ್(Asia Cup Rising Stars)​ ಟಿ20 ಟೂರ್ನಿ ಭಾರತ-ಪಾಕಿಸ್ತಾನ ಎ ತಂಡಗಳು ಕಣಕ್ಕಿಳಿಯಲಿವೆ. ಏಷ್ಯಾಕಪ್‌ ಫೈನಲ್‌ ಬಳಿಕ ಮತ್ತೊಂದು ಹೈವೋಲ್ಟೇಜ್‌ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರಗೊಂಡಿದ್ದಾರೆ.

ಏಷ್ಯಾಕಪ್​ ಎಮರ್ಜಿಂಗ್​ ಎಂಬ ಹೆಸರು ಹೊಂದಿದ್ದ ಈ ಟೂರ್ನಿ ಇದೀಗ ರೈಸಿಂಗ್​ ಸ್ಟಾರ್ಸ್​ ಟೂರ್ನಿಯಾಗಿ ಬದಲಾಗಿದೆ. 8 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಎ ತಂಡಗಳ ಜತೆಗೆ ಯುಎಇ, ಓಮನ್​ ತಂಡಗಳಿದ್ದರೆ, ಎ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಎ ತಂಡಗಳ ಜತೆಗೆ ಹಾಂಕಾಂಗ್​ ತಂಡ ಸ್ಥಾನ ಪಡೆದಿದೆ.

ಭಾರತ ಎ ತನ್ನ ಮೊದಲ ಪಂದ್ಯವನ್ನು ನ.14ಕ್ಕೆ ಯುಎಇ ವಿರುದ್ಧ ಆಡಲಿದೆ. ನ.18ರ ಕೊನೇ ಲೀಗ್​ ಪಂದ್ಯದಲ್ಲಿ ಓಮನ್​ ವಿರುದ್ಧ ಆಡಲಿದೆ. ಗುಂಪಿನ ಅಗ್ರ 2 ತಂಡಗಳು ನ.21ರಂದು ನಡೆಯಲಿರುವ ಸೆಮಿಫೈನಲ್​ ಪ್ರವೇಶಿಸಲಿವೆ. ನ.23ರಂದು ಫೈನಲ್​ ನಡೆಯಲಿದೆ.

ನೋ ಶೇಕ್‌ಹ್ಯಾಂಡ್‌?

ಇತ್ತೀಚೆಗೆ ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್‌ ಆಟಗಾರರ ಕೈಕುಲುಕದೆ, ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದ್ದರು. ಇದು ಮಹಿಳಾ ವಿಶ್ವಕಪ್‌ನಲ್ಲೂ ಮುಂದುವರಿದಿತ್ತು. ಇದೀಗ ರೈಸಿಂಗ್​ ಸ್ಟಾರ್ಸ್​ ಟೂರ್ನಿಯಲ್ಲೂ ನೋ ಶೇಕ್‌ಹ್ಯಾಂಡ್‌ ವಾರ್‌ ಮುಂದುವರಿಯುವ ಸಾಧ್ಯತೆ ಇದೆ.

ಇನ್ನೂ ಸಿಗದ ಏಷ್ಯಾಕಪ್‌ ಟ್ರೋಫಿ

ದುಬೈನಲ್ಲಿ ನಡೆದಿದ್ದ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿತ್ತು. ಆದರೆ ಇದುವರೆಗೂ ಭಾರತಕ್ಕೆ ಟ್ರೋಫಿ ಸಿಕ್ಕಿಲ್ಲ. ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಅಧ್ಯಕ್ಷ ಮೊಹ್ಸಿನ್‌ ನಖ್ವಿ ಟ್ರೋಫಿಯನ್ನು ಅಬುಧಾಬಿಯ ಗುಪ್ತ ಸ್ಥಳವೊಂದರಲ್ಲಿ ಅಡಗಿಸಿಟ್ಟಿದಾರೆ.

ಇದನ್ನೂ ಓದಿ Mohsin Naqvi: ಗುಪ್ತ ಸ್ಥಳವೊಂದರಲ್ಲಿ ಏಷ್ಯಾಕಪ್‌ ಟ್ರೋಫಿ ಅಡಗಿಸಿಟ್ಟ ಮೊಹ್ಸಿನ್ ನಖ್ವಿ

ಫೈನಲ್‌ ಗೆದ್ದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್‌ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು. ನಂತರ ಅದನ್ನು ಎಸಿಸಿ ಕಚೇರಿಯಲ್ಲಿ ಲಾಕ್‌ ಮಾಡಿಟ್ಟಿದ್ದರು. ಮತ್ತು ತನ್ನ ಅನುಮತಿ ಇಲ್ಲದೆ ಯಾರಿಗೂ ಅದನ್ನು ಹಸ್ತಾಂತರಿಸದಂತೆ ಸಿಬ್ಬಂದಿಗೆ ಸೂಚಿಸಿದ್ದರು. ಇದೀಗ ಅವರು ಕಚೇರಿಯಿಂದಲೂ ಟ್ರೋಫಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ.