ವಿಂಡೀಸ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ; ನಮನ್ ಧೀರ್ ಪದಾರ್ಪಣೆ
India vs West Indies Live Score: ಏಷ್ಯಾಡ್ ತಂಡದಲ್ಲಿರುವ ಶ್ರೇಯಸ್ ಅಯ್ಯರ್, ಜಸ್‌ಪ್ರೀತ್ ಬುಮ್ರಾ ಗೈರಿನಲ್ಲಿ ಆಡುತ್ತಿದೆ. ಕನ್ನಡಿಗ ಪ್ರಸಿದ್ಧ ಕೃಷ್ಣ, ಮೊಹಮದ್ ಸಿರಾಜ್ ಸಂಪೂರ್ಣ ಬೌಲಿಂಗ್ ಹೊಣೆ ಹೊತ್ತಿದ್ದಾರೆ. ಹಾರ್ದಿಕ್, ಅಕ್ಷರ್ ಗೈರಿನಲ್ಲಿ ನಿತೀಶ್ ಕುಮಾರ್ ರೆಡ್ಡಿ ವೇಗದ ಬೌಲಿಂಗ್ ಆಲ್ರೌಂಡರ್ ಸ್ಥಾನ ತುಂಬಲಿದ್ದಾರೆ.
Shubman Gill -
ತಿರುವನಂತಪುರಂ, ಸೆ.27: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡಿದೆ.
ನಮನ್ ಧೀರ್ ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ನಾಯಕ ಗಿಲ್ ಅವರಿಂದ ತಮ್ಮ ಚೊಚ್ಚಲ ಭಾರತೀಯ ತಂಡದ ಕ್ಯಾಪ್ (ಟೋಪಿ) ಸ್ವೀಕರಿಸಿದರು. ದೇಶಿ ಕ್ರಿಕೆಟ್‌ನಲ್ಲಿ ಪಂಜಾಬ್ ಪರ ಮತ್ತು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ನಮನ್ ಧೀರ್ ಅತ್ಯುತ್ತಮ ಪ್ರದರ್ಶನ ತೋರಿದ್ದರು.
ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೇಲಿದ್ದು, ಅವರಿಬ್ಬರ ಪ್ರದರ್ಶನ ವಿಶ್ವಕಪ್ ದೃಷ್ಟಿಯಿಂದ ಭಾರತಕ್ಕೆ ಮಹತ್ವದೆನಿಸಿದೆ. ಈ ವರ್ಷ ಆಡಿರುವ 3 ಏಕದಿನ ಸರಣಿಗಳಲ್ಲಿ 2ರಲ್ಲಿ ಸೋತಿರುವ ಭಾರತದ ಮೇಲೆ ಒತ್ತಡವಿದೆ. ನಾಯಕ ಶುಭ್‌ಮನ್ ಗಿಲ್ ಕೆಲ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ.
ಸ್ಕ್ವಾಷ್ನಲ್ಲಿ ಬೆಳ್ಳಿ ಗೆದ್ದ ಅಭಯ್ ಸಿಂಗ್; ಒಲಿಂಪಿಕ್ಸ್ಗೆ ನೇರ ಅರ್ಹತೆ ಮಿಸ್
ಏಷ್ಯಾಡ್ ತಂಡದಲ್ಲಿರುವ ಶ್ರೇಯಸ್ ಅಯ್ಯರ್, ಜಸ್‌ಪ್ರೀತ್ ಬುಮ್ರಾ ಗೈರಿನಲ್ಲಿ ಆಡುತ್ತಿದೆ. ಕನ್ನಡಿಗ ಪ್ರಸಿದ್ಧ ಕೃಷ್ಣ, ಮೊಹಮದ್ ಸಿರಾಜ್ ಸಂಪೂರ್ಣ ಬೌಲಿಂಗ್ ಹೊಣೆ ಹೊತ್ತಿದ್ದಾರೆ. ಹಾರ್ದಿಕ್, ಅಕ್ಷರ್ ಗೈರಿನಲ್ಲಿ ನಿತೀಶ್ ಕುಮಾರ್ ರೆಡ್ಡಿ ವೇಗದ ಬೌಲಿಂಗ್ ಆಲ್ರೌಂಡರ್ ಸ್ಥಾನ ತುಂಬಲಿದ್ದಾರೆ.
#TeamIndia's Playing XI that will take the field today 🙌
— BCCI (@BCCI) September 27, 2026
Updates ▶️ https://t.co/O2cs86p4gq#INDvWI pic.twitter.com/JBXg1CJXoC
ಟೀಮ್ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 24 ವರ್ಷಗಳಿಂದ ಅಜೇಯವಾಗಿದೆ. ವಿಂಡೀಸ್ ತಂಡ 2002ರಲ್ಲಿ ಕೊನೆಯದಾಗಿ ಕಾರ್ಲ್ ಹೂಪರ್ ಸಾರಥ್ಯದಲ್ಲಿ ಭಾರತದಲ್ಲಿ ಏಕದಿನ ಸರಣಿ ಗೆದ್ದಿತ್ತು.
ಉಭಯ ಆಡುವ ಬಳಗ
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್(ನಾಯಕ), ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್(ವಿ.ಕೀ.), ನಮನ್ ಧೀರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಗುರ್ನೂರ್ ಬ್ರಾರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.
ವೆಸ್ಟ್ ವಿಂಡೀಸ್: ಜಾನ್ ಕ್ಯಾಂಪ್‌ಬೆಲ್, ಜಸ್ಟಿನ್ ಗ್ರೀವ್ಸ್, ಕೀಸಿ ಕಾರ್ಟಿ, ಶಾಯ್ ಹೋಪ್ (ವಿಕೆಟ್ ಕೀಪರ್/ನಾಯಕ), ಅಮೀರ್ ಜಂಗೂ, ಜುವೆಲ್ ಆಂಡ್ರ್ಯೂ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಗುಡಕೇಶ್ ಮೋಟಿ, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್.