Hari Paraak Column: ಸಿನಿಮಾದಲ್ಲಿ ಕ್ಯಾನ್ ಕಾಣಿಸ್ತಾ ? Cannes ಫಿಲ್ಮ್ ಫೆಸ್ಟಿವಲ್‌ಗೆ ಕಳ್ಸಿ
ಕಾಂತಾರ ಚಾಪ್ಟರ್-1’ ಚಿತ್ರ ಹಿಟ್ ಆದ ತಕ್ಷಣ ಕನ್ನಡ ಚಿತ್ರರಂಗದ ಹಣೆಬರಹವೇ ಬದಲಾಗಿದೆ ಅಂತೇನೂ ಇಲ್ಲ. ಮಾಮೂಲಿ ಲೋ ಬಜೆಟ್, ಹೊಸಬರ ಚಿತ್ರಗಳ ಪಾಡು ಹಾಗೇ ಇದೆ. ಜನ ಚಿತ್ರಮಂದಿರಗಳಿಗೆ ಬರ್ತಾ ಇಲ್ಲ ಅನ್ನೋ ಈ ಕಾಲದಲ್ಲಿ, ಸಿನಿಮಾರಂಗ ವಿಭಿನ್ನ ತಂತ್ರಗಳ ಮೂಲಕ ಜನರನ್ನು ಸಿನಿಮಾ ಲೋಕಕ್ಕೆ ಮತ್ತೆ ಕರೆತರುವ ಪ್ರಯತ್ನ ಮಾಡುತ್ತಿದೆ.

-

ತುಂಟರಗಾಳಿ
ಸಿನಿಗನ್ನಡ
ಕಾಂತಾರ ಚಾಪ್ಟರ್-1’ ಚಿತ್ರ ಹಿಟ್ ಆದ ತಕ್ಷಣ ಕನ್ನಡ ಚಿತ್ರರಂಗದ ಹಣೆಬರಹವೇ ಬದಲಾಗಿದೆ ಅಂತೇನೂ ಇಲ್ಲ. ಮಾಮೂಲಿ ಲೋ ಬಜೆಟ್, ಹೊಸಬರ ಚಿತ್ರಗಳ ಪಾಡು ಹಾಗೇ ಇದೆ. ಜನ ಚಿತ್ರಮಂದಿರಗಳಿಗೆ ಬರ್ತಾ ಇಲ್ಲ ಅನ್ನೋ ಈ ಕಾಲದಲ್ಲಿ, ಸಿನಿಮಾರಂಗ ವಿಭಿನ್ನ ತಂತ್ರಗಳ ಮೂಲಕ ಜನರನ್ನು ಸಿನಿಮಾ ಲೋಕಕ್ಕೆ ಮತ್ತೆ ಕರೆ ತರುವ ಪ್ರಯತ್ನ ಮಾಡುತ್ತಿದೆ.
ಜನರನ್ನು ದುಡ್ಡು ಕೊಟ್ಟು ಕರೆ ತಂದು, ಅವರಿಗೆ ಎಕ್ಸ್‌ಟ್ರಾ ಕಾಸು ಕೊಟ್ಟು, ಸ್ನ್ಯಾಕ್ಸ್ ಕೊಟ್ಟು ಬಲವಂತ ವಾಗಿ ಚಿತ್ರಮಂದಿರದಲ್ಲಿ ಕೂರಿಸೋ ಟ್ರೆಂಡ್ ಈಗ ಇದೆ. ಇದರ ಪ್ರಕಾರ ಅವರೆ ಸಿನಿಮಾ ಮುಗಿದ ತಕ್ಷಣ ಹೊರಗೆ ಬಂದು ಟಿವಿ ಚಾನಲ್ ಮತ್ತು ಯೂಟ್ಯೂಬ್ ಚಾನಲ್‌ಗಳ ಮೈಕ್ ಮುಂದೆ ‘100 ಡೇಸ್ ಗ್ಯಾರಂಟಿ, ಸೂಪರ್‌ಹಿಟ್ ಸಿನಿಮಾ’ ಅಂತ ಘೋಷಣೆ ಮಾಡಿ ಮನೆಗೆ ಹೋಗೋ ದಾರಿಯಲ್ಲಿ ಒಂದು ಕ್ವಾರ್ಟರ್ ಬಿಟ್ಕೊಂಡ್ ಹೋಗ್ತಾರೆ.
ಆದ್ರೆ ಅದೇ ಸಿನಿಮಾಗೆ ಒಂದು ಶೋ ಬಿಟ್ಕೊಂಡ್ ಹೋದ್ರೆ ಅಲ್ಲಿ ಜನನೇ ಇರಲ್ಲ. ಆದರೆ ಇಂಥದ್ದೆಲ್ಲ ಗಿಮಿಕ್ ಬೇಡ ಅಂತ ಇತ್ತೀಚೆಗೆ ಒಂದು ಚಿತ್ರದ - ಹಾಫ್ ಫ್ರೀ, ಸಿನಿಮಾ ಇಷ್ಟ ಆದ್ರೆ ಸೆಕೆಂಡ್ ಹಾಫ್ ನೋಡೋಕೆ ಒಳಗೆ ಹೋಗುವಾಗ ಟಿಕೆಟ್ ತಗೊಳ್ಳಿ ಅಂತ ಆಫರ್ ಬಿಟ್ಟಿದ್ದರು. ಇದನ್ನ ನೋಡಿದ್ರೆ, ಒಂದು ನಾಟಕ ಕಂಪನಿಯ ಹಳೇ ಜೋಕು ನೆನಪಾಗುತ್ತೆ. ನಾಟಕ ಚೆನ್ನಾಗಿಲ್ಲ ಅಂತ ಜನ ಬರದೇ ಇದ್ದಾಗ, ಅದರ ಮಾಲೀಕ ಎಂಟ್ರಿ ಫ್ರೀ ಅಂತ ಮಾಡಿದನಂತೆ. ಆ ನಾಟಕ ಎಲ್ಲಾ ಕೆಟ್ಟದಾಗಿತ್ತು ಅಂತ ಅವನಿಗೂ ಗೊತ್ತಿತ್ತು.
ಇದನ್ನೂ ಓದಿ: Hari Paraak Column: ಹೊಸ ರೀತಿಯ ಬರಹಗಾರ: ನ್ಯೂ ಟೈಪ್ -ರೈಟರ್
ಹಾಗಾಗಿ, ಜನ ಥಿಯೇಟರ್ ಒಳಗೆ ಹೋದ ಮೇಲೆ ಅಲ್ಲಿಂದ ಅರ್ಧಕ್ಕೇ ಎದ್ದು ಹೋಗಬೇಕು ಅಂದ್ರೆ ಮಾತ್ರ ಸಾವಿರ ರುಪಾಯಿ ಕೊಡಬೇಕು ಅಂತ ರೂಲ್ ಮಾಡಿದ್ನಂತೆ. ಈ ಚಿತ್ರದ ಕಥೆಯೂ ಒಂಥರಾ ಆ ನಾಟಕದ ಕಥೆಗೆ ತೀರಾ ಹತ್ತಿರವಾಗಿದೆ ಅಂತ ಅನಿಸಿದರೆ ಸುಳ್ಳಲ್ಲ ಬಿಡಿ.
ಲೂಸ್ ಟಾಕ್ - ರಿಷಬ್ ಶೆಟ್ಟಿ
ಸೀನ್‌ನಲ್ಲಿ ವಾಟರ್ ಕ್ಯಾನ್ ಕಾಣಿಸ್ತು ಅನ್ನೋ ವಿಷಯ ಇಟ್ಕೊಂಡು ಕೆಲವರು ನಿಮ್ಮ ಕಾಲು ಎಳಿತಾ ಇದ್ದಾರೆ. ಈ ವಿಷಯದಿಂದ ಕಾಂತಾರದ ಸಕ್ಸಸ್‌ನ ಕ್ರೇಜ್ ಕಮ್ಮಿ ಮಾಡೋಕೆ ಆಗುತ್ತಾ?
- A water 'can', 'cant' do it
ಆದ್ರೂ ಅಂಥ ತಪ್ಪು ಸಿನಿಮಾದಲ್ಲಿ ಆಗಬಾರದಿತ್ತು ಅಲ್ವಾ?
- ರೀ, ಊಟ ಮಾಡೋ ದೃಶ್ಯದಲ್ಲಿ ನೀರಿನ ಕ್ಯಾನ್ ಕಾಣದೆ ಇನ್ನೇನ್ ಕಾಣಿಸಬೇಕು.
ಆದ್ರೂ ಆಗಿನ ಕಾಲದ ಕಥೆ ಇರೋ ಸಿನಿಮಾದಲ್ಲಿ ಪ್ಲಾಸ್ಟಿಕ್ ಕ್ಯಾನ್ ಕಾಣ್ಸೋದು ಅಂದ್ರೆ
- 'Can'dle light dinner ಥರ ಇರ್ಲಿ ಅಂತ ನಾವೇ ಇಟ್ಟಿದ್ವಿ.
ಶೆಟ್ರೇ, ಸೀರಿಯಸ್ಸಾಗಿ ಕೇಳ್ತಾ ಇದ್ದೀನಿ ಉತ್ತರ ಹೇಳ್ರೀ..
- ಅಯ್ಯೋ, ಅದು ಸಿನಿಮಾಗೆ ಹಣನ ನೀರಿನ್ ಥರ ಖರ್ಚು ಮಾಡಿದ್ದೀವಿ ಅಂತ ಸಿಂಬಾಲಿಕ್ ಆಗಿ ಹೇಳಿರೋದು ಕಣ್ರೀ.
ರಿಷಬ್ ಶೆಟ್ರು ಸೀರಿಯಸ್ಸಾಗಲ್ಲ ಬಿಡಿ. ಹೋಗ್ಲಿ, ಈಗ ಏನ್ ಮಾಡ್ಬೇಕು ಅಂತಿದ್ದೀರಾ?
- ಹೌದು. ನಮ್ ಸಿನಿಮಾದಲ್ಲಿ ಕ್ಯಾನ್ ಕಾಣಿಸಿದೆ. ಅದಕ್ಕೆ ಸಿನಿಮಾನ Cannes ಫಿಲ್ಮ್ ಫೆಸ್ಟಿವಲ್‌ಗೆ ಕಳ್ಸೋಣ ಅಂತಿದ್ದೀನಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಆಂಡ್ ಫ್ಯಾಮಿಲಿ ಅಂದ್ರೆ ಖೇಮುಶ್ರೀ, ಮರಿ ಖೇಮು, ಅವರ ಜತೆಗೆ ಖೇಮುವಿನ ಅಜ್ಜ-ಅಜ್ಜಿ ದುಬೈಗೆ ಹೋಗಿ ಸೆಟಲ್ ಆದ್ರು. ಅವರ ಉಳಿದ ಸಂಬಂಧಿಕರೆ ಇಂಡಿಯಾದ ಇದ್ರು. ದುಬೈನ ಹವಾಮಾನ ಒಗ್ಗದೆ ಅಜ್ಜಿಗೆ ಅನಾರೋಗ್ಯ ಕಾಡತೊಡಗಿತು. ಎಷ್ಟೇ ಪ್ರಯತ್ನ ಪಟ್ಟರೂ ಅಜ್ಜಿ ಯನ್ನು ಉಳಿಸಿಕೊಳ್ಳಲಾಗಲಿಲ್ಲ. ಅಜ್ಜಿ ತೀರಿಹೋದ ಸುದ್ದಿಯನ್ನು ಇಂಡಿಯಾದಲ್ಲಿದ್ದ ಸಂಬಂಧಿಕ ರಿಗೆ ಮುಟ್ಟಿಸಿದ ಖೇಮು “ಅಜ್ಜಿಯ ಆಸೆಯಂತೆ ಅವಳನ್ನು ನಮ್ಮ ಹುಟ್ಟೂರ ಮಣ್ಣು ಮಾಡಬೇಕು.
ಹಾಗಾಗಿ ಆಕೆಯ ಬಾಡಿಯನ್ನು ಇಲ್ಲಿಂದ ಕಳಿಸುತ್ತೇನೆ" ಎಂದು ಹೇಳಿದ. ಸರಿ ದುಬೈನಿಂದ ಅಜ್ಜಿಯ ದೇಹ ಕಫಿನ್ ಬಾಕ್ಸ್‌ನಲ್ಲಿ ಇಂಡಿಯಾಗೆ ಬಂತು. ಸಂಬಂಧಿಕರು ಅದನ್ನು ಮನೆಗೆ ತಂದರು. ಬಾಕ್ಸ್ ಓಪನ್ ಮಾಡಿದರೆ ಅದರಂದು ಲೆಟರ್ ಇತ್ತು. ಅದರಲ್ಲಿ ಖೇಮು ಹೀಗೆ ಬರೆದಿದ್ದ. “ನೋಡಿ, ಅಜ್ಜಿಯ ಕೊರಳಲ್ಲಿ 2-3 ಬಂಗಾರದ ಸರಗಳಿವೆ. ಅವನ್ನು ಎಲ್ಲ ಹೆಣ್ಣುಮಕ್ಕಳೂ ಸಮನಾಗಿ ಹಂಚಿಕೊಳ್ಳಿ.
ಜತೆಗೆ ಕೈಯಲ್ಲಿ ಬಳೆಗಳೂ ಇವೆ, ಅವನ್ನೂ ಅಷ್ಟೆ. ಇನ್ನು ಚಿಂಟು ರೀಬಾಕ್ ಶೂ ಬೇಕಂತ ಹೇಳಿದ್ದ ಅದನ್ನು ಅಜ್ಜಿಯ ಕಾಲಿಗೆ ಹಾಕಿ ಕಳಿಸಿದ್ದೇನೆ. ಅಜ್ಜಿಯ ಕೈಯಲ್ಲಿ ರ‍್ಯಾಡೋ ವಾಚ್ ಇದೆ, ಅದನ್ನು ಪಿಂಟುಗೆ ಕೊಡಿ. ಅಜ್ಜಿ ಉಟ್ಟುಕೊಂಡಿರುವ ಸೀರೆ ತುಂಬಾ ಕಾಸ್ಟ್ಲಿ. ಅದನ್ನು ರೇವತಿಗೆ ಕೊಡಿ. ಕೈ ಬೆರಳಲ್ಲಿರೋ ವಜ್ರದ ಉಂಗುರವನ್ನು ನಮ್ಮ ಸುಮತಿಗೆ ಕೊಡಿ. ಇನ್ನೊಂದು ಮುಖ್ಯ ವಿಷಯ. ಯಾರಿಗಾದರೂ ಇನ್ನೇನಾದರೂ ಬೇಕಿದ್ದರೆ ಈಗಲೇ ಹೇಳಿಬಿಡಿ.... ಯಾಕೋ ಇತ್ತೀಚೆಗೆ ಅಜ್ಜನಿಗೂ ಹುಷಾರಿಲ್ಲ!".
ಲೈನ್‌ಮ್ಯಾನ್
ದುಡ್ ಸಮಾಚಾರ
- ಹತ್ ರುಪಾಯಿ ‘ಚೇಂಜ್’ ಇದ್ರೆ ಕೊಡೋ ಅಂತ ಸ್ನೇಹಿತರನ್ನ ಕೇಳುವಾಗ, ಜೇಬಲ್ಲಿ ಮಿನಿಮಮ್ 20 ರುಪಾಯಿ ನೋಟ್ ಆದ್ರೂ ಇರಬೇಕು. ಇಲ್ಲ ಅಂದ್ರೆ 10 ರೂಪಾಯಿ ‘ದುಡ್’ ಕೊಡೋ ಅಂತ ಕೇಳ್ಬೇಕು. ಎರಡಕ್ಕೂ ವ್ಯತ್ಯಾಸ ಇದೆ.
ಜಗತ್ತಿನ 5 ಅತಿ ಬೋರಿಂಗ್ ವಿಷಯಗಳು
- ನಾಲ್ಕು ಗೋಡೆ ಮತ್ತು ಚಾವಣಿ
ಅಮ್ಮಂದಿರ ಸಮ್ಮೇಳನ ನಡೆದರೆ ಅದಕ್ಕೆ ಬರುವ ತಾಯಂದಿರ ಗುಂಪನ್ನು ಏನಂತಾರೆ?
- ‘ಮಾ’ಬ್
ನಾಯಿಗಳಿಗೆ ಇಷ್ಟವಾಗುವ, ಇಲಿಗಳಿಗೆ ಇಷ್ಟವಾಗದ ವ್ಯಕ್ತಿ
- ‘ಬೋನಿ’ ಕಪೂರ್
ಬೆಲೆ ಬಾಳುವ ಮುತ್ತುಗಳನ್ನು ಬಚ್ಚಿಡುವ ಜಾಗ
- ಲಿಪ್ ಲಾಕರ್
ಬರೀ ಇನ್‌ಕಮಿಂಗ್ ಕಾಲ್‌ಗೋಸ್ಕರ ಇಟ್ಕೊಂಡಿರೋ ಮೊಬೈಲ್ ಪೋನ್
- ‘ಹಿಯರ್’ ಫೋನ್
ರೈಲ್ವೆ ಇಲಾಖೆಯಲ್ಲಿ ನೀಡುವ ತರಬೇತಿ
- ‘ಟ್ರೈನಿಂ’ಗ್
ಓಟ್ ಹಾಕಲಿ ಅಂತ ಹಾಕಿಸುವ ಊಟಕ್ಕೆ ಏನಂತಾರೆ?
- ಓಟ್ ಮೀಲ್ಸ್
ಪೋಲೋಗೆ ವಿರುದ್ಧಾರ್ಥಕ ಪದ ಏನು?
- ಪೋಗಾದಿರೆಲೋ
ಮನೇಲ್ ಕೂತು ಬರೀ ಸಿನಿಮಾ ನೋಡುವವರ ಪಾಲಿಗೆ
Everyday is Friday