ನ್ಯೂಜಿಲೆಂಡ್ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ಕೆ.ಎಲ್. ರಾಹುಲ್
KL Rahul: ರಾಹುಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (WTC) ಒಂದೇ ಆವೃತ್ತಿಯಲ್ಲಿ ಸಾವಿರ ಅಥವಾ ಅದಕ್ಕಿಂತ ಹೆಚ್ಚು ರನ್ಗಳನ್ನು ಗಳಿಸಿದ ಐದನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಈ ಮೈಲಿಗಲ್ಲನ್ನು ತಲುಪಲು 69 ರನ್ಗಳ ಅಗತ್ಯವಿತ್ತು.
KL Rahul -
ವೆಲ್ಲಿಂಗ್ಟನ್, ನ.21: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು, ಭಾರತೀಯ ಬ್ಯಾಟರ್ ಕೆ.ಎಲ್. ರಾಹುಲ್ ತಮ್ಮ 13ನೇ ಟೆಸ್ಟ್ ಶತಕವನ್ನು ಪೂರೈಸುವ ಮೂಲಕ ತಂಡವನ್ನು ಬಲವಾದ ಸ್ಥಿತಿಯಲ್ಲಿ ನಿಲ್ಲಿಸಿದರು. ಬಲಗೈ ಬ್ಯಾಟರ್ ಆದ ಅವರು, ಅತ್ಯುತ್ತಮ ಕೌಶಲ ಮತ್ತು ತಾಳ್ಮೆಯನ್ನು ಪ್ರದರ್ಶಿಸಿ, 207 ಎಸೆತಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಶತಕವನ್ನು ದಾಖಲಿಸಿದರು. ಜತೆಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದರು.
ರಾಹುಲ್ ತಮ್ಮ ಇನ್ನಿಂಗ್ಸ್ನ ಆರಂಭದಲ್ಲಿ ಕೆಲವು ಕಠಿಣ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ಆದರೆ ಒಮ್ಮೆ ಕ್ರೀಸ್ನಲ್ಲಿ ನೆಲೆನಿಂತ ನಂತರ, ಬೌಲರ್ಗಳ ತಾಳ್ಮೆ ಪರೀಕ್ಷಿಸಿದರು. ಕ್ಲಾಸ್ ಹೊಡೆತಗಳ ಮೂಲಕ ಮಿಂಚಿದರು. 9 ಬೌಂಡರಿಗಳು ಮತ್ತು 2 ಸಿಕ್ಸರ್ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರೈಸಿದರು. ಇದರೊಂದಿಗೆ, ಎಲ್ಲಾ ಸೆನಾ (SENA) ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ಟೆಸ್ಟ್ ಶತಕ ದಾಖಲಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಶತಕ ಬಾರಿಸಿದ ಒಟ್ಟಾರೆ 13ನೇ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಕೆ.ಎಲ್. ರಾಹುಲ್ ತಮ್ಮದಾಗಿಸಿಕೊಂಡರು.
KL Rahul brings up his 1️⃣3️⃣th Test century with effortless poise! 🫡 Watch the HERO VIDA India Tour of New Zealand, 1st Test Day 3, LIVE NOW on Sony Sports Network TV channels & Sony LIV. #SonySportsNetwork #SonyLIV #NZvIND https://t.co/DFjoY1c4En
— Sony Sports Network (@SonySportsNetwk) November 21, 2026
ಸಚಿನ್, ದ್ರಾವಿಡ್ ಜತೆ ಎಲೈಟ್ ಪಟ್ಟಿ ಸೇರಿದ ರಾಹುಲ್
ಶತಕದೊಂದಿಗೆ, ಕೆಎಲ್ ರಾಹುಲ್ ಈಗ ಪ್ರತಿ ಸೆನಾ ರಾಷ್ಟ್ರದಲ್ಲೂ ಶತಕ ಗಳಿಸಿದ ಭಾರತೀಯರ ಗಣ್ಯರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ಧೀನ್ ಮತ್ತು ವಿರಾಟ್ ಕೊಹ್ಲಿ ಜತೆ ಎಲೈಟ್ ಪಟ್ಟಿ ಸೇರಿದರು. ಸೆನಾ ದೇಶಗಳಲ್ಲಿ ಭಾರತಕ್ಕಾಗಿ 8 ಟೆಸ್ಟ್ ಶತಕಗಳನ್ನು ಬಾರಿಸುವ ಮೂಲಕ ಕೆ.ಎಲ್. ರಾಹುಲ್, ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ದಾಖಲೆ ಸಚಿನ್ ಹೆಸರಿನಲ್ಲಿದೆ. ಅವರು 17 ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ(12), ರಾಹುಲ್ ದ್ರಾವಿಡ್(10) ನಂತರದ ಸ್ಥಾನದಲ್ಲಿದ್ದಾರೆ.
94 ವರ್ಷಗಳಲ್ಲಿ ಇದೇ ಮೊದಲು!; ವಿದೇಶಿ ಟೆಸ್ಟ್ ಪಂದ್ಯದಲ್ಲಿ ಸಾಧನೆಗೈದ ಭಾರತೀಯ ಬ್ಯಾಟರ್ಗಳು
ಗವಾಸ್ಕರ್ ದಾಖಲೆ ಸರಿಗಟ್ಟಿದ ರಾಹುಲ್
ನ್ಯೂಜಿಲೆಂಡ್ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ಸುನಿಲ್ ಗವಾಸ್ಕರ್ ಮತ್ತು ಸುರಿಂದರ್ ಅಮರ್ನಾಥ್ ನಂತರದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾದರು. ಗವಾಸ್ಕರ್ ಮತ್ತು ಅಮರ್ನಾಥ್ 1976ರಲ್ಲಿ ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು ಮತ್ತು ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ ಕ್ರಮವಾಗಿ 116 ಹಾಗೂ 124 ರನ್ಗಳನ್ನು ಗಳಿಸಿದ್ದರು.
Cometh a big challenge, cometh a 𝙆𝙇 𝙍𝙖𝙝𝙪𝙡 𝙨𝙥𝙚𝙘𝙞𝙖𝙡 🫡 #TeamIndia | #NZvIND | @klrahul https://t.co/PVan8Q48ty
— BCCI (@BCCI) November 21, 2026
ಒಂದು ಸಾವಿರ ರನ್...
ರಾಹುಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (WTC) ಒಂದೇ ಆವೃತ್ತಿಯಲ್ಲಿ ಸಾವಿರ ಅಥವಾ ಅದಕ್ಕಿಂತ ಹೆಚ್ಚು ರನ್ಗಳನ್ನು ಗಳಿಸಿದ ಐದನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಈ ಮೈಲಿಗಲ್ಲನ್ನು ತಲುಪಲು 69 ರನ್ಗಳ ಅಗತ್ಯವಿತ್ತು.
ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ಈ ನಾಲ್ಕೂ ದೇಶಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಭಾರತೀಯ ಆರಂಭಿಕ ಬ್ಯಾಟರ್ (ಓಪನರ್) ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾದರು.