'ಪಂದ್ಯ ಮುಗಿಯಿತು, ಈಗ ನೀನು...'; ವೈಭವ್ ಸೂರ್ಯವಂಶಿ ಕೋಪಕ್ಕೆ ಇದುವೇ ಕಾರಣ!
Vaibhav Sooryavanshi: ಸೂಪರ್ ಓವರ್‌ನಲ್ಲಿ ಅರ್ಷದ್ ಅವರು ದುಬಾರಿಯಾಗಿ 16 ರನ್ ನೀಡಿದರು. ಲಂಕಾ ಪರ ಮಥುಲನ್ ಅವರು ಒತ್ತಡದಲ್ಲೂ ಸಂಯಮ ವಹಿಸಿ ಬೌಲಿಂಗ್ ಮಾಡಿದರಲ್ಲದೇ, ವೈಭವ್ ಮತ್ತು ಸೂರ್ಯಾಂಶ್ ಅಬ್ಬರಿಸದಂತೆ ನೋಡಿಕೊಂಡರು. ಇವರಿಬ್ಬರು 9 ರನ್‌ಗಳನ್ನಷ್ಟೇ ಗಳಿಸಲು ಶಕ್ತರಾದರು.
Vaibhav Sooryavanshi -
ದಂಬುಲ್ಲಾ, ಜೂ.16: ಸೋಮವಾರ ನಡೆದಿದ್ದ ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವಿನ ತ್ರಿಕೋನ ಸರಣಿಯ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi) ಲಂಕಾದ ಬೌಲರ್ ಮಥುಲನ್ ಮೇಲೆ ಹಲ್ಲೆಗೆ ಮುಂದಾದ ಘಟನೆ ಭಾರೀ ಸದ್ದು ಮಾಡುತ್ತಿದೆ. ಆದರೆ ಇದೀಗ ತಪ್ಪು ಸೂರ್ಯವಂಶಿಯದಲ್ಲ ಎಂಬ ವರದಿಯೊಂದು ಹೊರಬಿದ್ದಿದೆ. ಮಾತ್ರವಲ್ಲದೆ ಸೂರ್ಯವಂಶಿ ಕೆರಳಲು ಕಾರಣ ಏನೆಂಬುವುದು ಬಹಿರಂಗವಾಗಿದೆ.
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಶ್ರೀಲಂಕಾ ಎ ತಂಡದ ಆಟಗಾರ ವಿಶೆನ್ ಹಲಂಬಗೆ ಸೂರ್ಯವಂಶಿಗೆ "ಪಂದ್ಯ ಮುಗಿದಿದೆ... ಈಗ ನೀವು ಮನೆಗೆ ಹೋಗಿ..." ಎಂದು ಹೇಳಿದಾಗ ಭಾರತೀಯ ಬ್ಯಾಟ್ಸ್‌ಮನ್ ಕೋಪಗೊಂಡರು ಎನ್ನಲಾಗಿದೆ. ಪಂದ್ಯ ಮುಗಿದು ಶೆಡ್ಗೆ ಜೊತೆ ಪೆವಿಲಿಯನ್‌ನತ್ತಸಾಗುತ್ತಿದ್ದ ಸೂರ್ಯವಂಶಿ ಪ್ರಚೋದನೆಯಿಂದ ಕೋಪಗೊಂಡು ಬೌಲರ್ ಮಥುಲನ್ ಕಡೆ ನುಗ್ಗಿದರು. ಈ ವೇಳೆ ಶ್ರೀಲಂಕಾದ ಅನುಭವಿ ಆಟಗಾರ ನಿರೋಶನ್ ಡಿಕ್ವೆಲ್ಲಾ ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡರು.
ಶ್ರೀಲಂಕಾ ಎ ಆಟಗಾರನನ್ನು ತಳ್ಳಿದ ವೈಭವ್ ಸೂರ್ಯವಂಶಿ, ಸೂಪರ್ ಓವರ್ ಬಳಿಕ ಹೈಡ್ರಾಮಾ!
ಗಮನಾರ್ಹವಾಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 'ಎ' ಸರಣಿಯ ಪಂದ್ಯಗಳಿಗೆ ಅಧಿಕಾರಿಗಳನ್ನು ನೇಮಿಸುವುದಿಲ್ಲ ಅಥವಾ ಅಂತಹ ಪಂದ್ಯಗಳಿಗೆ ಸಂಬಂಧಿಸಿದ ಶಿಸ್ತಿನ ವಿಷಯಗಳನ್ನು ನೋಡಿಕೊಳ್ಳುವುದಿಲ್ಲ. ಹೀಗಾಗಿ ಸೂರ್ಯವಂಶಿ ಶಿಕ್ಷೆಯಿಂದ ಪಾರಾಗಿದ್ದಾರೆ. ಈ ಘಟನೆಯ ಬಗ್ಗೆ ಶ್ರೀಲಂಕಾ ಎ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಚರ್ಚಿಸಲಾಗಿದ್ದು, ಭಾರತೀಯ ತಂಡಕ್ಕೆ ಕ್ಷಮೆಯಾಚಿಸಬಹುದು ಎಂದು ಸೂಚಿಸಲಾಗಿದೆ ಎಂದು ಪ್ರಕಟಣೆ ವರದಿ ಮಾಡಿದೆ. ಇಂತಹ ಪಂದ್ಯವನ್ನು ನಡೆಸಲು ಸಾಕಷ್ಟು ಬೆಳಕು ಇಲ್ಲದಿದ್ದರೂ ಸೂಪರ್ ಓವರ್ ಮುಂದುವರಿಸಲು ಅವಕಾಶ ನೀಡಿದ್ದಕ್ಕಾಗಿ ಪಂದ್ಯದ ಅಧಿಕಾರಿಗಳನ್ನು ಸಹ ಟೀಕಿಸಲಾಗಿದೆ.
Dragging IPL in everything is not a good thing, these opponent team needs to learn asap. Yesterday Sri Lankan team acted like Pakistani's
— Fan Account Richard Kettlebourogh (@RichKettle07) June 16, 2026
Vaibhav Sooryavanshi responsed, but needs to keep it verbal, not physicalpic.twitter.com/YuPkrQMZyG
ಶ್ರೀಲಂಕಾ ಗೆಲುವಿಗೆ ಅಂತಿಮ ಓವರ್‌ನಲ್ಲಿ ಐದು ರನ್‌ಗಳು ಬೇಕಾಗಿದ್ದವು, ಆದರೆ ಅರ್ಷದ್ ಖಾನ್ ಕೇವಲ ನಾಲ್ಕು ರನ್‌ಗಳನ್ನು ಬಿಟ್ಟುಕೊಟ್ಟರು. ಭಾರತ ಎ ತಂಡವು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ನಂತರ ಪಂದ್ಯವು ಸೂಪರ್ ಓವರ್‌ಗೆ ಹೋಯಿತು, ಅದರಲ್ಲಿ ಶ್ರೀಲಂಕಾ ಎ ತಂಡ ಗೆದ್ದಿತು. ಸೂಪರ್ ಓವರ್‌ನಲ್ಲಿ ಸೂರ್ಯವಂಶಿ ಮೊದಲ ಎಸೆತ ಎದುರಿಸದಿದ್ದುದು ಕೂಡ ಆಶ್ಚರ್ಯಕ್ಕೆ ಕಾರಣವಾಯಿತು.
ಸೂಪರ್ ಓವರ್‌ನಲ್ಲಿ ಅರ್ಷದ್ ಅವರು ದುಬಾರಿಯಾಗಿ 16 ರನ್ ನೀಡಿದರು. ಲಂಕಾ ಪರ ಮಥುಲನ್ ಅವರು ಒತ್ತಡದಲ್ಲೂ ಸಂಯಮ ವಹಿಸಿ ಬೌಲಿಂಗ್ ಮಾಡಿದರಲ್ಲದೇ, ವೈಭವ್ ಮತ್ತು ಸೂರ್ಯಾಂಶ್ ಅಬ್ಬರಿಸದಂತೆ ನೋಡಿಕೊಂಡರು. ಇವರಿಬ್ಬರು 9 ರನ್‌ಗಳನ್ನಷ್ಟೇ ಗಳಿಸಲು ಶಕ್ತರಾದರು.