ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohammed Siraj: ಆಶಾ ಭೋಸ್ಲೆ ಮೊಮ್ಮಗಳ ಜತೆ ರಕ್ಷಾಬಂಧನ ಆಚರಿಸಿದ ಸಿರಾಜ್‌

ಖಾಸಗಿ ಜೀವನಕ್ಕೆ ತೊಂದರೆ ಮಾಡುವಂತ ಸುದ್ದಿಗಳು ತೀವ್ರ ಚರ್ಚೆಯಾಗುತ್ತಿದ್ದಂತೆ ಸಿರಾಜ್​, ಇದೆಲ್ಲ ಸುಳ್ಳು ಎಂದಿದ್ದರು. ಯಾವ ಫೋಟೋವನ್ನು ನೆಟ್ಟಿಗರು ಮುಂದಿಟ್ಟು ವದಂತಿಗಳನ್ನು ಹಬ್ಬಿಸುತ್ತಿದ್ದರೋ ಅದೇ ಫೋಟೋವನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದ ಜನೈ ಭೋಸ್ಲೆ, ಸಿರಾಜ್​ ನನ್ನ ಪ್ರೀತಿಯ ಸಹೋದರ ಎಂದು ಹೇಳಿದ್ದರು.

ಆಶಾ ಭೋಸ್ಲೆ ಮೊಮ್ಮಗಳಿಂದ ರಕ್ಷೆ ಕಟ್ಟಿಸಿಕೊಂಡ ಸಿರಾಜ್‌

Abhilash BC Abhilash BC Aug 10, 2025 4:59 PM

ಮುಂಬಯಿ: ಭ್ರಾತೃತ್ವ ಬೆಸೆಯುವ ಹಬ್ಬ ರಕ್ಷಾಬಂಧನವನ್ನು(Raksha Bandhan) ಶನಿವಾರ ಸಂಭ್ರಮ ಸಡಗರದಿಂದ ದೇಶಾದ್ಯಂತ ಆಚರಿಸಲಾಗಿತ್ತು. ಟೀಮ್‌ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಸಿರಾಜ್‌(Mohammed Siraj) ಅವರು ಗಾಯಕಿ ಆಶಾ ಭೋಸ್ಲೆ(Asha Bhosle) ಅವರ ಮೊಮ್ಮಗಳು ಜನೈ ಭೋಸ್ಲೆ(Zanai Bhosle) ಜತೆ ರಕ್ಷಾಬಂಧನ ಆಚರಿಸಿದರು. ಜನೈ ಭೋಸ್ಲೆ ಅವರು ಸಿರಾಜ್‌ಗೆ ರಕ್ಷೆ ಕಟ್ಟುವ ಮೂಲಕ ಭ್ರಾತೃತ್ವ ಸಂಬಂಧ ಸಾರುತ್ತ ಹಬ್ಬದ ಶುಭಾಶಯ ಕೋರಿದರು. ಜತೆಗೆ ಬ್ರಾಸ್ ಲೈಟ್ ಉಡುಗೊರೆಯಾಗಿ ನೀಡಿದರು. ಈ ಸುಂದರ ಕ್ಷಣದ ವಿಡಿಯೊವನ್ನು ಸಿರಾಜ್‌ ಮತ್ತು ಜನೈ ಭೋಸ್ಲೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದಾರೆ.

ಇದೇ ವರ್ಷದ ಆರಂಭದಲ್ಲಿ ಜನೈ ಭೋಸ್ಲೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ವೇಳೆ ಅವರು ಸಿರಾಜ್‌ ಜತೆಗಿರುವ ಫೋಟೊವನ್ನು ಕೂಡ ಹಂಚಿಕೊಂಡಿದ್ದರು. ಈ ಫೋಟೊ ಕಂಡ ನೆಟ್ಟಿಗರು ಸಿರಾಜ್ , ಜನೈ ಭೋಸ್ಲೆ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕಮೆಂಟ್​ ಹಾಕಿ, ಆ ವಿಷಯವನ್ನು ಕ್ಷಣಮಾತ್ರದಲ್ಲಿ ವೈರಲ್ ಮಾಡಿದ್ದರು.

ಖಾಸಗಿ ಜೀವನಕ್ಕೆ ತೊಂದರೆ ಮಾಡುವಂತ ಸುದ್ದಿಗಳು ತೀವ್ರ ಚರ್ಚೆಯಾಗುತ್ತಿದ್ದಂತೆ ಸಿರಾಜ್​, ಇದೆಲ್ಲ ಸುಳ್ಳು ಎಂದಿದ್ದರು. ಯಾವ ಫೋಟೋವನ್ನು ನೆಟ್ಟಿಗರು ಮುಂದಿಟ್ಟು ವದಂತಿಗಳನ್ನು ಹಬ್ಬಿಸುತ್ತಿದ್ದರೋ ಅದೇ ಫೋಟೋವನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದ ಜನೈ ಭೋಸ್ಲೆ, ಸಿರಾಜ್​ ನನ್ನ ಪ್ರೀತಿಯ ಸಹೋದರ ಎಂದು ಹೇಳಿದ್ದರು. ಇದೀಗ ಜನೈ ಭೋಸ್ಲೆ ಮತ್ತು ಸಿರಾಜ್‌ ರಕ್ಷಾಬಂಧನ ಆಚರಿಸಿದನ್ನು ಕಂಡು ಇನ್ನು ಮುಂದೆ ನೆಟ್ಟಿಗರು ಇವರ ಕುರಿತು ಯಾವುದೇ ನೆಗೆಟಿವ್‌ ಕಮೆಂಟ್‌ ಮಾಡುವುದನ್ನು ಕೈಬಿಡಬಹುದು.

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಸಿರಾಜ್‌ ಅಮೋಘ ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. 5 ಪಂದ್ಯಗಳಿಂದ 23 ವಿಕೆಟ್‌ ಉರುಳಿಸಿದ್ದರು.

ಇದನ್ನೂ ಓದಿ IND vs ENG: ಅರ್ಷದೀಪ್‌ ಸಿಂಗ್‌ ಬದಲು ಅನ್ಶುಲ್‌ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್‌ ಲಾಲ್‌ ಪ್ರಶ್ನೆ!