ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ; ರಚಿನ್ ರವೀಂದ್ರ ಅಲಭ್ಯ

New Zealand squad for India T20Is: ಟಿ20 ವಿಶ್ವಕಪ್ ಫೈನಲ್ ನಂತರ ಮೊದಲ ಬಾರಿಗೆ ಮುಖಾಮುಖಿಯಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು, ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿರುವ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೆಣಸಲಿವೆ.

ಭಾರತದ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

New Zealand squad for India T20Is -

Abhilash BC
Abhilash BC Sep 23, 2026 12:27 PM

ಆಕ್ಲೆಂಡ್‌, ಸೆ.23: ಭಾರತದ ವಿರುದ್ಧದ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ (T20I) ಸರಣಿಗಾಗಿ ನ್ಯೂಜಿಲೆಂಡ್ ಬುಧವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಲಿದ್ದು, ಕಳೆದ ವಾರ ಪ್ರಚಾರದ ಚಿತ್ರೀಕರಣದ ವೇಳೆ ಬಲ ಭುಜದ ಗಾಯಕ್ಕೆ ಒಳಗಾದ ರಚಿನ್ ರವೀಂದ್ರ ಅವರು ಈ ಸರಣಿಯಿಂದ ಹೊರಗುಳಿದಿದ್ದಾರೆ.

ರವೀಂದ್ರ ಅವರಿಗೆ ಕನಿಷ್ಠ ಆರು ವಾರಗಳ ಪುನಶ್ಚೇತನ ಪ್ರಕ್ರಿಯೆಯ ಅಗತ್ಯವಿರುತ್ತದೆ ಮತ್ತು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನವೆಂಬರ್ 4 ರಂದು ಆರಂಭವಾಗಲಿರುವ ಏಕದಿನ ಸರಣಿಗೆ ಅವರು ಫಿಟ್ ಆಗುವ ನಿರೀಕ್ಷೆಯಿದೆ ಎಂದು ಕಿವೀಸ್‌ ಕ್ರಿಕೆಟ್‌ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರವೀಂದ್ರ ಅವರ ಬದಲಿಯಾಗಿ ಬೆವನ್ ಜಾಕೋಬ್ಸ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಸ್ಕೀಟ್ ಶೂಟಿಂಗ್‌ನಲ್ಲಿ ಮತ್ತೊಂದು ಕಂಚು ಗೆದ್ದ ಭಾರತ; ಸಾಫ್ಟ್ ಟೆನ್ನಿಸ್‌ನಲ್ಲಿ ಜಯ್‌ಗೆ ಐತಿಹಾಸಿಕ ಕಂಚು

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ರನ್ನರ್-ಅಪ್ ಆಗಿ ಹೊರಹೊಮ್ಮಿದ ತಂಡದ 13 ಆಟಗಾರರು ತವರಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದ ಮೈಕೆಲ್ ಬ್ರೇಸ್‌ವೆಲ್ ಮತ್ತು ಆಡಮ್ ಮಿಲ್ನೆ ಕೂಡ ಸೇರಿದ್ದಾರೆ.

ಒಂದು ವರ್ಷಕ್ಕೂ ಹೆಚ್ಚು ಸಮಯದ ಹಿಂದೆ ಜಿಂಬಾಬ್ವೆ ವಿರುದ್ಧ ರಾಷ್ಟ್ರೀಯ ತಂಡಕ್ಕಾಗಿ ಕೊನೆಯದಾಗಿ ಆಡಿದ್ದ ಮಿಲ್ನ್, ತಂಡದಲ್ಲಿರುವ ಏಳು ವೇಗದ ಬೌಲರ್‌ಗಳ ಪೈಕಿ ಒಬ್ಬರಾಗಿದ್ದಾರೆ. ಈ ಗುಂಪಿನಲ್ಲಿ ಜಾಕೋಬ್ ಡಫಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಕೈಲ್ ಜೇಮಿಸನ್, ನಾಥನ್ ಸ್ಮಿತ್ ಮತ್ತು ಝಾಕ್ ಫೋಕ್ಸ್ ಕೂಡ ಸೇರಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಚೊಚ್ಚಲ ಪದಕ ಗೆದ್ದ ಮೀರಾಬಾಯಿ; ಬೆಳ್ಳಿ ಮೆರಗು

ಬ್ಯಾಟಿಂಗ್ ವಿಭಾಗದಲ್ಲಿ ಫಿನ್ ಅಲೆನ್, ಟಿಮ್ ಸೈಫರ್ಟ್ ಮತ್ತು ಡೆವೊನ್ ಕಾನ್ವೇ ಆರಂಭಿಕ ಆಟಗಾರರಾಗಿದ್ದರೆ, ಗ್ಲೆನ್ ಫಿಲಿಪ್ಸ್ ಮತ್ತು ಡೇರಿಲ್ ಮಿಚೆಲ್ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದಾರೆ.

ಟಿ20 ವಿಶ್ವಕಪ್ ಫೈನಲ್ ನಂತರ ಮೊದಲ ಬಾರಿಗೆ ಮುಖಾಮುಖಿಯಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು, ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿರುವ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೆಣಸಲಿವೆ.

ನ್ಯೂಜಿಲೆಂಡ್ ತಂಡ

ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವನ್ ಜಾಕೋಬ್ಸ್, ಕೈಲ್ ಜೇಮಿಸನ್, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್ ಮತ್ತು ನಾಥನ್ ಸ್ಮಿತ್.